ಸಂವಿಧಾನದ 16/4(ಎ) ಮತ್ತು 16/4(ಬಿ)ರಡಿಯಲ್ಲಿ ಬಡ್ತಿಯಲ್ಲಿ ಮೀಸಲಾತಿ ಮತ್ತು ತತ್ಪರಿಣಾಮದ ಜೇಷ್ಟತೆ ಬಿಡುಗಡೆ ಮಾಡಿದ್ದರು ಜಾರಿಗೆ ತರದ ಸರ್ಕಾರ.ದಲಿತ ವಿರೋಧಿ ಸರ್ಕಾರ,,,!!!

Listen to this article

ಸಂವಿಧಾನದ 16/4(ಎ) ಮತ್ತು 16/4(ಬಿ)ರಡಿಯಲ್ಲಿ ಬಡ್ತಿಯಲ್ಲಿ ಮೀಸಲಾತಿ ಮತ್ತು ತತ್ಪರಿಣಾಮದ ಜೇಷ್ಟತೆ ಬಿಡುಗಡೆ ಮಾಡಿದ್ದರು ಜಾರಿಗೆ ತರದ ಸರ್ಕಾರ.ದಲಿತ ವಿರೋಧಿ ಸರ್ಕಾರ,,,!!!

ಸಂವಿಧಾನದ 16/4(ಎ) ಮತ್ತು 16/4(ಬಿ)ರಡಿಯಲ್ಲಿ ಬಡ್ತಿಯಲ್ಲಿ ಮೀಸಲಾತಿ ಮತ್ತು ನಮ್ಮ ಹಕ್ಕಾಗಿದ್ದರೂ ಬಿ.ಕೆ ಪವಿತ್ರ ತೀರ್ಪು-1 ನಂತರ ರಾಜ್ಯ ಸರ್ಕಾರವು ಜೇಷ್ಟತೆ ಸಂರಕ್ಷಣಾ ಕಾಯ್ದೆ ರೂಪಿಸಿ ರಾಷ್ಟ್ರಪತಿಗಳಿಂದ ಅಂಕಿತ ಪಡೆದು.
ದಿನಾಂಕ: 23.06.2018ರಲ್ಲಿ ಪ್ರಕಟಿಸಿದ ನಂತರ ಸರ್ವೋಚ್ಛ ನ್ಯಾಯಾಲಯದಲ್ಲಿ

ದಿನಾಂಕ: 10.05.2019ರಂದು ನಮ್ಮ ಪರ ತೀರ್ಪು ಬಂದ ಕಾರಣ ರಾಜ್ಯ ಸರ್ಕಾರವು ದಿನಾಂಕ 15.05.2019ರಂದು ಆದೇಶ ಹೊರಡಿಸುವುದರ ಮೂಲಕ ಕಾಯ್ದೆ ಜಾರಿ ಮಾಡಲಾಗಿದೆ.

ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮೀಸಲಾತಿ ವಿರೋಧಿ ಅಧಿಕಾರಿಗಳಿಂದ ಕಾಯ್ದೆಯ ಪ್ರತಿಫಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ದೊರಕಬಾರದು ಎಂಬ ಉದ್ದೇಶದಿಂದ
ದಿನಾಂಕ: 24.06.2019
ರಂದು ತತ್ಪರಿಣಾಮದ ಜೇಷ್ಟತೆ ಹಾಗೂ 1978ರ ಬಡ್ತಿ ಮೀಸಲಾತಿ ಆದೇಶದಂತೆ ಶೇಕಡ 15+3ರಷ್ಟು ಪ್ರಾತಿನಿಧ್ಯ ದೊರಕದ ರೀತಿಯಲ್ಲಿ ಸುತ್ತೋಲೆ ಹೊರಡಿಸಿಅನ್ಯಾಯ ಮಾಡಲಾಗಿದೆ.
ಸದರಿ ಸುತ್ತೋಲೆಯನ್ನು 3 ಬಾರಿ ಆಡ್ವಕೇಟ್‌ ಜನರಲ್‌ ರವರು ವಾಪಸ್‌ ಪಡೆಯಲು ತಿಳಿಸಿದ್ದರೂ ಈವರೆವಿಗೂ ವಾಪಸ್‌ ಪಡೆದಿಲ್ಲ ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿ/ನೌಕರರಿಗೆ ಆಗಿರುವ ತೊಂದರೆಯನ್ನು ಅನುಬಂದ -01ರಲ್ಲಿ ನಮೂದಿಸಲಾಗಿದೆ.

ಹಿಂದಿನ ಸಮಾಜ ಕಲ್ಯಾಣ ಸಚಿವರು ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಂಡರು ಮೀಸಲಾತಿ ವಿರೋಧಿ ಅಧಿಕಾರಿಗಳು ಸದರಿ ನಿರ್ಣಯವನ್ನು ಜಾರಿ ಮಾಡದೇ ಅನ್ಯಾಯ ಮಾಡಿದ್ದಾರೆ ಹಾಗೂ
ದಿನಾಂಕ: 04.08.2021ರಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ತಪ್ಪು ಅಭಿಪ್ರಾಯ ನೀಡಿ ಮೀಸಲಾತಿ ವಂಚಿಸುವ ಕೆಲಸ ಮಾಡಿದ್ದಾರೆ,

ದಿನಾಂಕ: 06.09.2021ರ ಸುತ್ತೋಲೆಯಲ್ಲಿ 1978ರ ಮೀಸಲಾತಿ ಆದೇಶ ಪಾಲಿಸಲು ಸೂಚಿಸದೆ ವಂಚಿಸಲಾಗಿದೆ. ದಿನಾಂಕ: 06.11.2021ರ ಸುತ್ತೋಲೆಯಲ್ಲಿ ಪೂರ್ವಾನ್ವಯ ಪರಿಣಾಮ ಹೊಂದಿರುವುದಿಲ್ಲವೆಂದು 1978ರ ಮೀಸಲಾತಿ ಆದೇಶ 2015ರ ಬ್ಯಾಕ್‌ ಲಾಗ್‌ ಹುದ್ದೆ ತುಂಬುವ ಆದೇಶ,

ದಿನಾಂಕ: 23.06.2018ರ ಜೇಷ್ಟತೆ ಸಂರಕ್ಷಣಾ ಕಾಯ್ದೆ ಇಂದಿನಿಂದ ಅಂದರೆ
ದಿನಾಂಕ: 06.11.2021ರಿಂದ ಜಾರಿಗೆ ಬಂದಂತೆ ಸೂಚಿಸಲಾಗಿದೆ.
ಇದರಿಂದ ಎಸ್ಸಿ/ಎಸ್ಟಿ ಅಧಿಕಾರಿ ನೌಕರರಿಗೆ ಬಾರಿ ಅನ್ಯಾಯ ವಾಗುತ್ತದೆ. ಅಲ್ಲದೇ

ದಿನಾಂಕ: 10.12.2021ರಂದು ಹೊರಡಿಸಿರುವ ಪೋಸ್ಟ್‌ ಬೇಸ್ಡ್‌ ಮೀಸಲಾತಿ ಆದೇಶದಲ್ಲಿ 1978ರ ಮೀಸಲಾತಿ ಆದೇಶ ಹಾಗೂ ಬ್ಯಾಕ್‌ಲಾಗ್‌ ಹುದ್ದೆಗಳನ್ನು ತುಂಬುವ ಆದೇಶವನ್ನು ಪಾಲಿಸುವಂತೆ ಸೂಚಿಸದೇ ಮೀಸಲಾತಿಯಲ್ಲಿ ಮತ್ತೇ ಗೊಂದಲ ಉಂಟಾಗುವಂತೆ ಮಾಡಲಾಗಿದೆ ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಮನವಿಯನ್ನು ಸಿದ್ದಪಡಿಸಲಾಗಿದ್ದು, ಈಗಾಗಲೇ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು,
ಮಾನ್ಯ ಮಾಜಿ ಉಪ ಮುಖ್ಯಮಂತ್ರಿಗಳಾದ
ಡಾ: ಜಿ. ಪರಮೇಶ್ವರ್‌ ರವರು ಹಾಗೂ ಶ್ರೀ ಪ್ರಿಯಾಂಕ ಖರ್ಗೆರವರು ಮತ್ತು ಶ್ರೀ ರಮೇಶ್‌ ಕುಮಾರ್‌ ರವರು ಮುಂತಾದವರಿಗೆ ಈ ಮನವಿಯನ್ನು ತಲುಪಿಸಲಾಗಿದೆ.

ತಾವುಗಳು ತುರ್ತಾಗಿ ಮಾಡಬೇಕಾದ ಕೆಲಸಗಳೆಂದರೆ ಈ ಮನವಿಯನ್ನು ಪ್ರತಿ ತೆಗೆದು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಾಸಕರುಗಳಿಗೆ ನೀಡಿ ಬೆಳಗಾಂ ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ನಿಯಮ 73, 72 ಹಾಗೂ 69ರಡಿಯಲ್ಲಿ ಅತೀ ತುರ್ತು ವಿಷಯವೆಂದು ಪರಿಗಣಿಸಿ ಚರ್ಚಿಸಿ ನ್ಯಾಯ ದೊರಕಿಸಲು ತಮ್ಮ ಶಾಕಸರುಗಳಿಗೆ ಮನವಿ ಮಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಂಘವು ಎಲ್ಲಾರನ್ನೂ ಕೋರುತ್ತದೆ.
(21 ಪುಟಗಳ ಮನವಿಯನ್ನು ಲಗತ್ತಿಸಿದೆ.ಡಿ.ಚಂದ್ರಶೇಖರಯ್ಯ

ರಾಜ್ಯ ಮತ್ತು ಕೇಂದ್ರ ಸರ್ಕಾರ ದಲ್ಲಿ ಇರುವ ದಲಿತ ನಾಯಕರುಗಳು ಬೊಬ್ಬೆ ಹಾಕುತ್ತಿದ್ದಾರೆ ಬಿಜೆಪಿ ಪಕ್ಷ ದಲಿತರ ಪರವಾಗಿದೆ.

ಇದಕ್ಕೆ ಉತ್ತರ ಯಾರೂ ನೀಡುತ್ತಾರೆ ಕಾದು ನೋಡಬೇಕಾಗಿದೆ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend