ರವಿ ಅಂಗಡಿ  ಎಂಬ.. ಭೂ ಕಳ್ಳ ತಹಸೀಲ್ದಾರ” ಶಾಶ್ವತ ಅಮಾನತ್ತಿಗೆ ಬಿ. ಎಸ್. ಪಿ ಮುಖಂಡ ಶಂಕರ್ ಸಿದ್ದಾಪುರ ಆಗ್ರಹ…!!!

Listen to this article

ರವಿ ಅಂಗಡಿ  ಎಂಬ.. ಭೂ ಕಳ್ಳ ತಹಸೀಲ್ದಾರ” ಶಾಶ್ವತ ಅಮಾನತ್ತಿಗೆ ಬಿ. ಎಸ್. ಪಿ ಮುಖಂಡ ಶಂಕರ್ ಸಿದ್ದಾಪುರ ಆಗ್ರಹ…!!!….

 

ಗಂಗಾವತಿಕನಕಗಿರಿ: ತಾಲೂಕಿನ ನವಲಿ ಹೋಬಳಿಯಲ್ಲಿ ದಿನೇ ದಿನೇ ಸಾಕಷ್ಟು ಅಕ್ರಮಗಳು ಬಯಲಿಗೆ ಬರುತ್ತಿವೆ. ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದರೆ ತನಗೇನು ಗೊತ್ತೇ ಇಲ್ಲವೆಂಬಂತೆ ಜಾರಿಕೊಳ್ಳುವ ಕಡುಭ್ರಷ್ಟ ಅಧಿಕಾರಿ ರವಿ ಅಂಗಡಿ ತಶಿಲ್ದಾರ್… ನಮಗೆ ಬೇಕಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಅಬ್ಬ..ಬ..ಬ..ಬ…. ಈತ ಮಾಡಿದ ಕಳ್ಳತನ ಏನು….?  ಅಂತೀರಾ… ಯಾವ ದರೊಡೆಕೋರನಿಗೂ ಮೀರಿಸುವಂತಹದೇ ಭೂ ಹಗರಣ ಮಾಡಿದ್ದಾನೆ ಓದಿ ಈತನ ಕಥೆ…

ಚಿಕ್ಕಡಂಕನಕಲ್ ಗ್ರಾಮದ ಸ.ನಂ: 77/*/* ಮತ್ತು 78/1/* ಜಮೀನುಗಳಲ್ಲಿ ತುಂಗಭದ್ರಾ ಕಾಲುವೆ ಹಾದುಹೋಗಿರುತ್ತದೆ. ಆದರೆ ಕನಕಗಿರಿಯ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಮತ್ತು ಭೂಮಿಕೇಂದ್ರದ ಸಿಬ್ಬಂದಿಗಳು ಸೇರಿಕೊಂಡು ಅರ್ಜಿದಾರರಾದ ಶ್ರೀಮತಿ ಲಕ್ಷ್ಮೀದೇವಿ ಗಂ. ಶಂಕರಗೌಡ, ಸಾ. ಹಿರೇಡಂಕನಕಲ್ ಇವರ ಹೆಸರಿನಲ್ಲಿದ್ದ ಸ.ನಂ: 77/*/* ವಿ: 2-30 ಎ-ಗುಂ ಭೂಮಿಯನ್ನು ಪಹಣಿ ತಿದ್ದುಪಡಿ ಮಾಡಿ ವಿಸ್ತೀರ್ಣ 5-16 ಎ-ಗುಂ ಜಮೀನು ಎಂದು ಮಾಡಿರುತ್ತಾರೆ.

 

ಹಾಗೂ ಸ.ನಂ: 78/1/* ವಿ: 1-34 ಎ,ಗುಂ ಜಮೀನನ್ನು ಪಹಣಿ ತಿದ್ದುಪಡಿ ಮಾಡಿ ವಿ: 5-16 ಎ-ಗುಂ ಜಮೀನು ಎಂದು ಮಾಡಿರುತ್ತಾರೆ. ಅಸಲಿಗೆ ಸದ್ರಿ 77/*/* ಮತ್ತು 78/1/* ಸದ್ರಿ ಜಮೀನುಗಳಲ್ಲಿ ತುಂಗಭದ್ರಾ ಮುಖ್ಯ ಕಾಲುವೆ ಹಾದುಹೋಗಿದ್ದು, ಭೂಸ್ವಾಧೀನವಾಗಿರುತ್ತದೆ. ಇದು ಸರ್ಕಾರಿ ಇನಾಂ ಭೂಮಿಯಾಗಿರುತ್ತದೆ. ಭೂಸ್ವಾಧೀನವಾದ ಸರಕಾರಿ ಸರ್ವೇ
ನಂಬರುಗಳ ಪಹಣಿ ತಿದ್ದುಪಡಿ ಅಧಿಕಾರ ಮಾನ್ಯ ಸಹಾಯಕ ಆಯುಕ್ತರುರವರಿಗೆ ಮಾತ್ರ ಇರುತ್ತದೆ. ಆದರೆ ಈ ಎಲ್ಲಾ ವಿಷಯವು ಕಂದಾಯ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಹಣದ ಆಮೀಷಕ್ಕೆ ಒಳಗಾಗಿ ಕಾಯ್ದೆ, ಕಾನೂನುಗಳನ್ನು ಉಲ್ಲಂಘನೆ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರಿ ಇನಾಂ ಭೂಮಿಯಾಗಿದ್ದು, ಚಿಕ್ಕಡಂಕನಕಲ್ ಗ್ರಾಮದ ಶ್ರೀ ಮಾರುತಿ ದೇವಸ್ಥಾನ ಎಂದು ಇರುತ್ತದೆ. ಈ ಭೂಮಿಯನ್ನು ಅನಧಿಕೃತವಾಗಿ ಖಾತಾ ವರ್ಗಾವಣೆ ಮಾಡಿರುತ್ತಾರೆ ಎಂದು ಬಹುಜನ ಸಮಾಜ ಪಾರ್ಟಿಯ ಗಂಗಾವತಿ ತಾಲೂಕ ಅಧ್ಯಕ್ಷರಾದ ಶಂಕರ ಸಿದ್ದಾಪುರ ಪ್ರಕಟಣೆಯಲ್ಲಿ ಖಂಡಿಸಿದರು.
ಅವರು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ, ಅನಧಿಕೃತವಾಗಿ ತುಂಗಭದ್ರಾ ಕಾಲುವೆ ಹಾಗೂ ಸರ್ಕಾರಿ ಇನಾಂ ಭೂಮಿಯನ್ನು ವರ್ಗಾವಣೆ ಮಾಡಿದ್ದರ ಕುರಿತು ನಂ 02 ಉಪಕಾಲುವೆಯ ಕಾರ್ಯಾಲಯದ ಕಾರ್ಯನಿರ್ವಾಹಕ ಅಭಿಯಂತರರಿಗೆ ದೂರು ಪತ್ರ ನೀಡುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಮುಂದುವರೆದು ಅವರು ಮಾತನಾಡುತ್ತಾ, ಕನಕಗಿರಿಯ ಕಂದಾಯ ಅಧಿಕಾರಿಗಳು ಖೊಟ್ಟಿ
ದಾಖಲೆಗಳನ್ನು ಸೃಷ್ಟಿಸಿ 2020-21ನೇ ಸಾಲಿನ ಎಂ.ಆರ್.ಸಂ: 12/ಪಹಣಿ ಬದಲಾವಣೆ/ಆರ್.ಆರ್.ಟಿ/186/2019-20 ದಿನಾಂಕ: 16.11.2019 ರಂದು ಅರ್ಜಿದಾರರಿಗೆ ಅಂದಾಜು ವಿ: 8-00 ಎ-ಗುಂ ಭೂಮಿಯನ್ನು ಹೆಚ್ಚಿಗೆ ಮಾಡಿಕೊಟ್ಟಿರುತ್ತಾರೆ. ತದನಂತರ ಪಹಣಿ ಕಾಲಂ ನಂ. 11 ರಲ್ಲಿ ಇರುವ ಟಿ.ಬಿ.ಪಿ ಕಾಲುವೆಗೆ ಭೂ ಸ್ವಾಧೀನ ಎಂಬುದನ್ನು ತೆಗೆದುಹಾಕಿರುತ್ತಾರೆ ಹಾಗೂ ಹೆಚ್.ಡಿ.ಎಫ್.ಸಿ ಬ್ಯಾಂಕ್ ಗಂಗಾವತಿಯಲ್ಲಿ ರೂ. 11,50,000/- ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಸಾಲವನ್ನು ಪಡೆದು ಸರ್ಕಾರಿ ಭೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ವಂಚನೆ ಮಾಡಿರುತ್ತಾರೆ. ಮಾನ್ಯ ಘನ ನ್ಯಾಯಾಲಯವು ತುಂಗಭದ್ರಾ ಭೂ ಸ್ವಾಧೀನವಾದ ಭೂಮಿಗಳನ್ನು ಸ್ಥಳ ಪರಿಶೀಲನೆ ಮಾಡಿ ಪಹಣಿ ಪತ್ರಿಕೆಗಳಲ್ಲಿ ತುಂಗಭದ್ರಾ ಕಾಲುವೆ ಎಂದು ಹೊಸ ಪಹಣಿ ಪತ್ರಿಕೆಗಳನ್ನು ಸೃಷ್ಟಿ ಮಾಡಲು ಆದೇಶ ಮಾಡಿದ್ದು, ಈ ಆದೇಶವು ಗೊತ್ತಿದ್ದರೂ ನೀರಾವರಿ ಇಲಾಖೆಯ ಅಧಿಕಾರಿಗಳು ಜಾಣಕುರುಡರಂತೆ ಕಾಲುವೆ ಭೂಮಿಯು ತಿದ್ದುಪಡಿಯಾದರೂ ತಮಗೆ
ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿ, ಸದ್ರಿ ಹಗರಣಗಳಿಗೆ ಕಾರಣೀಭೂತರಾಗಿದ್ಧಾರೆ. ಇದೇ ರೀತಿಯಾಗಿ ತುಂಗಭದ್ರಾ ಡ್ಯಾಮ್‍ನಿಂದ ಪ್ರಾರಂಭವಾಗಿ, ರಾಯಚೂರು ಜಿಲ್ಲೆಯ ಕೊನೆಯವರೆಗೂ ಇಂತಹ ಪ್ರಕರಣಗಳು
ಅನೇಕ ನಡೆದಿರುತ್ತವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು..

ಕಾರಣ ನಂ: 02 ಉಪಕಾಲುವೆ ಕಾರ್ಯಲಯದ ಕಾರ್ಯನಿರ್ವಾಹಕ ಅಭಿಯಂತರರುಸದರಿ ಪ್ರಕರಣದ ಬಗ್ಗೆ ಸೂಕ್ತವಾದ ತನಿಖೆ ನಡೆಸಿ, ತಪ್ಪಿತಸ್ಥ ನೀರಾವರಿ ಇಲಾಖೆಯ ಸಿಬ್ಬಂದಿಗಳನ್ನು ಮತ್ತು ಕಂದಾಯ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತುಂಗಭದ್ರಾ ಉಪಕಾಲುವೆಯ ಜಮೀನನ್ನು ಭೂಗಳ್ಳರಿಂದ ರಕ್ಷಿಸಿ, ಸರ್ಕಾರದ ಆಸ್ತಿಯನ್ನು ಕಾಪಾಡುವಂತೆ ಎಲ್ಲಾ ರೈತರ ಪರವಾಗಿ ಬಹುಜನ ಸಮಜ ಪಾರ್ಟಿ..

ವರದಿ. ಮಂಜುನಾಥ್ ದೊಡ್ಡಮನಿ 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend