ಪ್ರೀತಿಸುವಂತೆ ಯುವತಿಯ ಹಿಂದೆ ಬೆನ್ನು ಬಿದ್ದ ಯುವಕ ಹಾಗೂ ಆತನ ಸಹೋದರನನ್ನು ಯುವತಿಯ ತಂದೆಯೇ ಬರ್ಬರವಾಗಿ ಹತ್ಯೆ…!!!

Listen to this article

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ಪ್ರೀತಿಸುವಂತೆ ಯುವತಿಯ ಹಿಂದೆ ಬೆನ್ನು ಬಿದ್ದ ಯುವಕ ಹಾಗೂ ಆತನ ಸಹೋದರನನ್ನು ಯುವತಿಯ ತಂದೆಯೇ ಬರ್ಬರವಾಗಿ ಹತ್ಯೆ (Double Murder) ಮಾಡಿದ ಘಟನೆ ನಡೆದಿದೆ.

ಕೊಲೆಯಾದವರು ಕಾರಿಮನಿ ಗ್ರಾಮದ ಮಾಯಪ್ಪ ಹಳೇಗೋಡಿ (18) ಹಾಗು ಯಲ್ಲಪ್ಪ ಹಳೇಗೋಡಿ (20) ಎನ್ನಲಾಗಿದ್ದು,

ಯಲ್ಲಪ್ಪ ಹಳೇಗೋಡಿ ಆರೋಪಿ ಫಕೀರಪ್ಪನ‌ ಪುತ್ರಿಯನ್ನು ಪ್ರೀತಿಸುವಂತೆ ಬೆನ್ನುಬಿದ್ದಿದ್ದ ಎಂದು ತಿಳಿದುಬಂದಿದೆ. ಆದರೆ, ಆಕೆಯ ತಂಟೆಗೆ ಬರಬೇಡ ಎಂದು ಯುವಕನಿಗೆ ವಾರ್ನ್ ಮಾಡಲು ಕಾರಿಮನಿಗೆ ಫಕೀರಪ್ಪ ಹೋಗಿದ್ದ ಎನ್ನಲಾಗಿದೆ.

ಈ ವೇಳೆ ಫಕೀರಪ್ಪ ಹಾಗೂ ಯಲ್ಲಪ್ಪ ಹಳೇಗೋಡಿ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಯಲ್ಲಪ್ಪನಿಗೆ ಚಾಕುವಿನಿಂದ ‌ಫಕೀರಪ್ಪ ಇರಿದಿದ್ದಾನೆ ಎನ್ನಲಾಗಿದೆ.

ಈ ವೇಳೆ ಯಲ್ಲಪ್ಪನನ್ನು‌ ಬಿಡಿಸಿಕೊಳ್ಳಲು ಬಂದ ಸಹೋದರ ಮಾಯಪ್ಪನಿಗೂ ಚಾಕುವಿನಿಂದ ‌ಫಕೀರಪ್ಪ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಾಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಗಾಯಗೊಂಡ ‌ಯಲ್ಲಪ್ಪನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ‌ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಘಟನೆ ಬಳಿಕ ಆರೋಪಿ ಫಕೀರಪ್ಪ ಭಾಂವಿಹಾಳ ಬಂಧಿಸಿದ್ದಾರೆ . ಪೊಲೀಸರು ಆರೋಪಿಯನ್ನು ಕರೆದುಕೊಂಡು ಹಲ್ಲೆ ಮಾಡಿದ ಸ್ಥಳ ಪರಿಶೀಲನೆ ಮಾಡಿದರು.

ಸ್ಥಳಕ್ಕೆ ‌ರಾಮದುರ್ಗ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend