ಚೌಡಾಪುರ ಗ್ರಾಮದಲ್ಲಿ ಈ ಒಂದು ಜಾಗದ ಸುತ್ತ ಮುತ್ತ ವಾಸಿಸುವ ಕುಟುಂಬಗಳಿಗೆ ಸಿಗುವುದೇ ಸೊಳ್ಳೆಗಳ ಕಾಟದಿಂದ ಮುಕ್ತಿ…???

Listen to this article

ಸೊಳ್ಳೆಗಳ ಕಾಟದಿಂದ ಮುಕ್ತಿಗೊಳಿಸಿವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳು ವಾಸಿಸುತ್ತಿರುವ ಮನೆಗಳ ಪಕ್ಕದಲ್ಲಿ ನೀರಿನ ಹೊಂಡಇದ್ದು ಚೌಡಾಪುರ ಗ್ರಾಮದಲ್ಲಿನ ಚರಂಡಿಯ ನೀರು ಬಂದು ಈ ಹೊಂಡದಲ್ಲಿ ಸೇರುತ್ತದೆ, ಸುಮಾರು ವರ್ಷಗಳಿಂದ ಇದೇ ಪ್ರಕಾರ ಊರಿನ ನೀರು ಮಳೆಯನೀರು ಸಾರ್ವಜನಿಕರ ಉಪಯೋಗಿಸುವ ನಲ್ಲಿಯ ನೀರುಈ ಹೊಂಡಕ್ಕೆ ಸೇರಿ ನೀರು ಕೆಟ್ಟು ವಾಸನೆ ಇಂದ ಕೂಡಿದೆ.

ಇಲ್ಲಿ ವಾಸಿಸುವ ಕುಟುಂಬಗಳಿಗೆ ಗಬ್ಬುನಾಥ ಹೊಡೆಯುತ್ತದೆ.ಸೊಳ್ಳೆಗಳಂತು ಬಿಡುವಿಲ್ಲದೆ ಜನರ ಜೀವವನ್ನು ಹಿಂಡುತ್ತವೆ. ಈ ಹೊಂಡದಲ್ಲಿ ಊರಿನ ತ್ಯಾಜ್ಯವಸ್ತುಗಳು, ಪ್ಲಾಸ್ಟಿಕ್, ಕೆಲವರು ಕಸವನ್ನು ಈ ಹೊಂಡದಲ್ಲಿ ಹಾಕುತ್ತಾರೆ, ಇಲ್ಲಿ ವಿಷಜಂತುಗಳು ವಾಸಿಸುವ ತಾಣವಾಗಿದೆ. ಈ ಸಮಸ್ಯೆ ಕುರಿತು ಇಲ್ಲಿ ವಾಸಿಸುವ ಜನರು, ಸುಮಾರು ವರ್ಷಗಳಿಂದ ಈ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದೆ, ನೀರು ಕೆಟ್ಟ ವಾಸನೆಯಿಂದ ಕೂಡಿದೆ, ಸುಮಾರು ಬಾರಿ ಜನಪ್ರತಿನಿಧಿಗಳಿಗೆ ಗ್ರಾಮ ಪಂಚಾಯತ್  ಅಭಿವೃದ್ಧಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದರೂ ಕೂಡ ಯಾವ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಇದರಿಂದ ಡೆಂಗ್ಯ್ಮಲೇರಿಯಾ ಅಂತ ಸಾಂಕ್ರಾಮಿಕ ಕಾಯಿಲೆಗಳು ಬರುತ್ತವೆ .ಮತ್ತು ಒಂದೊಂದು ಸಾರಿ ವಿಷ ಜಂತುಗಳಾದ ಹಾವು ಕೆಟ್ಟ ಹುಳುಗಳು ಇಂತಹ ಅನೇಕ ವಿಷ ಜಂತುಗಳು ನಮ್ಮ ಮನೆಗಳ ಹೊಳಗೆ ಬಂದಿವೆ. ಇಲ್ಲಿನ ಪರಿಸ್ಥಿತಿ ಯಾರು ಅರ್ಥ ಮಾಡಿಕೊಳ್ಳುತ್ತಾರೆ ಆ ದೇವರಿಗೆ ಗೊತ್ತು ಎಂದು ಇಲ್ಲಿ ವಾಸಿಸುವ ಕುಟುಂಬದವರು ಮಾತನಾಡುತ್ತಾರೆ. ಈ ವರದಿ ನೋಡಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ. ಈ ಹೊಂಡದಲ್ಲಿ ನಿಂತ ನೀರನ್ನು ಬೇರೆ ಚರಂಡಿ ವ್ಯವಸ್ಥೆಯನ್ನು ಮಾಡಿ, ಚರಂಡಿಯ ಮೂಲಕ ಬೇರೆ ಕಡೆಗೆ ಬಿಟ್ಟುಈ ಹೊಂಡದ ತುಂಬಾ ಮಣ್ಣನ್ನು ಹಾಕಿ ಮುಚ್ಚಿ.ಇಲ್ಲಿ ವಾಸಿಸುವ ಜನಗಳಿಗೆ ಅನುಕೂಲ ಮಾಡಿಕೊಡಿ.ಎಂದು ಕುಟುಂಬದವರು ಮನವಿ ಮಾಡಿಕೊಂಡಿರುತ್ತಾರೆ..

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend