ಕೂಡ್ಲಿಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಸವೇಶ್ವರ ಜಯಂತಿ ಆಚರಣೆ…!!!

Listen to this article

ವಿವಿಧ ಕಡೆಗಳಲ್ಲಿ ಬಸವನ ಜಯಂತಿ ಅದ್ದೂರಿ ಮೆರವಣಿಗೆ ಕೂಡ್ಲಿಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಸವೇಶ್ವರ ಜಯಂತಿಯ ಪ್ರಯುಕ್ತ ಹಳ್ಳಿಗಳಲ್ಲಿ ಎತ್ತುಗಳ ಮೆರವಣಿಗೆಯ ಮೂಲಕ ಮತ್ತು ಬಸವೇಶ್ವರನ ಭಾವಚಿತ್ರವನ್ನು ಎತ್ತಿನ ಗಾಡಿಯಲ್ಲಿ ಊರ ತುಂಬಾ ಮೆರವಣಿಗೆಯ ಮೂಲಕ ಗಮನ ಸೆಳೆಯಲಾಯಿತು ಬಸವತತ್ವವನ್ನು ಪ್ರಚಾರ ಮಾಡುತ್ತ ಕಾಯಕವೇ ಕೈಲಾಸ ಎನ್ನುವ ಮಾತನ್ನು ಸಾರುವ ಮೂಲಕ ಎತ್ತುಗಳಿಗೆ ಸಿಂಗರಿಸಿ ಬಣ್ಣ ಹಚ್ಚಿ ವಿವಿಧ ಅಲಂಕಾರಗಳನ್ನು ಮಾಡಿಕೊಂಡು ಮೆರವಣಿಗೆಗಳನ್ನು ಮಾಡಲಾಯಿತು.

ಕೂಡ್ಲಿಗಿ ತಾಲೂಕು ಕಕ್ಕುಪ್ಪಿ ಗ್ರಾಮದಲ್ಲಿ ಬಹು ವಿಜೃಂಭಣೆಯಿಂದ ಊರಿನ ಹಿರಿಯರು ಮತ್ತು ಯುವಕರು ತಂಡ ಜಾನಪದ ಕಲಾತಂಡವನ್ನು ಕರೆಸಿ ನೃತ್ಯವನ್ನು ಮಾಡುತ್ತಾ ವಾದ್ಯಗಳೊಂದಿಗೆ ನಂದಿ ಕೋಲು ಸಮಾಳ ಮೂಲಕ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಬಹು ವಿಜೃಂಭಣೆಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು ಇಡೀ ಸರ್ವ ಜನಾಂಗದವರು ಕೂಡ ಈ ಬಸವ ಜಯಂತಿಯಲ್ಲಿ ಪಾಲ್ಗೊಂಡು ಬಸವ ತತ್ವದ ಪ್ರಕಾರ ಎಲ್ಲರೂ ಒಂದೇ ಎಂದು ಸಾರುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಾಯಿತು ಅದೇ ರೀತಿ ಅಮ್ಮನ ಕೇರಿಯಲ್ಲಿಯೂ ಕೂಡ ವಿಶೇಷ ಅಲಂಕಾರಗಳನ್ನು ಮಾಡಿ ಬಸವೇಶ್ವರ ಭಾವಚಿತ್ರವನ್ನು ಇಡೀ ಊರ ತುಂಬಾ ಬೀದಿ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು..

ವರದಿ. ಬಸವರಾಜ್, ಎಂ, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend