ಲಿಟಲ್ ಚಾಂಪ್ಸ್ ಶಾಲೆಯಲ್ಲಿ ಗಣಿತ ಮೇಳ…!!!

Listen to this article

ಲಿಟಲ್ ಚಾಂಪ್ಸ್ ಶಾಲೆಯಲ್ಲಿ
ಗಣಿತ ಮೇಳ

ಗಣಿತ ಎಲ್ಲಾ ವಿಜ್ಞಾನಗಳ ತಾಯಿ

ಹೂವಿನ ಹಡಗಲಿ: ಗಣಿತ ಎಲ್ಲಾ ವಿಜ್ಞಾನಗಳ ತಾಯಿ.
ಜನಸಾಮಾನ್ಯರ ಬದುಕಿನಲ್ಲಿ ಸಂಖ್ಯೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಮುಖ್ಯ ಗುರು ಸುರೇಶ ಅಂಗಡಿ ಹೇಳಿದರು. ಪಟ್ಟಣದ ಲಿಟಲ್ ಚಾಂಪ್ಸ್ ಶಾಲೆಯಲ್ಲಿ ಸೋಮವಾರ
ಅಂತಾರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗಣಿತ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀನಿವಾಸ ರಾಮಾನುಜನ್ ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಸಂಖ್ಯೆಗಳ ಬಗ್ಗೆ ಮಹತ್ತರವಾದ ಸಂಶೋಧನೆ ಮಾಡಿರುವುದು ವಿಶೇಷ.
ಪ್ರಾಚೀನ ಗಣಿತಜ್ಞರಾದ
ಆರ್ಯಭಟ, ಭಾಸ್ಕರ,
ವರಾಹಮಿಹಿರ ಮೊದಲಾದವರು ಗಣಿತಕ್ಕೆ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು.
ಗಣಿತ ಕಬ್ಬಿಣದ ಕಡಲೆ ಅಲ್ಲ. ಮನಸ್ಸಿಟ್ಟು ಗಣಿತದ ಸೂತ್ರಗಳನ್ನು ಲೆಕ್ಕ ಬಿಡಿಸುವ ಕ್ರಮಗಳನ್ನು
ಅರ್ಥೈಸಿಕೊಂಡರೆ ಅತ್ಯಂತ ಸುಲಭ ಎಂದು ತಿಳಿಸಿದರು.
ಲೆಕ್ಕ ಬಿಡಿಸುವ ವಿಧಾನಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡು
ಹೆಚ್ಚು ಅಂಕ ಗಳಿಸಿರಿ ಎಂದರು.
ಗಣಿತ ಶಿಕ್ಷಕ ವಿಜಯಕುಮಾರ್ ಗಣಿತದ
ಮೂಲ ಪರಿಕಲ್ಪನೆಗಳನ್ನು
ಅರ್ಥಮಾಡಿಕೊಂಡರೆ
ಅತ್ಯಂತ ಸುಲಭವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಜಿ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಗುರುಗಳಾದ ಜಿ. ಮಲ್ಲಿಕಾರ್ಜುನ,
ಗಣಿತ ‌ಶಿಕ್ಷಕರಾದ
ಎಸ್ ಸಂಗಮೇಶ,
ಜಿ ವೀಣಾ, ಶಿಕ್ಷಕ ಸಿಬ್ಬಂದಿ
ಹಾಜರಿದ್ದರು.

ಶಾಲೆಯ ವಿದ್ಯಾರ್ಥಿಗಳು
ಗಣಿತದ ಪೈಥಾಗರಸ್
ವೃತ್ತ, ತ್ರಿಭುಜಗಳು,
ಬೀಜಗಣಿತದ ಸೂತ್ರಗಳು
ಸೇರಿದಂತೆ ಹಲವು ಬಗೆಯ
ಮಾದರಿಗಳನ್ನು ಪ್ರದರ್ಶಿಸಿದರು…

ವರದಿ. ಅಜಯ್, ಚ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend