ದೋಬಿಗಲ್ಲಿ ಜನರಿಗೆ 10 ದಿನಗಳ ಒಳಗಾಗಿ ಹಕ್ಕುಪತ್ರ ನಿಡದಿದ್ದರೆ ಅನಿರ್ದಿಷ್ಟ ಧರಣಿಗೆ ಸಿಪಿಐ(ಎಂಎಲ್) ಒತ್ತಾಯ !

Listen to this article

ದೋಬಿಗಲ್ಲಿ ಜನರಿಗೆ 10 ದಿನಗಳ ಒಳಗಾಗಿ ಹಕ್ಕುಪತ್ರ ನಿಡದಿದ್ದರೆ ಅನಿರ್ದಿಷ್ಟ ಧರಣಿಗೆ ಸಿಪಿಐ(ಎಂಎಲ್) ಒತ್ತಾಯ !

ಸಿಂಧನೂರು :ದೋಬಿಗಲ್ಲಿ 6ನೇ ವಾರ್ಡ ಕಾಟಿಬೇಸ್ ಸರಕಾರಿ ಸರ್ವೆ ನಂಬರ್ 768/1 ರಲ್ಲಿ ಕಳೆದ 20-30 ವರ್ಷಗಳಿಂದ ವಾಸಿಸುತ್ತಿರುವ ಬಡವರಿಗೆ ಜನವರಿ 10 ರ ಒಳಗಾಗಿ ಹಕ್ಕುಪತ್ರಗಳನ್ನು ನೀಡದಿದ್ದರೆ ಅನಿರ್ದಿಷ್ಟ ಧರಣಿಯನ್ನು ಕೈಗೊಳ್ಳಲಾಗುವುದೆಂದು ಇಂದು ಮಾನ್ಯ ಗ್ರೇಡ್-2 ತಹಶೀಲ್ದಾರರಿಗೆ ಸಿಪಿಐ (ಎಂಎಲ್)ರೆಡ್ ಸ್ಟಾರ್ ತಾಲೂಕು ಸಮಿತಿ ಮನವಿಪತ್ರ ನೀಡಿ ಆಗ್ರಹಿಸಲಾಯಿತು.

ಮನವಿ ಪತ್ರವನ್ನು ನೀಡಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ, ಸರ್ವೆ ನಂಬರ್ 768/1 ರಲ್ಲಿ ಸುಮಾರು ದಿನಗಳಿಂದ ಕಡುಬಡವರು ಸರಕಾರಿ ಭೂಮಿಯಲ್ಲಿ ಜೋಪಡಿ/ಶೆಡ್ ಹಾಕಿಕೊಂಡು ಸುಮಾರು 60 ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಈ ಕುರಿತು ಹಕ್ಕುಪತ್ರಗಳನ್ನು ವಿತರಿಸಲು ಆಗ್ರಹಿಸಿ,88 ದಿನಗಳ ಕಾಲ ಅನಿರ್ದಿಷ್ಟ ಧರಣಿಯನ್ನು ಕೈಗೊಂಡಾಗ ಮಾನ್ಯ ಸಹಾಯಕ ಆಯುಕ್ತರು ಲಿಂಗಸೂಗೂರು ಹಾಗೂ ಮಾನ್ಯ ತಹಶೀಲ್ದಾರರು ಹಕ್ಕುಪತ್ರಗಳನ್ನು ಕೊಡುತ್ತೇವೆ ಧರಣಿಯನ್ನು ವಾಪಸ್ ಪಡೆಯಿರಿ ಎಂದು ಹೇಳಿದಾಗ ಅನಿರ್ದಿಷ್ಟ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ ಪಡೆಯಲಾಗಿತ್ತು. ಕೊಟ್ಟ ಮಾತಿನ ಭರವಸೆಯಂತೆ ಹಕ್ಕುಪತ್ರಗಳನ್ನು ವಿತರಿಸಲು ಮುಂದಾಗಲಿಲ್ಲ. ಈ ಕುರಿತು ಕಳೆದ ಒಂದು ವರ್ಷದಿಂದ ತಹಶಿಲ್ದಾರರ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಮೂಲಕ ಹಾಗೂ ಮೌಖಿಕವಾಗಿ ಗಮನಕ್ಕೆ ತಂದರೂ ಕೂಡಾ ಪ್ರಯೋಜನವಾಗಿಲ್ಲ. ಯಾಕೇ ಎಂದು ಕೇಳಿದರೆ ಆವಾಗ – ಈವಾಗ ಕೊಡೋಣವೆಂದು ಸಮಂಜಸವಾದ ಉತ್ತರವನ್ನು ನೀಡದೆ ಏಕೆಮೌನವಹಿಸಿದ್ದಿರಿ ? ಸೂಕ್ತವಾದ ಉತ್ತರವನ್ನು ತಹಶಿಲ್ದಾರರು ನೀಡಬೇಕು. ಕಡುಬಡತನದಿಂದ ಕೂಡಿದ ಪರಿಶಿಷ್ಟ ಜಾತಿಯಿಂದಿಡಿದು ಎಲ್ಲಾ ಜನಾಂಗದ ಬಡವರು ಹಕ್ಕುಪತ್ರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಹನೆಯ ಕಟ್ಟೆ ಒಡೆದು, ನುಚ್ಚು ನೂರಾಗಿದೆ.ಭರವಸೆಯಲ್ಲಿಯೇ ಜೀವನ ಸವೆಸಿದ್ದಾರೆ. ಕಾನೂನಿನ ಪ್ರಕಾರ ಅಕ್ರಮ- ಸಕ್ರಮದಲ್ಲಿ ಅರ್ಜಿ ತುಂಬಿ ಚಳುವಳಿ ನಡೆಸಿ ಸರಕಾರದ ಗಮನಕ್ಕೆ ತಂದರೂ ಸಹ ಹಕ್ಕುಪತ್ರಗಳನ್ನು ವಿತರಿಸಲಿಕ್ಕೆ ಅಧಿಕಾರಿಗಳು ಮೀನಾ-ಮೇಷ ಮಾಡುತ್ತಿದ್ದಾರೆಂದು ಹೇಳಿದರು.

ಈಗಾಗಲೇ ಹಕ್ಕುಪತ್ರಗಳ ಕುರಿತು ಮಾನ್ಯ ಪೌರಾಯುಕ್ತರು ನಗರಸಭೆ ಸಿಂಧನೂರು ಇವರು 18 ಫಲಾನುಭವಿಗಳ ನಿವೇಶನ ರಹಿತರ ಪ್ರಮಾಣ ಪತ್ರಗಳನ್ನು ತಹಶಿಲ್ದಾರರಿಗೆ ಸಲ್ಲಿಸಲಾಗಿದೆ. ಹಾಗೂ ಇನ್ನುಳಿದ 5 ಜನರ ನಿವೇಶನ ರಹಿತ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡಿ ಸಲ್ಲಿಸಬೇಕಾಗಿದೆ.ಕಾರಣ ಮಾನ್ಯ ತಹಶೀಲ್ದಾರರು ಮನವಿ ನೀಡಿದ 10 ದಿನಗಳೊಳಗಾಗಿ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ಆಗ್ರಹಿಸಲಾಯಿತು. ಇಲ್ಲದೇ ಹೋದಲ್ಲಿ ಸದರಿ ಸಿಂಧನೂರು ಸರಕಾರಿ ಸರ್ವೆ ನಂಬರ್ 768/1 ರಲ್ಲಿ ಹಕ್ಕುಪತ್ರಗಳನ್ನು ನೀಡುವವರೆಗೆ ಅನಿರ್ದಿಷ್ಟ ಧರಣಿ ಹೋರಾಟವನ್ನು ನಡೆಸಲಾಗುತ್ತದೆಂದು ಸಿಪಿಐ(ಎಂಎಲ್) ಪಕ್ಷ ಒತ್ತಾಯಿಸಿತು.

ಈ ಸಂದರ್ಭದಲ್ಲಿ ಪಕ್ಷದ ತಾಲೂಕುಕಾರ್ಯದರ್ಶಿಯಾದ, ಮಾಬುಸಾಬ ಬೆಳ್ಳಟ್ಟಿ, ತಾಲೂಕು ಸಮಿತಿ ಸದಸ್ಯರಾದ, ಹೆಚ್.ಆರ್.ಹೊಸಮನಿ, ಹುಲುಗಪ್ಪ ಬಳ್ಳಾರಿ, ರಾಮು ಕೂಡ್ಲಿಗಿ, ವೆಂಕಟೇಶ್ ಮ್ಯಾದರ್, ರುಕ್ಮಿಣಿ, ಅಂಬಣ್ಣ ಹಡಪದ, ಮರಿಯಮ್ಮ ಬಜಾರೆಪ್ಪ, ವಿಜಯಲಕ್ಷ್ಮಿ ನಾಯಕ, ವೆಂಕೋಬ ಮುಳ್ಳೂರು, ಶ್ಯಾಮಣ್ಣ ಸಿಂದೋಳ್ಳು ಸೇರಿದಂತೆ ಫಲಾನುಭವಿಗಳು ಪಾಲ್ಗೊಂಡಿದ್ದರು….

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend