ಎಂ ಈರಣ್ಣ ಅವರಿಗೆ ನಿಗಮ ಮಂಡಳಿ ನೀಡುವಂತೆ ಶಿವು ಮಹಾಂತೇಶ ನಕ್ಕುಂದ ಆಗ್ರಹ…!!!

Listen to this article

ಮಾನ್ಯ ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ

ವಿಷಯ:: ಮಾನ್ವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕೂಗು…

ಮಾನ್ಯರೆ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರೇ ಮಾನ್ವಿ ವಿಧಾನಸಭಾ ಕ್ಷೇತ್ರದ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಶ್ರೀ ಮಾನ್ಯ ಎಂ.ಈರಣ್ಣ (ಡಾಕ್ಟರ್ ತನುಶ್ರೀ) ಎಂಬ ಒಬ್ಬ ಸಾಮಾನ್ಯ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಮುಖಂಡರಾಗಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿ ನಮ್ಮ ಪಕ್ಷದ ಸಿದ್ಧಾಂತವನ್ನು ಮೀರದೆ ಪಕ್ಷಕ್ಕಾಗಿ ಹಗಲಿರುಳು ದುಡಿದು ಪಕ್ಷದ ನಿಷ್ಠಾವಂತ ಮುಖಂಡರಾಗಿ ಉಳಿದಿರುವುದು ದುಃಖದ ಸಂಗತಿ ಮಾನ್ಯರೇ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೂರಕ್ಕೆ ನೂರು ಸಿಕ್ಕೆ ಸಿಗುತ್ತೆ ಎಂಬ ನಂಬಿಕೆಯಲ್ಲಿ ಇದ್ದೆವು ಕ್ಷೇತ್ರದ ಉದ್ದಕ್ಕೂ ನಮ್ಮ ನಾಯಕರು ಹಗಲಿರುಳೆನ್ನದೆ ದುಡಿದು ಹಾಗೂ ಇನ್ನಿತರೆ ಸಮಾಜಿಕ ಕಾರ್ಯಗಳು ಅಂದರೆ ಸಾಮೂಹಿಕ ವಿವಾಹ ಹಾಗೂ ಅಣ್ಣ ಕ್ಯಾಂಟೀನ್ ( ಶ್ರೀ.ಸಿದ್ದರಾಮಯ್ಯನವರ ಹೆಸರಿನಲ್ಲಿ) ಬೇಸಿಗೆಯಲ್ಲಿ ತಣ್ಣನೆ ನೀರು ಹಾಗೂ ಹಳ್ಳಿಹಳ್ಳಿಗೆ ತಮ್ಮದೇ ಆದ ಹೆಸರು ಮಾಡಿರುವ ನಮ್ಮ ನಾಯಕರು ಆದರೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಂಬಿ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಾಗ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿರುವುದರಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮತ್ತು ಮುಖಂಡರ ಮನಸ್ಸಿಗೆ ತುಂಬಾ ನೋವುಂಟು ಮಾಡಿರುವ ಸಂಗತಿ ಆದರೆ ಮುಂದೆ ಮುಂದಿಟ್ಟ ಹೆಜ್ಜೆ ಹಿಂದಿಡಬೇಡದೆಂದು ಅಭಿಮಾನಿಗಳು ಮತ್ತು ಕಾರ್ಯಕರ್ತರು ಒತ್ತಾಯದ ಮೇರಿಗೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದರು ಯಾವುದೇ ಪಕ್ಷದ ಸಹಾಯವಿಲ್ಲದೆ ಹಾಗು ಯಾವುದೇ ಪಕ್ಷದ ನಾಯಕರ ಸಹಾಯವಿಲ್ಲದೆ ನಮ್ಮ ನಾಯಕರು ಹಾಗೂ ಅವರ ಅಭಿಮಾನಿಗಳು ಕಾರ್ಯಕರ್ತರು ಮತ್ತು ಸ್ನೇಹಿತರು ಎಲ್ಲರ ಒಂದು ಆಶೀರ್ವಾದದಿಂದ ಗೆಲುವಿನ ಹತ್ತಿರದಲ್ಲಿ ಬಂದು ನಮ್ಮ ನಾಯಕರು ಎರಡನೇ ಸ್ಥಾನಕ್ಕೆ ಬಂದು ಸೋತಿದ್ದೇವೆ ಆದರೆ ಸೋತಿದ್ದೇವೆ ಎಂದು ನಮ್ಮ ನಾಯಕರು ಎಂದು ಮನೆಯಲ್ಲಿ ಕುಳಿತಿಲ್ಲ ತಮ್ಮನ್ನು ನಂಬಿದ ಬಡಜನರಿಗಾಗಿ ಹಾಗು ಅಭಿಮಾನಿಗಳಿಗಾಗಿ ಅವರ ಕಷ್ಟ ಹಾಗೂ ನೋವುಗಳಿಗೆ ಸ್ಪಂದಿಸುತ್ತಾ ಇದ್ದಾರೆ ಹಾಗೂ ಇನ್ನೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಮುಂದುವರಿಯುತ್ತಿದ್ದಾರೆ…2023ರ ಚುನಾವಣೆಯಲ್ಲಿ ನಿಮ್ಮ ಮಾತಿಗೆ ಬೆಲೆ ಕೊಟ್ಟು ತಮ್ಮ ಸೊಸೆಯನ್ನು ಚುನಾವಣೆ ಕಣದಿಂದ ಹಿಂದೆ ಸರಿಸಿ ಮಾನ್ವಿ ಹಾಗು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಪ್ರಮುಖ ಕಾರಣಕರ್ತರು ಎನ್ನುವುದು ತಿಳಿದ ವಿಷಯ ಸ್ವತಂ ಎರಡು ಕ್ಷೇತ್ರದ ಶಾಸಕ ಬಹಿರಂಗ ವೇದಿಕೆಗಳಲ್ಲಿ ಜನರಿಗೆ ಸಾರಿದ್ದಾರೆ
ಶ್ರೀ ಸಿದ್ದರಾಮಯ್ಯನವರ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇನ್ನು ಮುಂದೆ ನಮ್ಮ ನಾಯಕರಿಗೆ ಪಕ್ಷದಲ್ಲಿ ಒಳ್ಳೆ ಸ್ಥಾನಮಾನ ನೀಡಿ ಅಥವಾ ಅವರ ಸೊಸೆಯಾದ ಡಾ.ತನುಶ್ರೀ ಅವರಿಗೆ ಮಹಿಳಾ ಮೀಸಲಾತಿ ಯಲ್ಲಿ(ವೈದ್ಯಕೀಯ ಕ್ಷೇತ್ರದಲ್ಲಿ ಪರಿಗಣಿಸಿಯೇ ) ವಿಧಾನಪರಿಷತ್ ಸದಸ್ಯ ಸ್ಥಾನವನ್ನಾದರು ನೀಡಿ ಹಾಗೂ ನಮ್ಮ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷ ಗಿರಿ ನೀಡಿಬೇಕೆಂದು ತಮ್ಮಲ್ಲಿ ಮತ್ತೊಮ್ಮೆ ಮಗದೊಮ್ಮೆ ವಿನಂತಿಸಿಕೊಳ್ಳುತ್ತಾ ಮಾನ್ವಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ತಮ್ಮಲ್ಲಿ ಮನವಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವಳೀ (ರಾಯಚೂರು & ಯಾದಗಿರಿ) ಜಿಲ್ಲೆಯ ಕ್ಷೇತ್ರದಿಂದ ಅಹಿಂದ ವರ್ಗದ ಮತಗಳು ನಿರ್ಣಾಯಕ ಅವುಗಳನ್ನು ಒಗ್ಗೂಡಿಸಲು ಎಂ ಈರಣ್ಣ ಅವರಿಂದ ಮಾತ್ರ ಸಾಧ್ಯ ಎನ್ನುವುದು ಜನರ ಆಶೋತ್ತರ ನಿಮ್ಮಲ್ಲಿ ಕೈ ಮುಗಿದು ಕೇಳುವುದು ಒಂದೆ ನಮ್ಮ ನಾಯಕರಿಗೆ ಸ್ಥಾನ ಮಾನವನ್ನ ನೀಡಬೇಕು ಎಂದು ಕೊರುತ್ತೆವೆ

ಇಂತಿ ತಮ್ಮ ಅಭಿಮಾನಿ
ಶಿವುಮಾಹಾಂತೇಶ ನಕ್ಕುಂದ
ತಾಲೂಕು ಯುವ ಕುರುಬ ಸಂಘದ ಅಧ್ಯಕ್ಷರು ಮಾನ್ವಿ ..

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend