PSI ನೇಮಕಾತಿಯಲ್ಲಿ  ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಸಿಐಡಿಗೆ (CID) ಆದೇಶಿಸಲಾಗಿದೆ…!!!.

Listen to this article

PSI ನೇಮಕಾತಿಯಲ್ಲಿ  ಅಕ್ರಮದ ಸಮಗ್ರ ತನಿಖೆಗೆ ಸಿಐಡಿಗೆ (CID) ಆದೇಶಿಸಿದ್ದೇವೆ. ತನಿಖೆಗೆ ಮುಕ್ತ ಸ್ವಾತಂತ್ರ ನೀಡಿದ್ದೇವೆ. ತಪ್ಪಿತಸ್ಥರು ಯಾರೇ ಇರಲಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಆದೇಶಿಸಿದ್ದೇವೆ.

ಬೇರೆ ಸರ್ಕಾರ ಇದ್ದಿದ್ದರೆ ಹಗರಣ ಮುಚ್ಚಿ ಹಾಕಲು ಯತ್ನಿಸುತ್ತಿತ್ತು. ನಾವು ಅದಕ್ಕೆ ಅವಕಾಶ ಕೊಟ್ಟಿಲ್ಲ’ ಎಂದು ಸಿಎಂ ಬೊಮ್ಮಾಯಿ  ಹೇಳಿದರು.

ಪಿಎಸ್‌ಐ ನೇಮಕಾತಿ ಹಗರಣ  ಹೊಸ ತಿರುವುದು ಪಡೆದುಕೊಂಡಿದೆ. ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿರುವ ಹಗರಣದಲ್ಲಿ ಬಿಜೆಪಿ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ  ಹೆಸರು ತಳಕು ಹಾಕಿಕೊಂಡಿದೆ.

ಈಗಾಗಲೇ ಪಿಎಸ್‌ಐ ಪರೀಕ್ಷೆ ಬರೆದ ನಾಲ್ವರು ಪರೀಕ್ಷಾರ್ಥಿಗಳು, ಸದರಿ ಪರೀಕ್ಷೆಯ ಕೋಣೆ ಮೇಲ್ವಿಚಾರಣೆ ನಡೆಸಿರುವ ಮೂವರು ಇನ್ವಿಜಿಲೇಟರ್ಸ್‌ ಸೇರಿದಂತೆ ಕಲಬುರಗಿಯ 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಇದೀಗ ಆಡಳಿತಾರೂಢ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡರಾ​ದ ದಿವ್ಯಾ ಹಾಗರಗಿ ವಿಚಾರಣೆಗೆ ಮುಂದಾಗಿದ್ದಾರೆ. ಈಗಾಗಲೇ ದಿವ್ಯಾ ಪತಿ ರಾಜೇಶ್‌ರನ್ನು ವಶಕ್ಕೆ ಪಡೆಯಲಾಗಿದೆ..

ವರದಿ. ಮಂಜುನಾಥ್, ಎನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend