ಜನತಾ ಜಲಧಾರೆ ರಥಯಾತ್ರೆಗೆ ಶಾಸಕ ನಾಡಗೌಡರಿಂದ ಚಾಲನೆ…!!!

Listen to this article

ಜನತಾ ಜಲಧಾರೆ ರಥಯಾತ್ರೆಗೆ ಶಾಸಕ ನಾಡಗೌಡರಿಂದ ಚಾಲನೆ.

ಸಿಂಧನೂರು : ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಜೆಡಿಎಸ್ ಹಮ್ಮಿಕೊಂಡಿರುವ ‘ಜನತಾ ಜಲಧಾರೆ ಗಂಗಾ ರಥಯಾತ್ರೆಗೆ ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ , ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದೆ. ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಜನರ ಆಶ್ರೀವಾದದಿಂದ ಜೆಡಿಎಸ್ ಪಕ್ಷವನ್ಮು ಆಡಳಿತಕ್ಕೆ ಬಂದರೆ ಮುಂದಿನ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಬಾಕಿ ಇರುವ 3 ಲಕ್ಷ ಕೋಟಿ ರೂಪಾಯಿಗಳ ಮತ್ತು ಹೊಸ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಸಮಗ್ರ ಜಲ ಸಂರಕ್ಷಣೆ ಮಾಡುವ ಕುರಿತು ಮನೆ ಮನೆಗೆ ಜನರಿಗೆ ಮುಟ್ಟಿಸಲು ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.ತಾಲೂಕಿನಲ್ಲಿ ಮೂರು ದಿನಗಳ ಕಾಲ ಸಂಚಾರ ಮಾಡಿ ಮಸ್ಕಿ,ಮಾನ್ವಿ, ರಾಯಚೂರು,ಬಳ್ಳಾರಿ,ವಿಜಯನಗರ,ಹರಿಹರ,ಹರಪನಹಳ್ಳಿ ,ಚಿತ್ರದುರ್ಗಾ, ತುಮಕೂರುದಿಂದ ಬೆಂಗಳೂರಿಗೆ ಪ್ರವೇಶಿಸಿ ನಂತರ 15 ವಾಹನಗಳು ಒಂದು ಕಡೆ ಸೇರಿ ಬೃಹತ್ ಮಟ್ಟದ ಸಮಾವೇಶವನ್ನು ಮಾಡಿ ಈ ಎಲ್ಲಾ ನೀರನ್ನು ಪಕ್ಷದ ಕಛೇರಿಯಲ್ಲಿ ಒಂದೆಡೆ ಸಂಗ್ರಹಣೆ ಮಾಡಿ ಗಂಗೆ ಪೂಜೆ ಮಾಡುವ ಮೂಲಕ ರೈತರ ಬೆನ್ನೆಲುಬುಹಾಗಿ ನಿಲ್ಲುತ್ತೆವೆ ಎನ್ನುವ ಸಂಕಲ್ಪ ಮಾಡುತ್ತೆವೆಂದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರು ಬಸವರಾಜ ನಾಡಗೌಡ, ಜೆಡಿಎಸ್ ವಕ್ತಾರ ಚಂದ್ರುಬೂಪಾಲ್ ನಾಡಗೌಡ ,ದಾಸರಿ ಸತ್ಯನಾರಾಯಣ ,ನಾಗನಗೌಡ,ಗೋಪಾಲ್ ರೆಡ್ಡಿ ,ಬಸವರಾಜ ರೆಡ್ಡಿ,ವರದರಾಜ ರೆಡ್ಡಿ , ಚಂದ್ರಪ್ಪ ಭೋವಿ, ಮಲ್ಲಿಕಾರ್ಜುನ ,ವೀರೇಶ ಪತ್ತಾರ, ವೆಂಕೋಬ, ಶರಣಪ್ಪ ಬಸವರಾಜ ಹುಡಾ ಸೇರಿದಂತೆ ಅನೇಕ ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend