ಇಟ್ಟಿಗಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಆಂಜನೇಯಸ್ವಾಮಿ ರಥೋತ್ಸವ…!!!

Listen to this article

ಇಟ್ಟಿಗಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಆಂಜನೇಯಸ್ವಾಮಿ ರಥೋತ್ಸವ.

ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ 18-04-2022 ರ ಸೋಮವಾರದಂದು ಶ್ರೀ ಆಂಜನೇಯ ಸ್ವಾಮಿಯ ಭವ್ಯ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಜೆ ನೆರವೇರಿತು. ಕಳೆದ ಮೂರು ವರ್ಷಗಳಿಂದ ಕರೋನಾ ಲಾಕ್ ಡೌನ್ ನಿಂದ ನಡೆಯದ ರಥ ಈ ವರ್ಷ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ (ಇಟ್ಟಿಗೆಪ್ಪ)ಸ್ವಾಮಿಗೆ ವಿಷೇಶವಾಗಿ ಅಭಿಷೇಕ,ಹೂವಿನ ಅಲಂಕಾರಗಳಿಂದಾದ ಸ್ವಾಮಿಯ ದರ್ಶನ ಪಡೆದು ಧನ್ಯರಾದರು.

ಸಂಜೆಹೊತ್ತಿಗೆ ಶುರುವಾದ ರಥೋತ್ಸವದ ಪಟಾಕ್ಷಿ ಹರಾಜು ಪ್ರಕ್ರಿಯೆಯಲ್ಲಿ ಭಕ್ತರ ಪೈಪೋಟಿಯಲ್ಲಿ ನಡೆದು ಕೊನೆಗೆ ಕ್ಯಾತನ(ಕಾಗಿ) ಮಂಜಪ್ಪ ಇವರ ಮಗನಾದ ದೊಡ್ಡ ಮಲ್ಲೇಶ ಅವರಿಗೆ ರೂಪಾಯಿ Rs-101001 ಒಂದು ಲಕ್ಷದ ಒಂದು ಸಾವಿರದ ಒಂದಕ್ಕೆ ಸವಾಲಾಕಿ ಸ್ವಾಮಿಯ ಪಟಾಕ್ಷಿಯನ್ನ ತಮ್ಮದಾಗಿಸಿಕೊಂಡರು. ನಂತರದಲ್ಲಿ ಯುವಕರು ‘ಲಕ್ಷ್ಮಿ ರಮಣ ಗೋವಿಂದ’, ರಾಮ-ರಾಮ ಗೋವಿಂದ,ಜೈ ಶ್ರೀ ರಾಮ ಎಂದು ಘೋಷಣೆ ಕೂಗುತ್ತಾ ರಥವನ್ನು ಸಂತೋಷದಿಂದ ಎಳೆದರು.ಯುವಕರ ಸಮಾಳ,ನಂದಿಕೋಲಿನ ಕುಣಿತವು ಅದ್ಭುತವಾಗಿತ್ತು. ಭಗವಂತನ ಕೃಪೆಯಿಂದ ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆ ಆಗಿ ರೈತರು ಸಮೃದ್ಧಿಯಿಂದ ಬೆಳೆ ಬೆಳೆದು,ಹೆಮ್ಮಾರಿ ಕರೋನದಂತಹ ಸಾಂಕ್ರಾಮಿಕ ರೋಗಗಳ ಹಾವಳಿ ಕಡಿಮೆ ಆಗಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend