ದಿನಾಂಕ 30-06-2021ರಂದು ಜರ್ಮಲಿ ಗ್ರಾಮ ಪಂಚಾಯಿತಿಯ 2 ನೇ ಸಾಮಾನ್ಯ ಸಭೆ ಜರಗಿತು…!!!

Listen to this article

ದಿನಾಂಕ 30-06-2021ರಂದು ಜರ್ಮಲಿ ಗ್ರಾಮ ಪಂಚಾಯಿತಿಯ 2 ನೇ ಸಾಮಾನ್ಯ ಸಭೆ ಜರಗಿತು.

2021-22 ನೇ ಸಾಲಿನ 15 ನೇ ಹಣಕಾಸಿನ ಕ್ರೀಯಾಯೋಜನೆ ತಯಾರಿಸಲು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಭೆಯಲ್ಲಿ ಸರ್ವ ಸದಸ್ಯರಿಗೆ ತಿಳಿಸಲಾಯಿತು.

ಕುಡಿಯುವ ನೀರಿನ ಬಗ್ಗೆ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು,ಮತ್ತು ಸಮಯ ನಿಗದಿ ಪಡಿಸಿದಂತೆ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ನೀರುಗಂಟಿಗಳಿಗೆ ಸಭೆಯಲ್ಲಿ ಹೇಳಲಾಯಿತು.

ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಲು ಮತ್ತು ರೈತರ ಜಮೀನಿನಲ್ಲಿ ಬದು ನಿರ್ಮಾಣ, ಹಾಗು ದನದ ದೊಡ್ಡಿ ನಿರ್ಮಾಣ, ಕುರಿ ದೊಡ್ಡಿ ನಿರ್ಮಾಣ ಮಾಡಿಕೊಳ್ಳಲು ಸಭೆಯಲ್ಲಿ ತಿಳಿಸಲಾಯಿತು.

ಅದ್ಯೆತೆ ಮೇರಿಗೆ ನರೇಗಾ ಯೋಜನೆಯಲ್ಲಿ ಮಹಿಳಾ ಕೂಲಿ ಕಾರ್ಮಿಕರನ್ನ ಅತಿ ಹೆಚ್ಚು ಸೇರಿಸಿಕೊಂಡು ಕೆಲಸಮಾಡಲು ಮತ್ತು ಕಾಮಗಾರಿ ಸ್ಥಳದಲ್ಲಿ ಕೋವೀಡ್ ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೂಲಿ ಕೆಲಸ ಮಾಡಲು ಸಭೆಯಲ್ಲಿ ಕಾರ್ಮಿಕರ ಗಮನಕ್ಕೆ ತರಲು ಸದಸ್ಯರ ಗಮನಕ್ಕೆ ತರಲಾಯಿತು.

ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಅಲೆಮಾರಿ ಜನಾಂಗದ ವಸತಿ ರಹಿತರ ನಿವೇಶನ ರಹತರ ಕುಟುಂಬಗಳನ್ನ ಸರ್ವೇಮಾಡಿ ಮಾಹಿತಿಯನ್ನು ನಿಗಮಮಂಡಳಿಗೆ ವರದಿ ಕಳಿಹಿಸಿಕೊಡಲು ಸಭೆಯಲ್ಲಿ ತಿಳಿಸಲಾಯಿತು.

ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಖಾಲಿ ಇರುವ ಪ್ರಯಕ್ತ ಜಿಲ್ಲಾ ಪಂಚಾಯಿತಿಗೆ ಅತಿ ಜರೂರು ಮಾಹಿತಿ ಕಳಿಹಿಸಲು ಸಭೆಯಲ್ಲಿ ತಿರ್ಮಾನಿಸಲಾತು.
ರಾಷ್ಟ್ರ ಗೀತೆಯೊಂದಿಗೆ ಸಭೆಯನ್ನ ಮುಕ್ತಾಯಗೊಳಸಲಾಯಿತು.

ಅಧ್ಯಕ್ಷತೆ::ಅಧ್ಯಕ್ಷರು ಕೆ ಎಂ ಬಸವರಾಜ.

ಉಪಾಧ್ಯಕ್ಷೆ, ಶ್ರೀಮತಿ ಮಲ್ಲಮ್ಮ ನಾಗರಾಜ್.

ಹಾಗು ಸದಸ್ಯರಾದ ಸಿದ್ದಪ್ಪ ನಾಯಕ,ಮಾರಪ್ಪ,ಅನ್ನಪೂರ್ಣಮ್ಮ,ಓಬಕ್ಕ,ಚನ್ನಮ್ಮ, GR ಸಿದ್ಧೇಶ, ಗೌರಮ್ಮ, ಚಿನ್ನಪ್ಪ,ರಾಮಸ್ವಾಮಿ,ಪಾಪಮ್ಮ, ಪಂಕಜ,ಭಾಗವಹಿಸಿದ್ದರು. ಪಂ ಅ ಅಧಿಕಾರಿ,ಶ್ರೀ ಜಿಲಾನ್ ಎಂ.ಡಿ.
ಕಾರ್ಯದರ್ಶಿ,ಶ್ರೀ ಕೆ,ಹಾಲಸ್ವಾಮಿ.
ಬಿಲ್ ಕಲಕ್ಟರ್, ಜಾತಪ್ಪ,ಶಿವಣ್ಣ ಹಾಗು ನೀರಗಂಟಿಗಳು,ಜವಾನ,ಉಪಸ್ಥಿತರಿದ್ದರು‌

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend