ನಾಯಕನಹಟ್ಟಿ: ವಾಣಿವಿಲಾಸ ಜಲಾಶಯದಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ತರಲಾಯಿತು.!

Listen to this article

ಚಿತ್ರದುರ್ಗ: ನಾಯಕನಹಟ್ಟಿ: ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ ಅವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಲಿದ್ದು, ವಾಣಿವಿಲಾಸ ಜಲಾಶಯದ ನೀರನ್ನು ಕುಡಿಯಬೇಕು ಎಂಬ ಪಟ್ಟಣದ 10 ವಾರ್ಡ್‌ಗಳ ಸಾರ್ವಜನಿಕರ ಕನಸು ನನಸಾಗಲಿದೆ. ಪಟ್ಟಣಕ್ಕೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಮಾರಿಕಣಿವೆಯ ವಾಣಿವಿಲಾಸ ಜಲಾಶಯದಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ತರಲಾಯಿತು. ಆ ನೀರನ್ನು ನೇರವಾಗಿ ಸಾರ್ವಜನಿಕರು ಬಳಸಲು ಯೋಗ್ಯವಿಲ್ಲದ ಕಾರಣ ಪಟ್ಟಣದಲ್ಲಿ ಅತ್ಯಾಧುನಿಕ ಕುಡಿಯುವ ನೀರು ಶುದ್ಧೀಕರಣ ಘಟಕವನ್ನು ₹ 2.3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ನಗರ ನೀರು ಸರಬರಾಜು ಘಟಕದ ಎಂಜಿನಿಯರ್ ಎಚ್.ಬಿ. ಓಬನಾಯಕ ಮಾತನಾಡಿ, ‘ಪಟ್ಟಣದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರು ಶುದ್ಧೀಕರಣ ಘಟಕವು ದಿನಕ್ಕೆ 20 ಲಕ್ಷದ 10 ಸಾವಿರ ಲೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ ವಾಣಿವಿಲಾಸ ಸಾಗರದ ಜಲಾಶಯದಿಂದ ದಿನವೊಂದಕ್ಕೆ 10 ಲಕ್ಷದ 81 ಸಾವಿರ ಲೀಟರ್‌ಗಳಷ್ಟು ನೀರು ಸರಬರಾಜು ಆಗುತ್ತಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ತುಂಗಭದ್ರಾ ಹಿನ್ನೀರಿನಿಂದಲೂ ಕುಡಿಯುವ ನೀರಿನ ಸರಬರಾಜು ಆಗಲಿದ್ದು, ಇದರ ನೀರನ್ನು ಶುದ್ಧೀಕರಣ ಮಾಡಲು ಸಹಕಾರಿಯಾಗಲಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 10 ವಾರ್ಡ್‌ಗಳ ಪ್ರತಿಯೊಬ್ಬರಿಗೂ ದಿನವೊಂದಕ್ಕೆ ತಲಾ 135 ಲೀಟರ್‌ಗಳಷ್ಟು ನೀರು ನೀಡುವ ಗುರಿಯನ್ನು ಹೊಂದಲಾಗಿದೆ. ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಆರಂಭದ 3 ತಿಂಗಳು ನೀರು ಸರಬರಾಜು ಮಾಡುವ ತರಬೇತಿಯನ್ನು ನೀಡಲಾಗುವುದು. ನಂತರ 2 ವರ್ಷಗಳವರೆಗೂ ದುರಸ್ತಿ ಮಾಡುವುದು ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ’ ಎಂದು ಹೇಳಿದರು. ಪಟ್ಟಣದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಾಣಿವಿಲಾಸ ಜಲಾಶಯದ ಶುದ್ಧ ಕುಡಿಯುವ ನೀರಿನ ಘಟಕವು ಆರಂಭವಾಗುತ್ತಿದ್ದು, ಪಟ್ಟಣದ ನಾಗರಿಕರು ಶುದ್ಧ ಕುಡಿಯುವ ನೀರನ್ನು ಬಳಸುವ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend