ಕೂಡ್ಲಿಗಿ:ಗೊಬ್ಬರ ಬೀಜಕ್ಕಾಗಿ ಪರದಾಟ-ಕ್ರಮಕ್ಕೆ ಸಂಘಟನೆಗಳ ಆಗ್ರಹ…!!!

Listen to this article

ಕೂಡ್ಲಿಗಿ:ಗೊಬ್ಬರ ಬೀಜಕ್ಕಾಗಿ ಪರದಾಟ-ಕ್ರಮಕ್ಕೆ ಸಂಘಟನೆಗಳ ಆಗ್ರಹ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಡಿ.ಎ.ಪಿ ಸೇರಿದಂತೆ ಕೆಲ ಗೊಬ್ಬರಕ್ಕಾಗಿ ಅಂಗಡಿ ಮಳಿಗೆ ಹಾಗೂ ಕೃಷಿ ಕಚೇರಿ ಮುಂದೆ ಜನಗಳ ತಳ್ಳಾಟ..! ನೂಕಾಟ ನಡೆಸಿದ್ದಾರೆ.

ಇದು ಕೇವಲ ಕೂಡ್ಲಿಗಿ ಪಟ್ಟಣದಲ್ಲಿ ಮಾತ್ರವಲ್ಲ ತಾಲೂಕಿನ ಬಹುತೇಕ ಅಂಗಡಿ ಮುಗ್ಗಟ್ಟು ಗಳಲ್ಲಿ ಕಂಡುಬಂದಿದೆ.ತಾಲೂಕಿನ ರೈತ ಸಂಪರ್ಕ ಕೇಂದ್ರದ ಹಾಗೂ ಅಂಗಡಿಗಳ ಬಳಿ ರೈತರ ನೂಕುನುಗ್ಗಲು ನಿರ್ಮಾಣವಾಗಿತ್ತು, ಕೋವಿಡ್ ನಿಯಮ ಪಾಲನೆ ಇಲ್ಲ
ಸಾಮಾಜಿಕ ಅಂತರ,ಮಾಸ್ಕ್ ಮಂಗಮಾಯವಾಗಿತ್ತು.
ಇದು ಜಿಲ್ಲೆಯ ಹಾಗೂ ತಾಲೂಕಿನ ಜನ ಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ರೈತ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು ಸಮರ್ಪಕವಾಗಿ ಗೊಬ್ಬರ ಸರಬರಾಜಗಿಲ್ಲ.
ಕೆಲವೆಡೆಗಳಲ್ಲಿ ಬೀಜ ಗೊಬ್ಬರಗಳನ್ನ ಬೇಕಾ ಬಿಟ್ಟಿ ಧರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಈ ಸಂಬಂಧಿಸಿದಂತೆ ಕೃಷಿ ಅಧಿಕಾರಿಗಳು ಕೂಡ ಮೌನಕ್ಕೆ ಶರಣಾಗಿದ್ದಾರೆ,ಅವರ ಕಚೇರಿ ಆವರಣದಲ್ಲಿಯೇ ಮದ್ಯ ವರ್ತಿಗಳು ಬೀಡು ಬಿಟ್ಟಿರುತ್ತಾರೆ.ಅಧಿಕಾರಿಗಳ ಮುಂದೆಯೇ ರೈತರನ್ನ ದಾರಿತಪ್ಪಿಸುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆಂದು ರೈತ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿದ ಪಕ್ಷಗಳ ಮುಖಂಡರು,ಪ್ರಭಾವಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪ್ರತಿಷ್ಠಿತ ಸಂಘಟನೆಗಳ ಪದಾಧಿಕಾರಿಗಳಿದ್ದಾರೆ.ಅವರು ಕೇವಲ ಪ್ರಚಾರಕ್ಕೆ ಹಾಗೂ ಹೆಸರಿಗೆ ಮಾತ್ರ ಜನಪ್ರತಿನಿಧಿಗಳೆಂಬುದನ್ನು ಅವರೇ ಈ ಮೂಲಕ ಸಾಬೀತು ಮಾಡಿದ್ದಾರೆ. ಇವರು ಯಾರೂ ರೈತರಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ, ವಿಪರ್ಯಾಸ ಎಂದರೆ ತಾಲೂಕು ಮಟ್ಟದ ಅಧಿಕಾರಿಗಳು ಈ ನಿಟ್ಟಿನಲ್ಲಿ ಮೌನ ವಹಿಸಿದ್ದಾರೆ. ಜಿಲ್ಲಾ ಉಸ್ಥುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಅಗತ್ಯ ಸೌಲಭ್ಯಗಳನ್ನ ಸಮರ್ಪಕವಾಗಿ ಒದಗಿಸಬೇಕು,ರೈತರಿಗೆ ಅನ್ಯಾಯ ಮೋಸವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ರೈತ ಮುಖಂಡರು ಹಾಗೂ ಹಲವು ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend