ಬಿತ್ತನೆ ಬೀಜಕ್ಕಾಗಿ ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಟ್ಟ ಬಿತ್ತನೆ ಬೀಜಕ್ಕಾಗಿ ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಟ್ಟ ಸಾರ್ವಜನಿಕರು…!!!

Listen to this article

ಬಿತ್ತನೆ ಬೀಜಕ್ಕಾಗಿ ಸಾಮಾಜಿಕ ಅಂತರಕ್ಕೆ ಎಳ್ಳು ನೀರು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಕಿಲ್ಲರ್ ಕರೋನವೈರಸ್ ಹಳ್ಳಿಗಳಿಗೆ ವಕ್ಕರಿಸಿ ಜನರ ಜೀವ ಹಿಂಡುತಿದೆ ಇದರ ನಡುವೆ ತಾಲೂಕಿನ ಹೊಸಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂದೆ ಸುತ್ತಮುತ್ತಲಿನ ಗ್ರಾಮದ ಜನರು ಬಿತ್ತನೆ ಬೀಜಕ್ಕಾಗಿ ಸಾಮಾಜಿಕ ಅಂತರಕ್ಕೆ ಎಳ್ಳುನೀರು ಬಿಟ್ಟು ಗುಂಪು ಗುಂಪಾಗಿ ಸೇರಿ ಕೋರೋನ ಸ್ವಾಗತಿಸಿ ದಂತಾಗಿದ್ದು ಇದರಿಂದ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಹೊಸಹಳ್ಳಿಯ ಹೋಬಳಿಯಲ್ಲಿ ಮಳೆಯಾಗಿರುವುದರಿಂದ ರೈತರು ಹೊಲಗದ್ದೆಗಳನ್ನು ಮಾಡಿಕೊಂಡಿದ್ದು ಮುಂಗಡವಾಗಿ ಬಿತ್ತನೆ ಬೀಜಗಳನ್ನು ಖರೀದಿಸಲು ಹೊಸಹಳ್ಳಿ ಗ್ರಾಮದಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಸುತ್ತಮುತ್ತಲಿನ ಆಲೂರು ಕಾನಾಮಡುಗು ಕೆಂಚಮಲ್ಲನಹಳ್ಳಿ ಹಿರೇಕುಂಬಳಗುಂಟೆ ಹಾರಕಬಾವಿ ಪೂಜಾರಹಳ್ಳಿ ಗ್ರಾಮದ ನೂರಾರು ಜನರು ಮಾಸ್ಕ್ ಇಲ್ಲದೆ, ದೈಹಿಕ ಅಂತರವಿಲ್ಲದೆ ಇರುವುದು ಕಂಡು ಬಂತು.
ಬೆಳಗ್ಗೆ 7:00 ಇಂದ ಸರದಿ ಸಾಲಿನಲ್ಲಿ ನಿಂತಿದ್ದರು ನಂತರ ನನಗೆ ಬಿತ್ತನೆ ಬೀಜ ಸಿಗುವುದಿಲ್ಲ ಎಂಬ ಗಡಿಬಿಡಿಯಲ್ಲಿ ಜನರು ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ತಮಗೆ ತೋಚಿದ ಹಾಗೆ ಗುಂಪುಗುಂಪಾಗಿ ನಿಂತಿದ್ದನ್ನು ನೋಡಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದೆ ಸುಮ್ಮನೆ ಇರುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಥಳೀಯ ಜನರು ಪ್ರಶ್ನಿಸಿದ್ದಾರೆ.

ವರದಿ,ಕೆಎಸ್, ವಿರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend