ಸಾಕಿದ, ಬೀದಿ ನಾಯಿ ಕಚ್ಚಿದಾಗ ರ್ಯಾಬಿಪೂರ್ ಲಸಿಕೆ ಪಡೆಯಿರಿ: ಡಿಎಚ್‍ಒ ಡಾ.ಜನಾರ್ಧನ…!!!

Listen to this article

ಸಾಕಿದ, ಬೀದಿ ನಾಯಿ ಕಚ್ಚಿದಾಗ ರ್ಯಾಬಿಪೂರ್ ಲಸಿಕೆ ಪಡೆಯಿರಿ: ಡಿಎಚ್‍ಒ ಡಾ.ಜನಾರ್ಧನ
ಬಳ್ಳಾರಿ,: ಯಾರಿಗಾದರೂ ನಾಯಿ ಕಚ್ಚಿದ ತಕ್ಷಣ ಸೋಪು ಮತ್ತು ನೀರಿನಿಂದ ಗಾಯವನ್ನು ತೊಳೆದು ತಕ್ಷಣವೇ ಹತ್ತಿರದ ಸಕಾಈರಿ ಆಸ್ಪತ್ರೆಯಲ್ಲಿ ರ್ಯಾಬಿಪೂರ ಲಸಿಕೆಯನ್ನು ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ಅವರು ಮನವಿ ಮಾಡಿದ್ದಾರೆ.
ಮಂಗಳವಾರ ನಗರದ ಕೌಲ್‍ಬಜಾರ್‍ನ ಆಶ್ರಯ ಕಾಲೋನಿಯ ವಟ್ಟಪ್ಪಕೇರಿ ಬಡಾವಣೆಯಲ್ಲಿ ನಾಯಿ ಕಡಿತದ ಪ್ರಕರಣಗಳು ವರದಿಯಾದ ಹಿನ್ನಲೆಯಲ್ಲಿ ಭೇಟಿ ನೀಡಿ ಅವರು ಮಾತನಾಡಿದರು.


ನಾಯಿ ಕಚ್ಚಿದಾಗ ಅಥವಾ ಉಗುರಿನಿಂದ ಪರಚಿದಲ್ಲಿ ಗಾಯಕ್ಕೆ ಏನನ್ನು ಹಚ್ಚದೆ ಸೋಪಿನ ನೀರಿನಿಂದ ಗಾಯವನ್ನು ತೊಳೆದು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಪಡೆಯಬೇಕು. ಚುಚ್ಚು ಮದ್ದುಹಾಕಿಸದೇ ಮೂಡನಂಬಿಕೆಗಳಾದ ನೀರು ಕುಡಿಸುವುದು, ದಾರ ಕಟ್ಟಿಸುವುದು ಮುಂತಾದವುಗಳಿಗೆ ಆಸ್ಪದ ನೀಡಬಾರದು ಎಂದರು.
ಮನೆಯಲ್ಲಿನ ಸಾಕು ನಾಯಿಗಳಿಗೆ ನಿಯಮಿತವಾಗಿ ಪಶು ಇಲಾಖೆಯಡಿಯಲ್ಲಿ ರೇಬೀಸ್ ನಿರೋಧಕ ಚುಚ್ಚುಮದ್ದು ಹಾಕಿಸುವ ಮೂಲಕ ರೇಬೀಸ್ ಖಾಯಿಲೆ ಬಾರದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ನಾಯಿ ಕಡಿತದ ಸಂದರ್ಭದ ಮುಂಜಾಗೃತೆ ಬಹಳ ಅತ್ಯಗತ್ಯವಾಗಿದ್ದು, ಇದನ್ನು ತಿಳಿಸಲು ಮನೆ ಮನೆಗೆ ವೈದ್ಯಕೀಯ ತಂಡ ಭೇಟಿ ನೀಡಲಿದ್ದು, ಸಾರ್ವಜನಿಕರು ಸಹಕರಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ, ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ವೈದ್ಯಾಧಿಕಾರಿ ಡಾ.ಕಾಶಿ ಪ್ರಸಾದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಕಾಲರಾ ತಂಡದ ಶಿವಕುಮಾರ್, ಗೋವಿಂದಪ,್ಪ ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿಯವರಾದ ಶೋಭಾ, ದಾನಕುಮಾರಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ವರದಿ. ವಿರೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend