ರೈತರ ಸಂಘದಿoದ ಪಟ್ಟಣದಲ್ಲಿರುವ ಕೊಳಚೆ ತೆರವುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ…!!!

Listen to this article

ಹೊಳಲ್ಕೆರೆ : ಹೆಚ್ಚ್ಚುತ್ತಿರುವ ಘನತ್ಯಾಜ್ಯ, ಎಲ್ಲೇಂದರಲ್ಲೇ ಬಿದ್ದಿರುವ ಪ್ಲಾಸ್ಟಿಕ್, ಕೊಳಚೆ ಯಿಂದ ಭರ್ತಿಯಾದ ಚರಂಡಿ, ಕತ್ತಲೆ ತುಂಭಿಕೊoಡ ಬೀದಿಗಳು ಇವೇಲ್ಲ ಹೊಳಲ್ಕೆರೆ ಪಟ್ಟಣವನ್ನು ಹೊಲಸುಕೆರೆಯನ್ನಾಗಿಸಿದೆ. ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ತ್ಯಾಜ್ಯ, ಕೊಳಚೆ, ಪ್ಲಾಸ್ಟಿಕ್ ನಿಯಂತ್ರಣಕ್ಕೆ ಪುರಸಭೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪುರಸಭೆ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ ದಿಂದ ಚರಂಡಿಗಳಲ್ಲಿ ಕೊಳಚೆ ಭರ್ತಿಯಾಗಿ ಸೊಳ್ಳೆ ಹಂದಿ ನಾಯಿಗಳ ಉಪಟಳದ ಜತೆಗೆ ಡ್ವೆಂಗು, ಮಲೇರಿಯಾ ಸಂಕ್ರಾಮಿ ರೋಗ ಪತ್ತೆಯಾಗಿ ಜನರಲ್ಲಿ ಭೀತಿ ಸೃಷ್ಠಿಯಾಗಿದೆ. ಬಡಾವಣೆ ಚರಂಡಿಗಳಲ್ಲಿ ಕೊಳಚೆ ತೆರವುಗೊಳಿಸುವಲ್ಲಿ ಪೌರಕಾರ್ಮಿಕರು ನಿರ್ಲಷ್ಯಿಸಿದ್ದಾರೆ. ಕಚೇರಿಗಳಿಗೆ ದೂರು ತಂದ ಜನರಿಗೆ ಸಿಬ್ಬಂದಿ ಸ್ವಂಧಿಸುವುದಿಲ್ಲ. ಸಣ್ಣಪುಟ್ಟ ಕೆಲಸಕ್ಕಾಗಿ ನೂರಾರು ಭಾರಿ ಕಚೇರಿಗೆ ಅಲೆದಾಡಬೇಕು. ಕಚೇರಿಯಲ್ಲಿ ಭ್ರಷ್ಠಚಾರ ಹೆಚ್ಚಾಗಿದೆ. ಜನಪರವಾಗಿ ಕರ್ತವ್ಯ ನಿರ್ವಹಿಸದ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಬೇಕು. ಪಟ್ಟಣದ ನೈರ್ಮಲ್ಯ ಕಾಪಾಡಬೇಕು. ಜನ ಜಾನುವಾರುಗಳಿಗೆ ಮಾರಕವಾಗಿರುವ ಹೊಸದುರ್ಗ ರಸ್ತೆ, ಗಣಪತಿ ದೇವಸ್ಥಾನದ ಹಿಂದಿನ ಚರಂಡಿಯಲ್ಲಿ ಶೇಖರಣಿಯಾಗಿರುವ ತ್ಯಾಜ್ಯವನ್ನು ಸ್ವಚ್ಚಗೊಳಿಸಬೇಕು. ಖಾಲಿ ನಿವೇಶದಲ್ಲಿ ಬೆಳೆದು ನಿಂತ ಮುಳ್ಳಿನ ಗೀಡ ತೆರವುಗೊಳಿಸಬೇಕು. ಸಕಾಲಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕು. ಪಟ್ಟಣದಲ್ಲಿ ಹಾದು ಹೊಗಿರುವ ರಾಷ್ಟಿಯ ಹೆದ್ಧಾರಿಯಲ್ಲಿ ಕತ್ತಲೆ ಆವರಿಸಿ ಆಪಘಾತಗಳು ಹೆಚ್ಚಾಗಿವೆ. ರಸ್ತೆಯ ಎರಡು ಬದಿಯಲ್ಲಿ ಪ್ರಕರ ಬೆಳಕಿನ ಬೀದಿ ದೀಪ ಆಳವಡಿಸಬೇಕೆಂದು ಆಗ್ರಹಿಸಿದರು.
ರೈತರ ಸಂಘದ ಅಧ್ಯಕ್ಷ ಸಿದ್ದರಾಮಪ್ಪ, ಕಾರ್ಯದರ್ಶಿ ಅಜ್ಜಯ್, ನಿಕಟ ಪೂರ್ವ ಅಧ್ಯಕ್ಷ ರಂಗಸ್ವಾಮಿ, ಸ್ಥಾಪಕಾಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಸನಾಉಲ್ಲಾ, ಕಾಂತರಾಜ್, ಗುರುರಾಜ್ ಖಜಾಂಚಿ ಶಿವಮೂರ್ತಿ, ಬಸಪ್ಪ, ಸಣ್ಣಕ್ಕಿ ಪ್ರಭಾಕರ್, ರವಿಕುಮಾರ್ ಲೋಕಮಾನ್ಯ ರೈತರು ಉಪಸ್ಥಿತರಿದ್ದರು…

ವರದಿ. ಸುರೇಶ್, ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend