ಕೋವಿಡ್ ನಾಲ್ಕನೆ ಅಲೆ ಮುಂಜಾಗ್ರತಾ ಸಭೆ ಅಗತವಿರುವ್ಯ ಆಕ್ಸಿಜನ್ ಬೆಡ್, ವೆಂಟಿಲೇಟರ್, ಔಷಧೋಪಾಚಾರಕ್ಕೆ ಸೂಚನೆ: ಡಿಸಿ ಮಾಲಪಾಟಿ…!!!

Listen to this article

ಕೋವಿಡ್ ನಾಲ್ಕನೆ ಅಲೆ ಮುಂಜಾಗ್ರತಾ ಸಭೆ
ಅಗತವಿರುವ್ಯ ಆಕ್ಸಿಜನ್ ಬೆಡ್, ವೆಂಟಿಲೇಟರ್, ಔಷಧೋಪಾಚಾರಕ್ಕೆ ಸೂಚನೆ: ಡಿಸಿ ಮಾಲಪಾಟಿ
ಬಳ್ಳಾರಿ,: ಕೋವಿಡ್‍ನ ನಾಲ್ಕನೇ ಅಲೆಯನ್ನು ಎದುರಿಸಲು ಅಗತವಿರುವ್ಯ ಆಕ್ಸಿಜನ್ ಬೆಡ್, ವೆಂಟಿಲೇಟರ್‍ಗಳನ್ನು ಸಿದ್ಧಪಡಿಕೊಳ್ಳುವಂತೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್ ಮುಂಜಾಗ್ರತಾ ಕ್ರಮಗಳ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳು ಮತ್ತು ಆಕ್ಸಿಜನ್ ಬೆಡ್‍ಗಳು ಸೇರಿದಂತೆ ಅಗತ್ಯವಿರುವ ವೆಂಟಿಲೇಟರ್‍ಗಳನ್ನು ಆಳವಡಿಸಿ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಐಸಿಯು ಬೆಡ್‍ಗಳ ವಿವರ: ವಿಮ್ಸ್ 05, ಜಿಲ್ಲಾ ಆಸ್ಪತ್ರೆ 05, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಡೂರು 2, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿರುಗುಪ್ಪ 2, ತೋರಣಗಲ್ಲಿನ ಸಂಜೀವಿನಿ ಆಸ್ಪತ್ರೆಯಲ್ಲಿ 05 ಬೆಡ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು.
ಆಕ್ಸಿಜನ್ ಬೆಡ್‍ಗಳು: ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ನಾಲ್ಕನೇ ಅಲೆ ಮುಂಜಾಗ್ರತೆ ಕ್ರಮವಾಗಿ ವಿಮ್ಸ್‍ನಲ್ಲಿ 10, ಜಿಲ್ಲಾ ಆಸ್ಪತ್ರೆ 10, ಸಂಡೂರು 5, ಸಿರುಗುಪ್ಪ 5, ಮೋಕಾ 5, ತೋರಣಗಲ್ಲು 5, ರೂಪನಗುಡಿ 5, ತೆಕ್ಕಲಕೋಟೆ 5, ಕುರುಗೊಡು 5, ಕಂಪ್ಲಿ 5, ಸಂಜೀವಿನಿ ಜಿಂದಾಲ್ ಆಸ್ಪತ್ರೆ 5 ಆಕ್ಸಿಜನ್ ಬೆಡ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಭ್ಯವಿರುವ ಸಿಲಿಂಡರ್‍ಗಳು: ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 530 ಆಕ್ಸಿಜನ್ ಜಂಬೋ ಸಿಲಿಂಡರ್‍ಗಳು ಲಭ್ಯವಿದ್ದು, 1500 ಎಲ್‍ಪಿಎಂ ಸಾಮಥ್ರ್ಯದ 03 ಆಕ್ಸಿಜನ್ ಉತ್ಪಾದನಾ ಘಟಕಗಳಿವೆ. ಉತ್ಪಾದನಾ ಘಟಕಗಳ 05 ಆಕ್ಸಿಜನ್ ಸಂಗ್ರಹಣ ಘಟಕಗಳಿವೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಇದ್ದರು.

ವರದಿ. ವಿರೇಶ್, ಸಿರಿಗುಪ್ಪ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend