ಕೋವಿಡ್ 19 ಪಾಲನೆ ಒಳಗಡೆ ಸಂತೆ ಕಾನಹೊಸಹಳ್ಳಿ…!!!

Listen to this article

ಕೋವಿಡ್ 19 ಪಾಲನೆ ಒಳಗಡೆ ಸಂತೆ ಕಾನ ಹೊಸಹಳ್ಳಿ.

ವಿಜನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
08:06. 2021 ಮಂಗಳವಾರ ಕಾನಹೊಸಹಳ್ಳಿ ಸಂತೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸ್ ಠಾಣೆಯ ಅಧಿಕಾರಿಗಳು ತರಕಾರಿ ಮಾರಾಟಕ್ಕಾಗಿ ನೇಮಕ ಮಾಡಿದ ,ಎಸ್ ಕೆ ಡಿಡಿವಿ ಪ್ರೌಢ ಶಾಲೆಯ ಆಟದ ಮೈದಾನದ ಆವರಣದಲ್ಲಿ ಸರ್ಕಾರದ ಆದೇಶದಂತೆ, ಕೋವಿಡ್ 19 ರ ಮಾರ್ಗಸೂಚಿಯನ್ವಯ ಮಹಾಮಾರಿಯನ್ನು ಹಿಮ್ಮೆಟ್ಟಿಸುವ ಜನರ ಆರೋಗ್ಯವನ್ನು ರಕ್ಷಿಸುವ ಸಲುವಾಗಿ ಇಲಾಖೆಯವರು ಮಾರ್ಕ್ ಮಾಡಿದ ಜಾಗದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡು, ತರಕಾರಿ ಮಾರುವ ವ್ಯಾಪಾರಿಗಳು ತರಕಾರಿಯನ್ನು ಮಾರುತ್ತಿದ್ದರು. ತರಕಾರಿಯನ್ನು ಕೊಂಡು ಕೊಳ್ಳಲಿಕ್ಕೆ ಬಂದವರು ಕೂಡ ಮಾಸ್ಕನ್ನು ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಂಡು ತರಕಾರಿಯನ್ನು ಕೊಂಡುಕೊಳ್ಳುತ್ತಿದ್ದಾದೃಶ್ಯ ಕಂಡು ಬಂದಿತು. ಈ ಸಂದರ್ಭದಲ್ಲಿ ಕಾನಹೊಸಹಳ್ಳಿ ಪೊಲೀಸ್ ಠಾಣೆಯ,ಎ ಎಸ್ಐ. ಕೆ ಗೋವಿಂದಪ್ಪನವರು,ಎ. ಮುಖ್ಯಪೇದೆ ಹೊಸಕೆರೆ ಮಂಜುನಾಥ್ ರವರು, ಸಂತೆಗೆ ತರಕಾರಿ ಕೊಂಡುಕೊಳ್ಳಲು ಬಂದವರಿಗೆ ಕರೋನ ಎರಡನೇ ಅಲೆ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಸ್ಕನ್ನು ಧರಿಸಿ ಕೊಳ್ಳುವಂತೆ, ಸೂಚನೆ ನೀಡಿದರು ಈ ಸಂದರ್ಭದಲ್ಲಿ ಸಂತೆಯನ್ನು ಮಾಡಲು ಬಂದ ಸಾರ್ವಜನಿಕರು ವ್ಯಾಪಾರಿಗಳು ಉಪಸ್ಥಿತರಿದ್ದರು..

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend