ಇಟ್ಟಿಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 15ರಿಂದ 18ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಅಭಿಯಾನ…!!!

Listen to this article

ಇಟ್ಟಿಗಿ ಸಮುದಾಯ ಆರೋಗ್ಯ ಕೇಂದ್ರದಿಂದ ಲಸಿಕಾ ಅಭಿಯಾನ.15ರಿಂದ 18 ವರ್ಷದವರೆಗಿನವರಿಗೆ ಕೊವಾಕ್ಸಿನ್ ಲಸಿಕೆ ನೀಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಇದಕ್ಕೆ ಈಗಾಗಲೇ ಮೊನ್ನೆ ಹೊಸ ವರ್ಷ ಆರಂಭ ದಿನ C0-WIN ಪೋರ್ಟಲ್ ನಲ್ಲಿ ದಾಖಲಾತಿ ಆರಂಭವಾಗಿದೆ. ಇಂದು ಲಸಿಕೆ ಆರಂಭಗೊಂಡ ನಂತರ ಸ್ಥಳದಲ್ಲಿಯೇ ಬಂದು ದಾಖಲಾತಿ ಕೂಡ ಮಾಡಿಕೊಳ್ಳಬಹುದಾಗಿದೆ.

ಇದರನ್ವಯ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ ದಿನಾಂಕ 3/1/2022 ರ ಸೋಮವಾರದಂದು ಸರ್ಕಾರದ ಆದೇಶದಂತೆ ಕರೋನ ಲಸಿಕಾ ಅಭಿಯಾನವನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಟ್ಟಿಗಿಯ ವೈದ್ಯಕೀಯ ಅಧಿಕಾರಿಗಳಾದ ಮೆಹಬೂಬ್ ಅಲಿ ಹಾಗೂ 5ಜನ ನರ್ಸ ಸಿಬ್ಬಂದಿ ಮತ್ತು 8ಜನ ಆಶಾ ಕಾರ್ಯಕರ್ತೆಯರನ್ನೊಳಗೊಂಡು ಒಟ್ಟಾರೆಯಾಗಿ ಸಮುದಾಯ ಆರೋಗ್ಯ ಕೇಂದ್ರದ ಸರ್ವ ಸಿಬ್ಬಂದಿಗಳು ಇಟ್ಟಿಗಿಯ. ಕೆ ಎನ್ ಎಸ್ ಸಿ ಪ್ರೌಢಶಾಲೆ,ಸಿದ್ದೇಶ್ವರ ಕಾಲೇಜ್, ಮೊರಾರ್ಜಿ ವಸತಿ ಶಾಲೆ,ಎಸ್ ಬಿ ಪಿ ಓ ಪ್ರೌಢಶಾಲೆಗಳಿಗೆ ತೆರಳಿ ಕರೋನ ಚುಚ್ಚುಮದ್ದುನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕೊವಾಕ್ಸಿನ್ ಮೊದಲ ಡೋಸ್ ಪಡೆದುಕೊಂಡ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುತ್ತದೆ ಎಂದು ಲಸಿಕೆ ಪಡೆದವರಿಗೆ ಮಾಹಿತಿ ತಿಳಿಸಿದರು.ಇನ್ನೂ ಉಳಿದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮುಂದಿನ ದಿನಗಳಲ್ಲಿ ಲಸಿಕೆ ನೀಡಲಾಗುವುದೆಂದು ಮತ್ತು ಪೂರ್ಣ ಪ್ರಮಾಣದ ಲಸಿಕೆ ನೀಡುವುದೇ ನಮ್ಮ ಗುರಿ ಮತ್ತು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡರು ನಮ್ಮನ್ನು -ನಮ್ಮ ದೇಶವನ್ನು ಕರೋನದಿಂದ ರಕ್ಷಿಸೋಣ ಎಂದು ವೈದ್ಯಾಧಿಕಾರಿಗಳು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ವರದಿ-ಪ್ರಕಾಶ್ ಆಚಾರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend