ಚುನಾವಣಾ ಸಿಬ್ಬಂದಿ ಜೊತೆ ಹುಗ್ಗಿ ಸವಿದ ಜಿಲ್ಲಾ ಚುನಾವಣಾಧಿಕಾರಿ…!!!

Listen to this article

ಚುನಾವಣಾ ಸಿಬ್ಬಂದಿ ಜೊತೆ ಹುಗ್ಗಿ ಸವಿದ ಜಿಲ್ಲಾ ಚುನಾವಣಾಧಿಕಾರಿ

ಕಲಬುರಗಿ- ಗುಲಬರ್ಗಾ ಲೋಕಸಭಾ (ಪ.ಜಾ) ಕ್ಷೇತ್ರಕ್ಕೆ ಮೇ 7 (ಮಂಗಳವಾರ) ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮಸ್ಟರಿಂಗ್ ಕಾರ್ಯ ವೀಕ್ಷಿಸಲು ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಫಜಲಪೂರ ಸರ್ಕಾರಿ ಪಾಲಿಟೆಕ್ನಿಕ್ ಸೆಂಟರ್‍ಗೆ ಭೇಟಿ ನೀಡಿದಾಗ ಮಧ್ಯಾಹ್ನ ಸಮಯದಲ್ಲಿ ಚುನಾವಣಾ ಸಿಬ್ಬಂದಿ ಜೊತೆ ಹುಗ್ಗಿ ಸವಿಯುವ ಮೂಲಕ ಪೋಲಿಂಗ್ ಸಿಬ್ಬಂದಿಗೆ ನೀಡಲಾಗುತ್ತಿರುವ ಊಟ ಪರೀಕ್ಷಿಸಿದರು. ನಂತರ ಊಟ ಚೆನ್ನಾಗಿದೆ ಎಂದು ಮೆಚ್ಚುಗೆ ಸಹ ವ್ಯಕ್ತಪಡಿಸಿದರು.

ಮಸ್ಟರಿಂಗ್ ಕಾರ್ಯ ಸಂದರ್ಭದಲ್ಲಿ ಪೋಲಿಂಗ್ ಸಿಬ್ಬಂದಿ ಉದ್ದೇಶಿಸಿ ಮಾತನಾಡಿ ಮತದಾನ ಸಮಯದಲ್ಲಿ ಯಾವುದೇ ರೀತಿಯಲ್ಲಿ ಗೊಂದಲವಾಗದಂತೆ ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಏನೇ ಸಮಸ್ಯೆ ಇದ್ದಲ್ಲಿ ಸಂಬಂಧಿತ ಎ.ಆರ್.ಓ. ಅಥವಾ ತಮ್ಮ ಗಮನ್ಕಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿಗೆ ಇ.ವಿ.ಎಂ. ಯಂತ್ರ, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿ.ವಿ.ಪ್ಯಾಟ್ ಸೇರಿದಂತೆ ಇನ್ನಿತರ ಸಾಮಗ್ರಿ ಹಾಗೂ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಲಾಯಿತು. ಸಹಾಯಕ ಚುನಾವಣಾಧಿಕಾರಿ ಜಾವೀದ್ ಕಾರಂಗಿ ಇದ್ದರು.

ಮಾದರಿ ಮತಗಟ್ಟೆ,ಪಿಂಕ್ ಬೂತ್ ವೀಕ್ಷಣೆ:

ಇದೇ ಸಂದರ್ಭದಲ್ಲಿ ಅಫಜಲಪೂರ ಪಟ್ಟಣದ ತಾಲೂಕ ಪಂಚಾಯತ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲೆಯ ಜೀವ ಜಲ ಭೀಮಾ ನದಿ, ಬ್ಯಾರೇಜ್ ಹಾಗೂ ಕಬ್ಬುಗಳನ್ನು ಮತಗಟ್ಟೆ ಗೋಡೆ ಮೇಲೆ ಪ್ರತಿಬಿಂಬಿಸುವ ಮಾದರಿ ಮತಗಟ್ಟೆ ಸಂಖ್ಯೆ 169 ಮತ್ತು ಪುರಸಭೆ ಕಚೇರಿಯಲ್ಲಿ ಸ್ಥಾಪಿಸಿರುವ ಸಖಿ ಪಿಂಕ್ ಬೂತ್ ಮತಗಟ್ಟೆ ಸಂಖ್ಯೆ 170ಗೆ ಭೇಟಿ ನೀಡಿದರು. ಸಖಿ ಮತಗಟ್ಟೆಯಲ್ಲಿ ಸ್ಥಾಪಿಸಲಾಗಿರುವ ಸೆಲ್ಫಿ ಬೂತ್‍ನಲ್ಲಿ ಡಿ.ಸಿ ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟರು…

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend