ಹೋರಾಟಗಾರ ಕ್ರಾಂತಿ ಕವಿ “ಗದ್ದರ್” ಇನ್ನಿಲ್ಲ…!!!

Listen to this article

ಹೋರಾಟಗಾರ ಕ್ರಾಂತಿ ಕವಿ “ಗದ್ದರ್” ಇನ್ನಿಲ್ಲ- ಹೈದರಾಬಾದ್: ಅಖಂಡ ಆಂದ್ರಪ್ರದೇಶದಾಧ್ಯಂತ ‘ಗದ್ದರ್’ ಎಂದೇ ಹೆಸರುವಾಸಿ ಯಾಗಿದ್ದ, ತೆಲಂಗಾಣದ ಖ್ಯಾತ ಜಾನಪದ ಕಲಾವಿದ. ಕ್ರ‍ಾಂತಿಕಾರಿ ಹೋರಾಟಗಾರ ಹಾಗೂ ಕವಿ ಗುಮ್ಮಡಿ ವಿಠ್ಠಲ್ ರಾವ್ (77). ಹಲವು ದಿನಗಳಿಂದ ಅನಾರೋಗ್ಯ ಬಳಲುತಿದ್ದರು, ಅವರು ಭಾನುವಾರ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1949 ರಲ್ಲಿ ತೆಲಂಗಾಣದ ತುಪ್ರಾನ್ನಲ್ಲಿ ಜನಿಸಿದ ಗದ್ದರ್ @ವಿಠಲ್ ರಾವ್, ಅವರು ತಮ್ಮ ಕ್ರಾಂತಿಕಾರಿ ಕವಿತೆ ಮತ್ತು ಗಾಯನದ ಮೂಲಕ “ಗದ್ದರ್” ಎಂದೇ ಖ್ಯಾತಿ ಪಡೆದಿದ್ದರು. ಬಹು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ, “ಗದ್ದರ್” ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಕ್ರಾಂತಿಕಾರಿ ಸಾಹಿತ್ಯ ಮತ್ತು ಗಾಯನದ ಮೂಲಕ ‘ತೆಲಂಗಾಣ ಚಳವಳಿಗೆ’ ಹೊಸ ಹುರುಪನ್ನೇ ನೀಡಿದ್ದರು.
2010 ರವೆರೆಗೂ ‘ನಕ್ಸಲಿಸಂ ಚಳವಳಿ’ಯಲ್ಲಿ ಗುರುತಿಸಿಕೊಂಡಿದ್ದ ‘ಗದ್ದರ್”, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋ ವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.
ಕಾಂಗ್ರೆಸ್ ಬೆಂಬಲಿಸಿದ್ದ ಗದ್ದರ್:
2018 ರ ತೆಲಂಗಾಣ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು “ಗದ್ದರ್” ಬೆಂಬಲಿಸಿದ್ದರು. ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ, ರಾಹುಲ್ ಗಾಂಯವರನ್ನೂ ಭೇಟಿ ಮಾಡಿದ್ದರು.
ಅನಾರೋಗ್ಯಕ್ಕೂ ಮೊದಲು ಚುನಾವಣಾ ಅಖಾಡಕ್ಕೆ ಇಳಿಯುವ ಕನಸನ್ನು ಕಂಡಿದ್ದ “ಗದ್ದರ್”, “ಗದ್ದರ್ ಪ್ರಜಾ ಪಾರ್ಟಿ” ಎಂಬ ಹೊಸ ಪಕ್ಷ ಸ್ಥಾಪನೆಗೂ ತಯಾರಿ ನಡೆಸಿದ್ದರು. ಭವಿಷ್ಯದ ಚುನಾವಣೆಯಲ್ಲಿ, ತಾವು ರ್ಸ್ಪಸುವುದಾಗಿಯೂ ಅವರು ಹೇಳಿಕೊಂಡಿದ್ದರು…

ವರದಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend