ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರ ಯೋಜನೆಯಡಿಯಲ್ಲಿ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ, ವೇತನ ಹೆಚ್ಚಿಸುವ ಹಾಗೂ ಉದ್ಯೋಗ ಭದ್ರತೆಯನ್ನು ಕಲ್ಪಿಸಿಕೊಡಲು ಮನವಿ…!!!

Listen to this article

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರ ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ, ವೇತನ ಹೆಚ್ಚಿಸುವ ಹಾಗೂ ಉದ್ಯೋಗ ಭದ್ರತೆಯನ್ನು ಕಲ್ಪಿಸಿ ಕೊಡಬೇಕು ಎಂದು ದಿನಾಂಕ 04/08/2023ರಂದು ಬೆಂಗಳೂರಿನ ವಿಧಾನಸೌಧದಲ್ಲಿರುವ ಪ್ರವಾಸೋದ್ಯಮ ಸಚಿವರ ಕಛೇರಿಗೆ ಕರ್ನಾಟಕ ರಾಜ್ಯ ಪ್ರವಾಸಿ ಮಿತ್ರರ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ನ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿ ಮಿತ್ರರೊಡನೆ. ಮಾನ್ಯ ಸಚಿವರು, ಉಪಸ್ಥಿತಿಯಲ್ಲಿ, ಸಚಿವರ ಆಪ್ತ ಕಾರ್ಯದರ್ಶಿವರು, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು,ಮತ್ತು ಕೆ.ಎಸ್.ಟಿ.ಡಿ.ಸಿ ನಿರ್ದೇಶಕರು ಹಾಗೂ ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷರು ಸಹ ಈ ಸಭೆಯಲ್ಲಿ ಹಾಜರಿರುತ್ತಾರೆ, ಕರ್ನಾಟಕ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ 2015 ರಲ್ಲಿ ಸ್ಥಾಪಿತಗೊಂಡ “ಪ್ರವಾಸಿ ಮಿತ್ರ ಯೋಜನೆ” ಸುಮಾರು ಎಂಟು ವರ್ಷಗಳು ಕಳೆದರೂ ಯೋಜನೆಯಲ್ಲಿ ಅಡಕವಾಗಿರುವ ಮೂಲಭೂತ ಸೌಕರ್ಯಗಳು ,ವೇತನ, ಉದ್ಯೋಗ ಭದ್ರತೆಗಳಾಗಲಿ ಯೋಜನೆ ಅನುಷ್ಠಾನಗೊಳಿಸಿದಾಗ ನಿಂದ ಇಲ್ಲಿಯವರೆಗೂ ಯಾವುದೇ ರೀತಿಯಿಂದ ಇಲಾಖೆಯಿಂದಾಗಲಿ ಸರ್ಕಾರದಿಂದಾಗಲಿ ಪ್ರವಾಸಿ ಮಿತ್ರರಿಗೆ ದೊರಕಿಸಿ ಕೊಟ್ಟಿರುವುದಿಲ್ಲ, ಎಂದು ಯೋಜನೆಯಲ್ಲಿ ಅಡಕವಾಗಿರುವ ಸೌಲಭ್ಯಗಳ ಕೆಲವು ದಾಖಲಾತಿಗಳೊಂದಿಗೆ ಮಾನ್ಯ ಸಚಿವರಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡಲಾಯಿತು. ಮನವಿಗೆ ಸ್ಪಂದಿಸಿದ ಮಾನ್ಯ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಸಚಿವರು ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಡನೆ ಸಭೆ ನಡೆಸಿ ಒಂದು ವಾರದ ಒಳಗಾಗಿ ತಮ್ಮ ಬೇಡಿಕಗಳಾನ್ನು ಈಡೇರಿಸುತ್ತೇವೆ ಎಂದು ಮಾನ್ಯ ಸಚಿವರು ಭರವಸೆ ನೀಡಿರುತ್ತಾರೆ,
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸಿ ಮಿತ್ರರ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಶ್ರೀ ಕೆ ಹನುಮಂತರೆಡ್ಡಿ, ಉಪಾಧ್ಯಕ್ಷರಾದ ಶ್ರೀ ಅಶ್ವಥ್ ರಾಜ್ಯ ಪ್ರಧಾನ ಕಾರ್ಯದರ್ಶಿಯರಾದ ಗಂಗಾಧರ್, ರಾಜ್ಯ ಖಜಂಚಿಯರಾದ ಶ್ರೀಮತಿ ಸುನಿತಾ ಕುಮಾರಿ, ಸಹ ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ಶಕುಂತಲಾ, ರಾಜ್ಯ ನಿರ್ದೇಶಕರಾದ ಶ್ರೀ ರಾಘವೇಂದ್ರ ರಾಜ ನಿರ್ದೇಶಕಿ ಶ್ರೀಮತಿ ವಿಜಯಲಕ್ಷ್ಮಿ, ಹಾಗೂ ಇನ್ನುಳಿದ ರಾಜ್ಯ ಪದಾಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳು ಪದಾಧಿಕಾರಿಗಳು ಮತ್ತು ಸದಸ್ಯರುಗಳು ಹಾಜರಿದ್ದರು..

ವರದಿ. ಮಂಜುನಾಥ್ ದೊಡ್ಡಮನಿ, ಮುನಿರಾಬಾದ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend