ಗ್ರಾಮಪಂಚಾಯಿತಿಯ ಮಟ್ಟದಲ್ಲಿನ ಆಡಳಿತ ವ್ಯವಸ್ಥೆ ಸರಿಯಾಗಿದ್ದರೆ, ರಾಜ್ಯದಲ್ಲಿನ ಪ್ರಾಥಮಿಕ ಹಂತದ ವ್ಯವಸ್ಥೆ ಸುಬಿಕ್ಷಾ…!!!

Listen to this article

ದೇಶದಲ್ಲಿ ಲೋಕಾಯುಕ್ತ ಅಧಿಕಾರಿಗಳು, ಗ್ರಾಮಪಂಚಾಯಿತಿಯ ಮಟ್ಟದಲ್ಲಿನ ಭ್ರಷ್ಟ, ಅಧಿಕಾರಿಗಳನ್ನು, ಮತ್ತು ಆಡಳಿತ ವ್ಯವಸ್ಥೆಯಲ್ಲಿನ ಉಳುಕನ್ನು, ತಿದ್ದಿದರೆ ಒಳಿತು ಯಾಕೆಂದರೆ, ಈ ಒಂದು ಸ್ಥಳೀಯ ಮಟ್ಟದ ಆಡಳಿತ ವ್ಯವಸ್ಥೆ ಮೊದಲು ಸರಿಯಾದರೆ, ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು, ನೆರವೇರಿ ದೇಶ ಸುಬಿಕ್ಷ ವಾಗುವುದರಲ್ಲಿ ಎರಡು ಮಾತಿಲ್ಲ… ಮೊದಲು ಇತ್ತು ಬರಿ, ಶಾಸಕರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕರೆದುಕೊಂಡು ಹೋಗಿ ಪಕ್ಷದ ಬಲವನ್ನು, ಅದಿಕಾರದ ವ್ಯಾಮೋಹಕ್ಕೆ ಒಗ್ಗೂಡಿಸಿ ಅದಿಕಾರದ ಚುಕ್ಕಾಣಿಯನ್ನು ಇಡಿದು, ಹಾಕಿರುವ ಬಂಡವಾಳವನ್ನು ದುಪ್ಪಟ್ಟು ಮಾಡಿ ಅಧಿಕಾರವನ್ನು ಇಡಿದು, ಆಳ್ವಿಕೆ ಮಾಡುವ ಒಂದು ಘಟನೆಗಳು, ಆದರೆ ಇವಾಗ ಈ ಒಂದು ಕೆಟ್ಟ ಅದಿಕಾರದ ಪದ್ಧತಿಗೆ ಗ್ರಾಮಪಂಚಾಯಿತಿಯ ಮಟ್ಟದಲ್ಲಿನ ರಾಜಕೀಯಕ್ಕೆ, ಕಡು ಬಡ ಕುಟುಂಬಗಳೇ, ಬೀದಿಗೆ ಬೀಳುತ್ತೀವೇ ಎಂತ ವಿಪರ್ಯಾಸ,ಇದರ ವಿರುದ್ದವೇ ನಮ್ಮ ಧ್ವನಿ.ಇವತ್ತು ಒಬ್ಬ ಗ್ರಾಮಪಂಚಾಯಿತಿ ಮಟ್ಟದಲ್ಲಿ, ಉನ್ನತ ಮಟ್ಟದಲ್ಲಿನ ಅಧಿಕಾರವನ್ನು ಇಡಿಯಲು, ಸುಮಾರು ಒಬ್ಬ ಮೆಂಬರ್ ಗೆ 10ರಿಂದ 25ಸಾವಿರ ರೂಪಾಯಿ ಗಳನ್ನು ಖರ್ಚು ಮಾಡಿ ಅಧಿಕಾರವನ್ನು ಪಡೆಯುವಲ್ಲಿ ಯಶಸ್ವಿ ಯಾಗುತ್ತರೆ ಅಂದರೆ, ಅದರಲ್ಲಿ ಎಷ್ಟು ಲಾಭ ವೀರಬಹುದು ಎನ್ನುವ ಲೆಕ್ಕವನ್ನು, ಗ್ರಾಮಮಟ್ಟದಲ್ಲಿನ ಒಬ್ಬ ಸಾಮಾನ್ಯ ಪ್ರಜೆಯ, ಒಂದು ಮತಕ್ಕು ಬೆಲೆ ಆ ಒಬ್ಬ ಮತದಾರ ರಾಜ್ಯದಲ್ಲಿ ಯಾವ ಮೂಲೆಯಲ್ಲಿದ್ದರು ಅವರನ್ನು ಇಡಿದು ತಂದು ಮತದಾನವನ್ನು ಮಾಡಿಸಿ ತಮ್ಮ ಅದಿಕಾರದ ಚುಕ್ಕಾಣಿಯನ್ನು ಇಡಿಯುವಲ್ಲಿ ಯಶಸ್ವಿಯಾಗುತ್ತರೆ ಅಂದರೆ, ಇದರ ಇಂದೆ ಎಷ್ಟು ಭ್ರಷ್ಟಾಚಾರ ಅಡಗಿರಬಹುದು ಎನ್ನುವುದನ್ನು ಯಾವೊಬ್ಬ ಪ್ರಜೆ, ಯೋಚನೆ ಮಾಡುವುದಿಲ್ಲ, ಇದನ್ನು ಯೋಚನೆ ಮಾಡಿ ಮತ ಚಲಾವಣೆ ಮಾಡಿದರೆ, ಇಡಿ ದೇಶವೇ ಸುಬಿಕ್ಷ… ಎಂತ ವಿಪರ್ಯಾಸ ಎಲ್ಲಿ ಹೋಹಿತು ನಮ್ಮ ದೇಶದ ಸಂಸ್ಕೃತಿ ಇವತ್ತು, ನಮ್ಮ ಸವಲತ್ತನ್ನು ಪಡೆಯಲು ಹರಸಾಹಸ, ಹೆಂಡತಿ ಅಧ್ಯಕ್ಷರು ಆದರೆ ಅಲ್ಲಿ ಗಂಡನದ್ದೇ ಅದಿಕಾರದ ದರ್ಪ ಇಂತಹ ಒಂದು ಕಾನೂನನ್ನು ವಿದ್ಯಾವಂತರು ನೋಡಿದರು ಸಹ ಕಣ್ಣಿದ್ದು, ಕುರುಡರು ಪ್ರಶ್ನೆ ಮಾಡಿದರೆ ನನಗೇನೋ, ನಿನಗೇನೊ, ಎನ್ನುವ ಭಯ, ಮತ್ತು ಸರ್ಕಾರದ ಸಂಬಂಧ ಅಧಿಕಾರಿಗಳು ಸಹ ಇದರ ಬಗ್ಗೆ ಪ್ರಶ್ನೆ ಮಾಡಲು, ಅನರ್ಹ ಏನಿದು ವಿಪರ್ಯಾಸ,ನಾಚಿಕೆ ಆಗಬೇಕು ಈ ಒಂದು ಸಮಾಜಕ್ಕೆ.ಇದರ ವಿರುದ್ಧವೇ ಇನ್ನು ಮುಂದೆ ನಮ್ಮ ಧ್ವನಿ, ಹೆಂಡತಿ ಅಧಿಕಾರದಲ್ಲಿ ಇದ್ದರೆ ಅವರೇ, ಎಲ್ಲಾ ಸಭೆಗೆ ಹಾಜರಾಗಬೇಕು, ಗಂಡ, ಅಥವಾ ಮಕ್ಕಳು ಇಲ್ಲ,ಸಂಬಂಧಪಟ್ಟವರು ಬಂದರೆ ವಿಡಿಯೋ ಸಮೇತ ಸುದ್ದಿ ಕೊಡಿ, ಅಂತವರನ್ನು ಪರಿಪೂರ್ಣವಾಗಿ ಮನೆಗೆಕಳಿ ಸೋಣ(ಸದಸ್ಯತ್ವ ರದ್ದು ಮಾಡಿಸೋಣ ).ಇಂತಹ ಗ್ರಾಮಪಂಚಾಯಿತಿಗಳ ವಿರುದ್ಧ ರಾಜ್ಯಮಟ್ಟದಲ್ಲಿ ನಮ್ಮ ಪತ್ರಿಕಾ ತಂಡ ಸುದ್ದಿಯನ್ನು ಮಾಡುವುದಕ್ಕೆ, ಇಂದಿನಿಂದ ಪಣ ಯಾವ ಜಿಲ್ಲೆಯಲ್ಲಿ, ಅಥವಾ ತಾಲೋಕು, ಅಥವಾ ಗ್ರಾಮಪಂಚಾಯಿತಿಯ ಮಟ್ಟದಲ್ಲಿ ಇಂತಹ ಘಟನೆಗಳು ಜರುಗದಂತೆ, ಅಲ್ಲಿನ ಸಂಬಂಧ ಪಟ್ಟ ಸರ್ಕಾರಿ ಅಧಿಕಾರಿಗಳು ಕಾಳಜಿಯನ್ನು ವಹಿಸಿದರೆ, ಸಮಾಜಕ್ಕೂ ಒಳಿತು ಸರ್ಕಾರಕ್ಕೂ, ಗೌರವ ಎನ್ನುವುದಕ್ಕೆ ನಮ್ಮ ದಿಟ್ಟ ಹೋರಾಟ, ಯಾಕೆಂದರೆ ಇಂತಹ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟು ನೋಡಿದ್ದೇವೆ, ಹೆಂಡತಿ ಅಧ್ಯಕ್ಷರು, ಅಥವಾ ಉಪಾಧ್ಯಕ್ಷರು, ಅಥವಾ ಸದಸ್ಯರು ಆದರೆ, ಅಧಿಕಾರವನ್ನು ನಿಭಾಯಿಸುವುದು ಅವರ ಕುಟುಂಬದವರೇ ಅದನ್ನು ಪ್ರಶ್ನೆ ಮಾಡಲು ಅಲ್ಲಿರುವ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ, ಮುಜುಗರವೋ ಅಥವಾ ಇನ್ನೇನೋ ಮುಂದಿನ ದಿನಮಾನಗಳ ಸುದ್ದಿಗಳಿಗೆ ಉತ್ತರ ಸಿಗುವುದೇ ಕಾಯ್ದು ನೋಡೋಣ.ಇಂತಹ ಒಂದು ಅವ್ಯವಸ್ಥೆಯ ಅದಿಕಾರದ ವಿರುದ್ಧವೇ ನಮ್ಮ ಹೋರಾಟ ಈ ಒಂದು ಹೋರಾಟ ಪ್ರತಿಯೊಂದು ಬಡ ಕುಟುಂಬಕ್ಕೆ ಸೀಮಿತ…..

 

ವರದಿ. ಮಂಜುನಾಥ್, ಎನ್, ಸಂಪಾದಕರು, ಉಕ್ಕಿನಕೋಟೆ ವಾರ ಪತ್ರಿಕೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend