🪔ನಿಧನ ವಾರ್ತೆ: R K ಶೆಟ್ರು- ಕೂಡ್ಲಿಗಿ🪔

Listen to this article

🪔ನಿಧನ ವಾರ್ತೆ: R K ಶೆಟ್ರು- ಕೂಡ್ಲಿಗಿ🪔-ವಿಜಯನಗರ ಜಿಲ್ಲೆ ಕೂಡ್ಲಿಗಿ: ಕೂಡ್ಲಿಗಿ 2ನೇ ವಾರ್ಡ್ ವಾಸಿಗಳು, ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ. ಕನ್ನಡ ಪರ ಸಂಘಟನೆಕಾರರು ಹಾಗೂ ಉದ್ಯಮಿಗಳೆಂದೇ ಗುರುತಿಸಿಕೊಂಡಿರುವ. “ಕನ್ನಡ ಮಿತ್ರರ ಸಂಘ” ಸಂಸ್ಥಾಪಕ ಅಧ್ಯಕ್ಷರು, ಹೋಟೆಲ್ ಮಾಲೀಕರ ಸಂಘದ ಹಿರಿಯ ಮುಖಂಡರು. ಆಧ್ಯಾತ್ಮಿಕ ಚಿಂತಕರೆಂದೇ ಚಿರಪರಿಚಿತರಾಗಿರುವ, “RK ಟವರ್” ಮಾಲೀಕರಾದ ಮಂಗಳೂರು ಮೂಲದ R K ಶೆಟ್ರು (77)ರವರು. ಆ17ರಂದು ಬೆಳಿಗ್ಗೆ ಮಂಗಳೂರಿನ ತಮ್ಮ ಸ್ವಗೃಹದಲ್ಲಿ, ಹೃದಯಘಾತದಿಂದ ನಿಧನರಾಗಿದ್ದಾರೆ. ಅವರು ಪತ್ನಿ ವಿನೋಧ, ಮಕ್ಕಳಾದ ಬಾಂಬೆಯಲ್ಲಿರುವ ಹೋಟೆಲ್ ನ ಉದ್ಯಮಿ ಯೋಗೀಶ್, ಮತ್ತು ಕೂಡ್ಲಿಗಿ ಹೋಟೆಲಿನ ಹಾಗೂ ಲಾಡ್ಜ್ ನ ಉದ್ಯಮಿ
ವಿನಾಯಕ ಇವರುಗಳನ್ನು. ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಂಗಳೂರಿನ ಮೂಲದವರಾದ R K ಶೆಟ್ರು, ಸುಮಾರು ನಾಲ್ಕು ದಶಕದ ಹಿಂದೆಯೇ ಕೂಡ್ಲಿಗಿಯಲ್ಲಿನ ಬಸ್ ನಿಲ್ದಾಣದಲ್ಲಿ. ಕ್ಯಾಂಟೀನ್ ಹೋಟೆಲ್ ಉದ್ಯಮ ಪ್ರಾರಂಭಿಸುವ ಮೂಲಕ, ಕೂಡ್ಲಿಗಿಯಲ್ಲಿ ಹೋಟೆಲ್ ಉದ್ಯಮಿಗಳಾಗಿ ನೆಲೆಯೂರಿದರು. ಕೂಡ್ಲಿಗಿಯಲ್ಲಿ ಕನ್ನಡ ಪರ ಸಂಘಟನೆಗಳ ಜೊತೆ ಒಡನಾಟ ಹೊಂದಿ, ಕನ್ನಡ ಸೇವೆಯಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ ಗೆ “ಕನ್ನಡ ಭವನ” ನಿರ್ಮಾಣಕ್ಕೆ, 30*40ವಿಸ್ತೀರ್ಣದ ಖಾಲಿ ನಿವೇಶನವನ್ನು ದೇಣಿಗೆಯಾಗಿ ನೀಡಿದ್ದಾರೆ. ಅವರು ಪಟ್ಟಣದ ಸಂಡೂರು ರಸ್ತೆಯ KSRTC ಬಸ್ ನಿಲ್ದಾಣದ ಎದುರಿಗಿರುವ, ಶ್ರೀ ರೇಣುಕಾ ರೆಸ್ಟೋರೆಂಟ್ ಹಾಗೂ ಶ್ರೀ ಮೂಕಾಂಬಿಕಾ (R K ಟವರ್)ಲಾಡ್ಜ್ ನ ಮಾಲೀಕರಾಗಿದ್ದಾರೆ. ಪಟ್ಟಣದ 1ನೇವಾರ್ಡ್
ಸರ್ಕಾರಿ ಶಾಲೆಯನ್ನು, ವೈಯಕ್ತಿಕವಾಗಿ ಅಭಿವೃದ್ಧಿ ಪಡಿಸಲು R K ಶೆಟ್ರು ದತ್ತು ಪಡೆದಿದ್ದರು. ಪಟ್ಟಣದ ಬಡ ಕೂಲಿ ಕಾರ್ಮಿಕ ಹಾಗೂ ದಲಿತ ಸಮುದಾಯದ ಮಕ್ಕಳು, ಹೆಚ್ಚಿನ ಪ್ರಮಾಣದಲ್ಲಿ ವ್ಯಾಸಂಗ ಮಾಡುವ ಒಂದನೇ ವಾರ್ಡಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು. ಪ್ರತಿ ವರ್ಷ ಅಲ್ಲಿನ ಮಕ್ಕಳಿಗೆ ಊಟದ ತಟ್ಟೆ ಸೇರಿದಂತೆ, ಪಠ್ಯ ಮತ್ತು ಪಠ್ಯೇತ ಸಲಕರಣೆ ಸಾಮಾಗ್ರಿಗಳನ್ನು. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಇತರೆ ಸೌಕರ್ಯಗಳನ್ನು ಕಲ್ಪಿಸಿ. ಶಾಲೆಯ ಸರ್ವತೋಮುಖ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿನಲ್ಲಿ, ತಮ್ಮನ್ನ ತೊಡಗಿಸಿಕೊಳ್ಳುವುದರ ಮೂಲಕ “ಶಿಕ್ಷಣ ಪ್ರೇಮಿ” ಎನಿನಿಸಿಕೊಂಡಿದ್ದರು, ಅವರು ಆದ್ಯಾತ್ಮಿಗಳೊಂದಿಗೆ ಸದಾ ಒಡನಾಟ ಹೊಂದಿರುತಿದ್ದರು. ಧಾರ್ಮಿಕ ಕೈಂಕರ್ಯಗಳಲ್ಲಿ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ, ಒಲವು ತೋರಿ ಸಕ್ರೀಯವಾಗಿ ತಮ್ಮನ್ನ ತೊಡಗಿಸಿಕೊಂಡು ಆಧ್ಯಾತ್ಮಿಕ ಚಿಂತಕರೆಂದು ಗುರುತಿಸಿಕೊಂಡಿದ್ದರು. ಕನ್ನಡ ಪರ ಹೋರಾಟಕ್ಕಾಗಿ ತಾವೇ ಸ್ವತಃ “ಕನ್ನಡ ಮಿತ್ರರ ಸಂಘ” ಹುಟ್ಟು ಹಾಕಿದ್ದರಲ್ಲದೆ, ಕನ್ನಡ ಪರ ಸಂಘಟನೆಗಳನ್ನು ಸಂಘಟಿಸುವುದರಲ್ಲಿ ನಿರತರಾಗಿದ್ದರು. ಸಾಹಿತಿಗಳ ಒಡನಾಡಿಗಿದ್ದು ಕೊಂಡು ಅವರ ನೋವು ನಲಿವಿಗೆ ಸ್ಪಂಧಿಸುವುದರ ಮೂಲಕ, ಕನ್ನಡ ಸಾಹಿತ್ಯ ಲೋಕದ ಸೇವೆಗೆ ತಮ್ಮನ್ನ ಅರ್ಪಿಸಿಕೊಂಡಿದ್ದರು. ಆಧ್ಯಾತಿಕ ಚಿಂತಕರ ಒಡನಾಡಿ ಹಾಗೂ ಅವರ ಪಾಲಿನ ಆಪತ್ಬಂಧುವಾಗಿ, ಬಡ ರೈತ ಕಾರ್ಮಿಕರ ನೋವಿಗೆ ಸ್ಪಂಧಿಸುವ ಮನೋಧರ್ಮ ಹೊಂದಿದ್ದ ಅವರು. ಆರ್ಥಿಕ ಸಂಕಷ್ಟದಲ್ಲಿದ್ದವರ ಪಾಲಿಗೆ ಕೊಡುಗೈ ದಾನಿಯಾಗಿ, R K ಶೆಟ್ರು ಸದಾ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದರು. ಕೂಡ್ಲಿಗಿ ಹೋಟೆಲ್ ಮಾಲೀಕರ ಹಿತಕಾಯುವ, ಹೋಟೆಲ್ ಮಾಲೀಕರು ಹಾಗೂ ಕಾರ್ಮಿಕರ ಸಂಘಟನೆಯ ಅಧ್ಯಕ್ಷರಾಗಿದ್ದರು. ಇತ್ತೀಚಿಗಷ್ಟೇ ಜರುಗಿದ ಆಕಸ್ಮಿಕ ಲಘು ಬೈಕ್ ಅಪಘಾತದಿಂದಾಗಿ ಗಾಯಗೊಂಡು, ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದ R K ಶೆಟ್ರು ಆ17ರಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕನ್ನಡಪರ ಸಂಘಟನೆಗಳಿಗೆ, ನಾಗರೀಕ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು, ಪಟ್ಟಣ ಹಾಗೂ ತಾಲೂಕಿನ ಪ್ರಜ್ಞಾವಂತರು ತೀವ್ರ ಸಂತಾಪ ಸೂಚಿಸಿದ್ದಾರೆ. *ಸಂತಾಪ*- ಅವರ ಅಗಲಿಕೆಗೆ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ”ಎನ್.ಟಿ.
ಶ್ರೀನಿವಾಸ ಸೇರಿದಂತೆ, ವಿವಿದ ಗಣ್ಯಮಾನ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು. ಗ್ರಾಮ, ಪಟ್ಟಣ , ತಾಲೂಕು, ಜಿಲ್ಲೆಯ ವಿವಿದ ಆಢಳಿತಗಳ ಜನ ಪ್ರತಿನಿಧಿಗಳು. ವಿವಿದ ಪಕ್ಷಗಳ ಮುಖಂಡರು, ವಿವಿದ ವಾಹನಗಳ ಚಾಲಕರ ಸಂಘದವರು, ಪಟ್ಟಣದ ಹಿರಿಯ ನಾಗರೀಕರು, ಸರ್ಕಾರಿ ಹಾಗೂ ಸರ್ಕಾರೇತರ ನೌಕರರು, “ಕನ್ನಡ ಮಿತ್ರರ ಸಂಘ” ದ ಸರ್ವ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಹೋಟೆಲ್ ಮಾಲೀಕರ ಸಂಘದವರು, ವಂದೇ ಮಾತರಂ ಜಾಗೃತಿ ವೇದಿಕೆ, ಕರ್ನಾಟ ರಕ್ಷಣಾ ವೇದಿಕೆ, ನಾಗರೀಕ ಹಿತ ರಕ್ಷಣಾ ವೇದಿಕೆ, ರೈತ ಸಂಘ, ಮಹಿಳಾ ಸಂಘಗಳು, ಕಾರ್ಮಿಕ ಸಂಘಟನೆಗಳು, ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ಆಧ್ಯಾತ್ಮಿಕ ಚಿಂತಕರು. ಕನ್ನಡ ಸಾಹಿತ್ಯ ಪರಿಷತ್, ವಿವಿದ ಸಮುದಾಯಗಳ ಪ್ರಮುಖರು, ಪತ್ರಕರ್ತರು, ಸಾಹಿತಿಗಳು, ಹೋರಾಟಗಾರರು ಹಾಗೂ ನಾಗರೀಕರು R K ಶೆಟ್ರು ರವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend