🪔ನಿಧನ ವಾರ್ತೆ:ಕಾಂಗ್ರೇಸ್ ಕಟ್ಟಾಳು, ಶ್ರೀಮತಿ ಕೆ.ಸಿದ್ದಮ್ಮ – ಸೂಲದಹಳ್ಳಿ🪔

Listen to this article

🪔ನಿಧನ ವಾರ್ತೆ:ಕಾಂಗ್ರೇಸ್ ಕಟ್ಟಾಳು, ಶ್ರೀಮತಿ ಕೆ.ಸಿದ್ದಮ್ಮ – ಸೂಲದಹಳ್ಳಿ🪔-ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ ಸೂಲದಹಳ್ಳಿ ಗ್ರಾಮದ ಹಿರಿಯ ಚೇತನ, ವಾಲ್ಮೀಕಿ ಸಮುದಾಯದ ಹಿರಿಯ ಪ್ರಮುಖ ಮಹಿಳಾ ರಾಜಕಾರಣಿ. ಸೂಲದ ಹಳ್ಳಿ ಗ್ರಾಮ ಪಂಚಾಯ್ತಿಗೆ, ಸತತ ಮೂರು ಬಾರಿ ಅವಿರೋಧವಾಗಿ ಆಯ್ಕೆ ಯಾಗಿದ್ದ. ಸತತ ಎರಡು ಬಾರಿ ತಾಲೂಕ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ, ದಶಕಗಳ ಕಾಲ ಸಾಮಾಜಿಕ ರಾಜಕಿಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ. ಕಾಂಗ್ರೇಸ್ ಕಟ್ಟಾಳು ಶ್ರೀಮತಿ ಕೆ.ಸಿದ್ದಮ್ಮ(88)ರವರು, ಸೆ9 ರಂದು ಸಂಜೆ ನಿಧನರಾಗಿದ್ದಾರೆ.
*ಧೀಮಂತ ರಾಜಕಾರಣಿ, ಕಾಂಗ್ರಸ್ ಕಟ್ಟಾಳು*- ಕ್ಷೇತ್ರದ ಹೆಮ್ಮೆಯ ಮಾಜಿ ಶಾಸಕರಾದ ದಿವಂಗತ ಎನ್.ಟಿ.ಬೊಮ್ಮಣ್ಣನವರು, ಅಧ್ಯಕ್ಷರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಇವರ ಸಹೋದರರಾದ ದಿವಂಗತ ಕೆ.ಮಾರಪ್ಪರವರು ಕೂಡ ಸದಸ್ಯರಾಗಿದ್ದರು. ಹೀಗೆ ಒಂದೇ ಕುಟುಂಬದಲ್ಲಿ, ಒಟ್ಟೊಟ್ಟಿಗೆ ಇಬ್ಬರು ಸದಸ್ಯರಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇವರು ಟಿಡಿಬಿ ಸದಸ್ಯರಾಗಿದ್ದ ಅವಧಿಯಲ್ಲಿ, ಅನೇಕ ಹಳ್ಳಿಗಳು ರಸ್ತೆಗಳನ್ನ ಕಂಡಿವೆ. ನೂರಾರು ಜನರು ಜನತಾ ಮನೆಗಳನ್ನು ಪಡೆದು ಜನತಾ ಆಶ್ರಯ ಹೊಂದಿದ್ದಾರೆ. ಬಹಳಷ್ಟು ಬಡ ಜನರಿಗೆ, ಆಶ್ರಯ ಯೊಜನೆಯಡಿ ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಇವರು ಚಿಕ್ಕಜೋಗಿಹಳ್ಳಿಯ, ದಿವಂಗತ ವೆಂಕಟಸ್ವಾಮಿ. ಅಲ್ಲೀಪುರದ ಹನುಮಂತಪ್ಪ, ಹಾಗೂ ದಿವಂಗತ ಎಂ.ವೈ. ಗೋರ್ಪಡೆಯವರ. ದಿವಂಗತ ವಕೀಲ ಸಿದ್ಧನಗೌಡ್ರು, ದಿವಂಗತ ಮರಳಿಸಿದ್ದನ ಗೌಡ್ರು. ಹಿರಿಯ ರಾಜಕಾರಣಿ ದಿವಂಗತ ಎಂ.ಎಂ.ಜೆ.ಸದ್ಯೋ ಜಪ್ಪನವರು, ಮೊಳಕಾಲ್ಮೂರು ಶಾಸಕರಾದ, ದಿವಂಗತ ಪಾಪ ನಾಯಕ. ಮತ್ತು ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕರಾದ ಹಾಗೂ ದಿವಂಗತ ಎನ್.ಟಿ.ಬೊಮ್ಮಣ್ಣ ನವರಂತಹ, ಜಿಲ್ಲೆ ಕಂಡ ಪ್ರಭಾವಿ ಧೀಮಂತ ರಾಜಕಾರಣಿಗಳೊಂದಿಗೆ. ಉತ್ತಮ ಬಾಂಧವ್ಯದೊಂದಿಗೆ ರಾಜಕೀಯ ಒಡನಾಡಿಯಾಗಿದ್ದರು ಸಿದ್ದಮ್ಮ.
ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮಹಿಳಾ ಮುಖಂಡರಾಗಿ, ಪಕ್ಷಕ್ಕೆ ಅಭೂತ ಪೂರ್ವವಾದ ಸೇವೆ ಸಲ್ಲಿಸಿದ್ದಾರೆ. ಸೂಲದಹಳ್ಳಿ
ಗ್ರಾಮದ ಹಿರಿಯ ಚೇತನ ದಿವಂಗತ ಸಿದ್ದಮ್ಮನವರು, ಮಕ್ಕಳು ಮೊಮ್ಮಕ್ಕಳು. ಸೊಸೆಯಂದಿರು ಹಾಗೂ ಮರಿ ಮೊಮ್ಮಕ್ಕಳು, ಮತ್ತು ಅಪಾರ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. *ಅಂತ್ಯಕ್ರಿಯೆ*- ಮೃತ ಕೆ.ಸಿದ್ದಮ್ಮರವರ ಅಂತ್ಯಕ್ರಿಯೆ , ಸೂಲದಹಳ್ಳಿ ಗ್ರಾಮದ ಹೊರವಲಯದಲ್ಲಿ ಸೆ10ರಂದು ಮಧ್ಯಾಹ್ನ ಜರುಗಲಿದೆ.
*ಸಂತಾಪ*-ಕಾಂಗ್ರೇಸ್ ಪಕ್ಷದ ಹಿರಿಯ ಚೇತನ ಹಾಗೂ ಹಿರಿಯ ಮಹಿಳಾ ರಾಜಕಾರಣಿ ಕೆ.ಸಿದ್ದಮ್ಮರವರ ಅಗಲಿಕೆಗೆ, ರಾಜ್ಯ ಹಾಗೂ ಜಿಲ್ಲಾ ತಾಲೂಕು ಸೇರಿದಂತೆ, ಸೂಲಕದಹಳ್ಳಿಯ ಸಮಸ್ತ ವಾಲ್ಮೀಕಿ ಸಮುದಾಯದವರು ಸಂತಾಪ ವ್ಯಕ್ತಡಿಸಿದ್ದಾರೆ. ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್, ಹಾಗೂ ಅವರ ಅಣ್ಣನವರಾದ ಕಾಂಗ್ರೇಸ್ ಧುರೀಣ ಎನ್.ಟಿ.ತಮ್ಮಣ್ಣ ನವರು ಕಂಬನಿ ಮಿಡಿದಿದ್ದಾರೆ. ಕಾಂಗ್ರೇಸ್ ಪಕ್ಷದ ಎಲ್ಲಾ ಹಂತದ ಮಹಿಳಾ ಮುಖಂಡರು, ಹಾಗೂ ಸಮಸ್ತ ಮಹಿಳಾ ಕಾರ್ಯಕರ್ತರು. ಗ್ರಾಮ ತಾಲೂಕು ಜಿಲ್ಲಾ ರಾಜ್ಯದ ಎಲ್ಲಾ ಹಂತದ, ಕಾಂಗ್ರೇಸ್ ಮುಖಂಡರು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು.
ತಾಲೂಕಿನ ವಿವಿದ ಪಕ್ಷಗಳ ಪ್ರಮುಖರು ಹಾಗೂ ವಿವಿದ ಸಮುದಾಯದವರು, ವಿವಿದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು. ರಾಜ್ಯ ಜಿಲ್ಲೆ ತಾಲೂಕು ಹಾಗೂ ತಾಪಂ ಗ್ರಾಪಂ ಸೇರಿದಂತೆ, ಎಲ್ಲಾ ಹಂತದ ವಿವಿದ ಜನ ಪ್ರತಿನಿಧಿಗಳು. ಹೋರಾಟಗಾರರು. ಸಮಾಜ ಸೇವಕರು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಹಾಗೂ ದಲಿತ ಸಂಘಟನೆಗಳು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ, ನಾಗರೀಕರು ಹಾಗೂ ಗಣ್ಯರು ಸಮಾಜ ಸೇವಕರು. ಕೆ.ಸಿದ್ದಮ್ಮರವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ…

ವರದಿ ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend