ಹೂವಿನಹಡಗಲಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಕಾರ್ಯಾಗಾರ ರೈತರು ಸುಧಾರಿತ ತಳಿಗಳು ಬಳಕೆ ಒತ್ತು…!!!

Listen to this article

ಹೂವಿನಹಡಗಲಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಕಾರ್ಯಾಗಾರ
ರೈತರು ಸುಧಾರಿತ ತಳಿಗಳು ಬಳಕೆ ಒತ್ತು ನೀಡಿ:ಕಾಲಿಬಾವಿ: ರೈತರಿಗೆ ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಸಹ ತಮ್ಮ ಜಮೀನಿನ ಸುತ್ತಲೂ ರೈತರಿಗೆ ಉಪಯೋಗವಿರುವ ತೇಗ, ಹೆಬ್ಬೇವು, ತೋಟಗಾರಿಕಾ ಸಸಿಗಳನ್ನು ಬೆಳೆಸಿ ಅದರಿಂದ ಪರಿಸರ ಉಳಿಸಿ ಕುಟುಂಬದ ಆದಾಯಕ್ಕೆ ನೆರವಾಗುವುದು ಎಂದು ಕೇಂದ್ರದ ಮುಖ್ಯಸ್ಥರಾದ ಡಾ. ಸಿ.ಎಮ್. ಕಾಲಿಬಾವಿ ಅವರು ಹೇಳಿದರು.
ಹೂವಿನಹಡಗಲಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೋರ್ಟೆವಾ ಅಗ್ರಿ ಸೈನ್ಸ್ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಹೂವಿನಹಡಗಲಿಯ ಕೃಷಿ ವಿಸ್ತರಣಾ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ “ಮುಂಗಾರು ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳು ಕಾರ್ಯಕ್ರಮ”ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಪ್ರಾರಂಭವಾಗಿದ್ದು, ರೈತರು ಸುಧಾರಿತ ತಳಿಗಳನ್ನು ಬಳಕೆ ಮಾಡುವುದರ ಜೊತೆಗೆ ಬೀಜೋಪಚಾರವನ್ನು ತಪ್ಪದೇ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕೋರ್ಟೆವಾ ಅಗ್ರಿ ಸೈನ್ಸ್ ಕಂಪನಿಯ ಕ್ಷೇತ್ರ ವ್ಯವಸ್ಥಾಪಕರಾದ ಮಹೇಶ್ ಮತ್ತೂರು ರವರು ಮಾತನಾಡಿ, ಕೀಟನಾಶಕ ಮತ್ತು ರೋಗನಾಶಕಗಳನ್ನು ಬಳಸುವಾಗ ರೈತರು ತಮ್ಮ ವೈಯಕ್ತಿಕ ರಕ್ಷಣೆಗೆ ಹೆಚ್ಚು ಗಮನ ಕೊಡಬೇಕು ಅಲ್ಲದೇ, ರಾಸಾಯನಿಕಗಳನ್ನು ಬಳಸುವಾಗ ಉತ್ತಮ ಸಿಂಪರಣಾ ಯಂತ್ರಗಳನ್ನು ಬಳಸುವುದರ ಜೊತೆಗೆ ಕೈಗವಸು, ಕನ್ನಡಕ, ದೇಹ ರಕ್ಷಕಾ ಕವಚವನ್ನು ತಪ್ಪದೇ ಬಳಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರದ ಡಾ.ಹನುಮಂತಪ್ಪ ಶ್ರೀಹರಿ, ಡಾ.ಮಂಜುನಾಥ ಭಾನುವಳ್ಳಿ, ಸುನೀತಾ ಎನ್.ಹೆಚ್, ಶೇಖಪ್ಪ, ಪ್ರಗತಿಪರ ರೈತರು ನವುಲಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಹೂವಿನಹಡಗಲಿ ಹಾಗು ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು…

ವರದಿ. ಅಜಯ್, ಚ. ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend