ದರೋಜಿ ಕರಡಿಧಾಮದಲ್ಲಿ ಪರಿಸರ ದಿನ ಆಚರಣೆ ಮತ್ತು ಬೀಜ ಬಿತ್ತನೆ ಅಭಿಯಾನ…!!!

Listen to this article

ದರೋಜಿ ಕರಡಿಧಾಮದಲ್ಲಿ ಪರಿಸರ ದಿನ ಆಚರಣೆ ಮತ್ತು ಬೀಜ ಬಿತ್ತನೆ ಅಭಿಯಾನ
ನಾಡಿನ ಉತ್ತಮ ಭವಿಷ್ಯಕ್ಕಾಗಿ ಹಸಿರು ಹೆಚ್ಚಿಸೋಣ:ವಲಯ ಅರಣ್ಯಾಧಿಕಾರಿ ಎಂ.ಉಷಾ
ಹೊಸಪೇಟೆ ಅರಣ್ಯ ಇಲಾಖೆಯ ಹಸಿರು ಕರ್ನಾಟಕದ ಕಾರ್ಯಕ್ರಮ ಅಂಗವಾಗಿ ಬೀಜ ಬಿತ್ತಿದಂತೆ ಬೆಳೆ ಎಂಬಂತೆ ನಮ್ಮ ಉತ್ತಮ ಭವಿಷ್ಯಕ್ಕಾಗಿ “ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ” ಎಂಬ ಶಪಥ ವಾಕ್ಯದೊಂದಿಗೆ ‘ಬೀಜ ಬಿತ್ತೋತ್ಸವ 2022’ ಕಾರ್ಯಕ್ರಮ ದರೋಜಿ ಕರಡಿಧಾಮದಲ್ಲಿ ಭಾನುವಾರ ನಡೆಯಿತು.


ವಿಶ್ವಪರಿಸರ ದಿನಾಚರಣೆ ಹಾಗೂ ಬೀಜೋತ್ಸವ ಕಾರ್ಯಕ್ರಮದ ಮೊದಲನೆ ದಿನ ಕರಡಿಧಾಮದ ಕಮಲಾಪುರ ಶಾಖೆಯ ಹುಣಸೆ ನೆಡುತೋಪು ಪ್ರದೇಶದ 5 ಹೆಕ್ಟೇರ್‍ನಲ್ಲಿ ಹೊಂಗೆ, ಕಕ್ಕೆ, ಬೇವು, ಸೀಮೆತಂಗಡಿ ಹಾಗೂ ಹುಣಸೆ ಬೀಜಗಳನ್ನು ಬಿತ್ತಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದರೋಜಿ ಕರಡಿಧಾಮ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಎಂ.ಉಷಾ ಅವರು ಉತ್ತಮ ಭವಿಷ್ಯಕ್ಕಾಗಿ ನಾಡಿನ ಹಸಿರನ್ನು ಹೆಚ್ಚಿಸೋಣ. ಪ್ರತಿಯೊಬ್ಬರೂ ಸುತ್ತಮುತ್ತಲಿನ ಪರಿಸರ ಗಿಡಮರಗಳನ್ನು ಸಂರಕ್ಷಿಸುವುದಲ್ಲದೇ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸೋಣ ಎಂದರು.
ದರೋಜಿ ಕರಡಿ ಧಾಮ ಮತ್ತು ವನ್ಯ ಜೀವಿ ವಲಯದಿಂದ ಪರಿಸರ ದಿನ ಆಚರಣೆ ನಿಮಿತ್ತ ಜೂ.05ರಿಂದ ಜೂ.12ರವರೆಗೆ ‘ಬೀಜ ಬಿತ್ತೋತ್ಸವ 2022’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.06ರಂದು ಈರಣ್ಣ ಬಯಲು (ಬುಕ್ಕ ಸಾಗರ ಆರ್.ಎಫ್) ಪ್ರದೇಶ, ಜೂ.07ರಂದು ದರೋಜಿ ಶಾಖೆ (ಬಿಳಿಕಲ್ಲು ಆರ್.ಎಫ್) ಪ್ರದೇಶ, ಜೂ.08ರಂದು ಕತ್ತೆಕಣಿವೆ ಬಯಲು (ಬುಕ್ಕ ಸಾಗರ ಆರ್.ಎಫ್), ಜೂ.09ರಂದು ಕಮಲಾಪುರ ಶಾಖೆ (ಬಿಳಿಕಲ್ಲು ಆರ್.ಎಫ್) ಪ್ರದೇಶ, ಜೂ.10ರಂದು ದೊಡ್ಡಬಸಪ್ಪನ ಬಯಲು (ಬುಕ್ಕ ಸಾಗರ ಆರ್.ಎಫ್), ಜೂ.11ರಂದು ಕಮಲಾಪುರ ಶಾಖೆ (ಬಿಳಿಕಲ್ಲು ಆರ್.ಎಫ್), ಜೂ.12ರಂದು ನಲ್ಲಿಮರಸಿ (ಬುಕ್ಕ ಸಾಗರ ಆರ್.ಎಫ್) ಪ್ರದೇಶಗಳಲ್ಲಿ ಬಿತ್ತನೆ ಬೀಜ ಕಾರ್ಯಕ್ರಮ ಅಭಿಯಾನ ನಡೆಯಲಿದೆ.
ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂದೀಪ್ ಹಿಂದುರಾವ್ ಸೂರ್ಯವಂಶಿ, ಹೊಸಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ.ಭಾಸ್ಕರ್ ಅವರ ನೇತೃತ್ವದಲ್ಲಿ ಈ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯ ಎಲ್ಲಾ 50 ವಿಭಾಗಗಳ 228 ವಲಯಗಳಲ್ಲಿ ಬಿತ್ತೋತ್ಸವ 2022 ಜೂ.05ರಿಂದ ಜೂ.12ರವರೆಗೆ ನಡೆಯಲಿದ್ದು, ಶಾಲೆಗಳು, ಯುವ ಸಂಘಟಣೆಗಳು, ಸ್ವರ್ಯಸೇವಾ ಸಂಸ್ಥೆಗಳು ಮತ್ತು ಪ್ರತಿಯೊಬ್ಬರೂ ನಿಮ್ಮ ಹತ್ತಿರದ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ದರೋಜಿ ಕರಡಿಧಾಮ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಎಂ.ಉಷಾ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದರೋಜಿ ಕರಡಿಧಾಮ ವಲಯ ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್ ಕೆ.ನಂದಿಗಟ್ಟಿ, ಹೆಚ್.ಪಿ.ಜಗದೀಶ ಮತ್ತು ಅರಣ್ಯ ರಕ್ಷಕ ಸಿಬ್ಬಂದಿಗಳಾದ ವಿಶ್ವನಾಥ ಎಸ್.ಹಿರೇಮನಿ, ಮೇಘನಾ ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು….

 

ವರದಿ.ವಿರೇಶ್. ಎಚ್. ಸಿರಿಗುಪ್ಪ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend