ಸಿಂಧನೂರು : ರೈತ ಸಂಕಷ್ಟದ ಸಮಯದಲ್ಲಿ ಭೂತಾಯಿಗೆ ಭಕ್ತಿ ಸಮರ್ಪಣೆ…!!!

Listen to this article

ಸಿಂಧನೂರು : ರೈತ ಸಂಕಷ್ಟದ ಸಮಯದಲ್ಲಿ ಭೂತಾಯಿಗೆ ಭಕ್ತಿ ಸಮರ್ಪಣೆ.

ಉತ್ತರ ಕರ್ನಾಟಕದ ಭಾಗದಲ್ಲಿ ಈ ಹಬ್ಬ ಹೆಚ್ಚುಪ್ರಚಲಿತದಲ್ಲಿದೆ. ರೈತಾಪಿ ಜನರು ರವಿವಾರ ಎಳ್ಳಅಮಾವಾಸ್ಯೆಯನ್ನು ಸಂಭ್ರಮ,ಸಡಗರದಿಂದ ಆಚರಿಸಿದರು.ಎಳ್ಳ ಅಮಾವಾಸ್ಯೆ ನಿಮಿತ್ತ ತಮ್ಮ ಜಮೀನುಗಳಲ್ಲಿ ಸರಗ ಚೆಲ್ಲುವುದರ ಮೂಲಕ ಭೂತಾಯಿಗೆ ಭಕ್ತಿ ಸಮರ್ಪಿಸಿದರು. ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ರವಿವಾರ ಎಳ್ಳ ಅಮವಾಸೆಯನ್ನುಖುಷಿಯಿಂದ ಆಚರಿಸಿದರು.ಹೊಲಗದ್ದೆಗಳಲ್ಲಿ ಕಲ್ಲುಗಳಿಂದ ಪಾಂಡವರನ್ನು ಪ್ರತಿಷ್ಠಾಪಿಸಿ,ಭಕ್ತಿಭಾವದಿಂದ ಪೂಜೆ ಸಲ್ಲಿಸಿ.ಬಳಿಕ ಜಮೀನು ತುಂಬೆಲ್ಲಾ ಸುತ್ತಾಡಿ ಎಳ್ಳು ಹೋಳಿಗೆ ಮತ್ತು ಅನ್ನವನ್ನು ಸರಗ ರೂಪದಲ್ಲಿ ಚೆಲ್ಲಿ ಭೂತಾಯ ಕೃಪೆಗೆ ಪಾತ್ರರಾದರು. ಬರ ಹಾಗೂ ನೆರೆಯಿಂದ ಬೆಳೆ ಕೈಹಿಡಿಯದಿದ್ದರು ಈ ಆಚರಣೆ ಮಾಡುವುದು ಮಾತ್ರ ಬಿಡುವುದಿಲ್ಲ. ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತನಿಗೆ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾನೆ. ಒಂದು ಕಡೆ ಅತಿವೃಷ್ಟಿ ಒಂದು ಕಡೆ ಅನಾವೃಷ್ಟಿಯಿಂದ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರಯಾಸಪಡುತ್ತಿರುವ ರೈತರು, ಎಳ್ಳ ಅಮವಾಸ್ಯೆ ಹಬ್ಬವನ್ನು ಸರಳವಾಗಿ ಭೂತಾಯಿಗೆ ನೈವೇದ್ಯ ಸಮರ್ಪಿಸುವ ಮೂಲಕ ಹಿಂಗಾರು ಬೆಳೆಯನ್ನಾದರೂ ದಕ್ಕಿಸಿಕೊಡುವಂತೆ ಪ್ರಾರ್ಥನೆ ಸಲ್ಲಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend