ಸಿಂಧನೂರು: ಕಾನೂನು ಬಲಿಷ್ಟವಾದರೂ ದಲಿತರ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲವೇಕೆ ?

Listen to this article

ಸಿಂಧನೂರು: ಕಾನೂನು ಬಲಿಷ್ಟವಾದರೂ ದಲಿತರ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲವೇಕೆ ?

ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ದಿ.31ರಂದು ಮಧ್ಯಾಹ್ನ 2-45 ಗಂಟೆ ಯಾರು ಇಲ್ಲದ ಸಮಯದಲ್ಲಿ ಹಳೆ ವೈಷಮ್ಯದಿಂದ ಸವರ್ಣಿಯರ ಗುಂಪೊಂದು ದಲಿತರ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಮತ್ತು ಮನೆಗೆ ನುಗ್ಗಿ ಮನೆಯಲ್ಲಿರುವ ಪೀಠೋಪಕರಣಗಳು ಹೊಡಿದಹಾಕಿ,ಮಹಿಳೆಯರುಮತ್ತು ಮಕ್ಕಳು ಎನ್ನದೇ ಏಕಾಏಕಿ ನಿಮ್ಮನ್ನು ಕೊಲೆ ಮಾಡುತ್ತೇವೆಂದು ಮಹಿಳೆಯರ ನ್ನು ಎಳೆದಾಡಿ ಹೆಣ್ಣುಮಗಳು ನನಗೆ ಆರಾಮವಿಲ್ಲ ನನಗೆ ಹೊಡೆಯಬೇಡಿ ಎಂದು ಬೇಡಿಕೊಂಡರು ಸಹ ಕೇಳದೆ ಹಲ್ಲೆ ಮಾಡಿದ ಘಟನೆ ಕುನ್ನಟಗಿ ಕ್ಯಾಂಪಿನಲ್ಲಿ ನುಡಿದಿದೆ.ನಾಲ್ಕು ತಿಂಗಳ ಹಿಂದೆ ಬರ್ತಡೇ ನೆಪ ಮೂಲಕ ತೀವ್ರ ಸ್ವರೂಪ ಪಡೆದು ಗಲಾಟೆಯಲ್ಲಿ ಜಮದಗ್ನಿಯ ಎಂಬ ವ್ಯಕ್ತಿಯನ್ನು ಮನಬಂದಂತೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದರು.ಆದರೆ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಗಳು ಜಿಲ್ಲಾದ್ಯಂತ ಪ್ರತಿಭಟನೆ ಹೋರಾಟ ನಡೆಸಿದರು.ಆದರೆ ಕೆಲವು ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಅಧಿಕಾರಿಗಳು ಕೆಲವರನ್ನು ಬಂಧಿಸಿದ್ದರು. ಇನ್ನು ಕೆಲವರು ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಇನ್ನು ಕೆಲವರು ಜಾಮೀನು ಸಿಗದಿದ್ದರು ಪೊಲೀಸ್ ಇಲಾಖೆಗೆ ಹೆದರದೆ ರಾಜಾರೋಷವಾಗಿ ಹೊರಗಡೆ ತಿರುಗಾಡುತ್ತಿದ್ದರು. ರಾಜಾರೋಷವಾಗಿ ಹೊರಗಡೆ ತಿರುಗಾಡುತ್ತಿರುವವರು ಒಂದು ದಿನ ಮಧ್ಯಾಹ್ನ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಮತ್ತು ಜಾತಿನಿಂದನೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಮಹಿಳೆಯರು, ಮಕ್ಕಳನ್ನದೆ ಮೈಮೇಲೆ ಇರುವ ಬಟ್ಟೆಗಳನ್ನು,ನೈಟಿ ಹಿಡಿದು ಎಳಿದಾಡಿ ಈಗಾಗಲೇ ಒಬ್ಬನನ್ನು ಕೊಲೆ ಮಾಡಿದ್ದೇವೆ ಮತ್ತು ಇನ್ನು ಮುಂದೆ ನಮ್ಮ ತಂಟೆಗೆ ಏನಾದರು ಬಂದರೆ ನಿಮ್ಮಮನೆಯಲ್ಲಿ ಮಲಗಿರುವಾಗ ನಿಮ್ಮ ಮನೆಗೆ ಪೆಟ್ರೋಲ್ ಸುರಿದು ನಿಮ್ಮೆಲ್ಲರನ್ನು ಸುಟ್ಟುಹಾಕಿ ಬಿಡುತ್ತೇವೆ ಎಂದು ಜಾತಿನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ. ನಮ್ಮ ದೇಶದಲ್ಲಿ ಕಾನೂನು ಬಲಿಷ್ಟವಾದರೂ ಕೂಡಾ ದಲಿತರ ಮೇಲಿನ ದೌರ್ಜನ್ಯ ನಿಲ್ಲುತ್ತಿಲ್ಲ ಯಾಕೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಾವು ಹೊರಗಡೆ ಓಡಾಡಲು ಭಯವಾಗುತ್ತದೆ. ಆರೋಪಿಗಳಾದ ಕಾಂತ ರೆಡ್ಡಿ ಖಾದರ್ ಸಾಬ ಇಮಾಮ್ ಸಾಬ ಪಿರ್ ಸಾಬ ದಸ್ತಗಿರಿ ರಮಣ ರೆಡ್ಡಿ ಇನ್ನು28 ಜನರ ಸೇರಿದಂತೆ ಇವರ ಮೇಲೆ ಕಾನೂನು ಕ್ರಮಜರುಗಿಸಬೇಕು ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಹಲ್ಲೆ ಒಳಗಾದ ಯುವಕ ರವಿ ಅವರು ಅಳುತ್ತಾ ತಮ್ಮ ನೋವನ್ನು ಪತ್ರಿಕೆ ಮೂಲಕ ತೋಡಿಕೊಂಡರು.

ಹಲ್ಲೆಗೊಳಗಾದ ಕುಟುಂಬಸ್ಥರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಹುಡುಕಾಟಕ್ಕಾಗಿ ಗ್ರಾಮೀಣ ಠಾಣೆಯ ಪಿಎಸ್ಐ ಎರಿಯಪ್ಪ ಮತ್ತು ಅವರ ಸಿಬ್ಬಂದಿಗಳ ಜೊತೆಗೆ ಬಲೆ ಬೀಸಿದ್ದಾರೆ…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend