ಸಿಂಧನೂರು : ಬಹುಜನ ಸಮಾಜ ಪಾರ್ಟಿಯಿಂದ ಕೊರೆಂಗಾವ್ ವಿಜಯೋತ್ಸವ…!!!

Listen to this article

ಸಿಂಧನೂರು : ಬಹುಜನ ಸಮಾಜ ಪಾರ್ಟಿಯಿಂದ ಕೊರೆಂಗಾವ್ ವಿಜಯೋತ್ಸವ.

ಇಂದು ನಗರದ ಎಪಿಎಂಸಿಯ ಬಹುಜನ ಸಮಾಜ ಪಾರ್ಟಿ ಕಾರ್ಯಲಯದಲ್ಲಿ ತಾಲೂಕು ಸಮಿತಿ ಸಿಂಧನೂರು ವತಿಯಿಂದ 204ನೇ ಭೀಮಾ ಕೋರೆಂಗಾವ್ ವಿಜಯೋತ್ಸವದ ಸಂಭ್ರಮಾಚರಣೆಯನ್ನು ಪಕ್ಷದ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು .

ಈ ಸಂದರ್ಭದಲ್ಲಿ ಪಕ್ಷದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹುಲಗಪ್ಪ ಮಲ್ಕಾಪುರು ಮಾತನಾಡಿ 1818ನೇ ಇಸ್ವಿಯಲ್ಲಿ ನಡೆದ ಭೀಮ ಕೊರೆಗಾವ್ ಯುದ್ಧದಲ್ಲಿ ಶೌರ್ಯ ಸಾಹಸವನ್ನು ಮೆರೆದಂಥ ಭಾರತದ ಮೂಲನಿವಾಸಿಗಳಾದ ಸೈನಿಕರ ತ್ಯಾಗ ಬಲಿದಾನವನ್ನು ಸಂಕೇತವಾಗಿ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ಧಗಳಲ್ಲಿ, ಶೋಷಿತರ ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ನಡೆದ ಯುದ್ಧ ಇದಾಗಿದೆ.ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ. 1818 ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ ಕಾಲ ಆಗಿನ ಪೇಶ್ವೆ ಅಥವಾ ಬ್ರಾಹ್ಮಣ ಭೀಮಾ ನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್‌ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು, ಪೂನಾದ 250 ಅಶ್ವದಳದವರನೆರವಿನೊಂದಿಗೆ, ಜೊತೆಗೆ ಮದ್ರಾಸ್‌ನ 24 ಗನ್‌ಮೆನ್‌ಗಳ ಸಹಾಯದಿಂದ 20,000 ಅಶ್ವದಳವಿದ್ದ, 8,000ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ 1818 ಜನವರಿ 1ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಸತತ 12 ಗಂಟೆಗಳು ಯಾವುದೇ ವಿಶ್ರಾಂತಿ-ಆಯಾಸ ವಿಲ್ಲದೆ, ಆಹಾರ-ನೀರಿನ ಪರಿವಿಲ್ಲದೆ ಹೋರಾಟದ ಫಲವೇ ಈ ಕೊರೆಂಗಾವ ವಿಜಯೋತ್ಸವ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ಚೆನ್ನಪ್ಪ ಅಮೀನಗಡ, ಅಬ್ದುಲ್ ಸಾಬ್ ನಗರ ಘಟಕದ ಉಪಾಧ್ಯಕ್ಷರು, ಸಂತೋಷ್ ಏಳುರಾಗಿಕ್ಯಾಂಪ್ ನಗರ ಘಟಕದ ಕಾರ್ಯದರ್ಶಿ, S Iಸಾಲಗುಂದ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರು, ಬಸವರಾಜ್ ಮಾಡಸಿರವಾರ ತಾಲೂಕ ಕಾರ್ಯದರ್ಶಿ, ದೊಡ್ಡಬಸವರಾಜ
ಬೂದಿವಾಳ ತಾಲೂಕ ಕಾರ್ಯದರ್ಶಿ,ಹನುಮಂತಪ್ಪ ಬೂದಿವಾಳ ಕ್ಯಾಂಪು ಸೋಮಲಾಪುರ ಬೂತ್ ಅಧ್ಯಕ್ಷರು, ಲಕ್ಷ್ಮಣ ತಿಡಿಗೋಳ,ವೀರೇಶ್ ಕೆ ಹಂಚಿನಾಳ್ ಮುಖಂಡರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend