ಗಂಡಬೊಮ್ಮನಹಳ್ಳಿ ಗೋ ಶಾಲೆಯ ಗುಣಮಟ್ಟದ ಮೇವು ಮತ್ತು ನೀರು ಒದಗಿಸಲು ಪರಿಶೀಲಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ….!!!

Listen to this article

ಗಂಡಬೊಮ್ಮನಹಳ್ಳಿ ಗೋ ಶಾಲೆಯ ಗುಣಮಟ್ಟದ ಮೇವು ಮತ್ತು ನೀರು ಒದಗಿಸಲು ಪರಿಶೀಲಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ರೈತರ ಸಮ್ಮುಖದಲ್ಲಿ ಗಂಡಬೊಮ್ಮನಹಳ್ಳಿ ಗ್ರಾಮಕ್ಕೆ ದಿ. 08-05-24 ರಂದು ಭೇಟಿ ನೀಡಿ “ಗೋಶಾಲೆ”ಯನ್ನು ಪರಿಶೀಲನೆ ಮಾಡಿ ಮಾತನಾಡಿದರು. ಸರ್ಕಾರದ ಜಿಲ್ಲಾ, ತಾಲ್ಲೂಕು ಹಾಗೂ ಉನ್ನತ ಮಟ್ಟದ ಮಂತ್ರಿಗಳ ಜೊತೆಗೆ ಪ್ರತಿ ಸಭೆಯಲ್ಲಿ ಚರ್ಚಿಸಿ ಬರಗಾಲ ನಿರ್ವಹಣೆ ಮಾಡಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು.

ತೀವ್ರ ಬರಗಾಲ ನಡುವೆ ದಿಢೀರನೆ ಲೋಕಸಭಾ ಚುನಾವಣೆ ಪ್ರವೇಶ ಪಡೆಯಿತು. ಚುನಾವಣೆ ನಿಮಿತ್ತವಾಗಿ ನೀತಿ ಸಂಹಿತೆ ಇರುವುದರಿಂದ ಈ ನೆಲದ ಕಾನೂನು ಅನ್ನು ಗೌರವಿಸುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಕಡೆ ಕೆಲವು ದಿನಗಳ ಕಾಲ ಗಮನ ಹರಿಸಲು ಆಗಲಿಲ್ಲಾ. ಹೀಗಾಗಿ ಇದರ ಮುಂಜಾಗ್ರತಾ ಕ್ರಮವಾಗಿ ಗೋ ಶಾಲೆ ಆರಂಭಿಸಲು ತಡವಾಗುವುದರಿಂದ ಈ ಭಾಗದಲ್ಲಿ ವೈಯಕ್ತಿಕವಾಗಿ ಮೇವು ಒದಗಿಸಿಕೊಟ್ಟಿರುವುದನ್ನು ತಮಗೆ ಗೊತ್ತಿದೆ. ಅದನ್ನು ಹೆಚ್ಚು ಹೇಳಲಿಕ್ಕೆ ಹೋಗುವುದಿಲ್ಲ ಎಂದರು.


ಚುನಾವಣೆ ಮುಗಿದ ತಕ್ಷಣ ಈಗಾಗಲೇ ಹಲವಾರು ಸಿದ್ಧತೆಗಳನ್ನು ಮಾಡಿಕೊಂಡಿರುವುದರಿಂದ ತಮ್ಮ ಪ್ರತಿಯೊಬ್ಬರ ಜಾನುವಾರುಗಳ ಕುಂದುಕೊರತೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ದಿನ ಗೋ ಶಾಲೆಯನ್ನು ಪರಿಶೀಲನೆ ಮಾಡಿದ್ದೇವೆ. ಗುಣಮಟ್ಟದ ಮೇವು ಮತ್ತು ನೀರು, ಮೂಲ ಸೌಕರ್ಯವಾಗಿ ಟೆಂಟ್ ಒದಗಿಸಿಕೊಡಲು ಗಮನಿಸಿದರು. ಇದರ ಸಹಕಾರವನ್ನು ಪ್ರತಿಯೊಬ್ಬರು ಅಚ್ಚುಕಟ್ಟಾಗಿ ಪಡೆದುಕೊಳ್ಳಬೇಕು ಎಂದರು. ಪ್ರಾದೇಶಿಕವಾಗಿ ಇನ್ನುಳಿದಂತೆ ಗೋ ಶಾಲೆಗಳನ್ನು ಹಲವು ಸಿದ್ಧತೆಗಳೊಂದಿಗೆ ಪ್ರಾರಂಭಿಸಲಾಗುವುದು ಎಂದೂ ತಿಳಿಸಿದರು. ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಹಳ್ಳಿಗಳ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಬಸವರಾಜ್, ಎಮ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend