ಪೋಷಕರೇ ಎಚ್ಚರಿಕೆ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಜಾಗ್ರತರಾಗಿ, ಮುಂದೆ ವ್ಯತೆಯನ್ನು ಪಡದಿರಿ…!!!

Listen to this article

ರಾಜ್ಯದಲ್ಲಿ ಖಾಸಗಿ ಶಾಲೆಗಳು ಕಾಸಿನ ಶಾಲೆಗಳಾಗಿ ಮಾರ್ಪಟ್ಟಿವೆ ಏಕೆಂದರೆ, ಹಲವು ಶಾಲಾ ಆಡಳಿತ ಮಂಡಳಿ ಇಂದು ಸರ್ಕಾರದಿಂದ ಪರವಾನಿಗೆ ಪಡೆದಿರುವುದೇ ಒಂದು ಪೋಷಕರಿಗೆ ಹೇಳುವುದೇ ಮತ್ತೊಂದು ಅಂದರೆ “ಸರ್ಕಾರದಿಂದ ಸ್ಟೇಟ್ ಸಿಲಬಸ್ “ನಡೆಸುವುದಾಗಿ ಪರವಾನಿಗೆಯನ್ನು ಪಡೆದುಕೊಂಡು ಪೋಷಕರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಅಂದರೆ ನಮ್ಮ ಸಂಸ್ಥೆ, CBSE,ಯ ಪರವಾನಿಗೆ ಪಡೆದುಕೊಂಡಿದೆ ಎಂದು ಹೇಳಿ, ಅಡ್ಮಿಷನ್ ಮಾಡಿಸಿಕೊಂಡು ಪೋಷಕರಿಂದ ಹೆಚ್ಚಿನ ಅಡ್ಮಿಷನ್ ಹಣವನ್ನು ಪಡೆದುಕೊಂಡು ಮೋಸಮಾಡುವುದು ರಾಜ್ಯದ ಜನತೆ ಹಲವಾರು ದೃಶ್ಯ ಮಾದ್ಯಮದಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ನಡೆದಿರುವ ಘಟನೆ ನಿಮಗೆಲ್ಲ ಗೊತ್ತಿದೆ ಇದೇನಪ್ಪ ಈ ಒಂದು ವಿಷಯ ಈ ಸಮಯದಲ್ಲಿ ಯಾಕೆ ಅನ್ನುವ ಒಂದು ಪ್ರಶ್ನೆ ನಿಮಗೆ ಬಂದಿರಬಹುದು ಆದರೆ ಇವಾಗ ರಾಜ್ಯದೆಲ್ಲದೆ ಶಾಲಾ ದಾಖಲಾತಿಯ ಸಮಯ ಇವಾಗ ನೀವು ಎಚ್ಚರಿಕೆಯಿಂದ ನಿಮ್ಮ ಮಗುವನ್ನು ಅಡ್ಮಿಷನ್ ಮಾಡಿಸಲಿ ಹಾಗೂ ಮುಂದೆ ಆಗುವ ತೊಂದರೆಯಿಂದ ಜಾಗೃತರಾಗಲಿ ಎನ್ನುವುದೇ ನಮ್ಮ ಒಂದು ಉದ್ದೇಶ.ಇದು ರಾಜ್ಯದ ಹಲವಾರು ಜಿಲ್ಲೆಗಳಲ್ಲಿಯೂ ಸಹ ನಡೆಯುತ್ತಿದೆ,ಇಂತಹ ಒಂದು ಆಡಳಿತ ಮಂಡಳಿ ವಿಜಯನಗರ ಜಿಲ್ಲೆಯ ಕೆಲವು ಶಾಲಾ ಸಂಸ್ಥೆಗಳು C B S E ಎಂದು ಅನಧಿಕೃತವಾಗಿ ಶಾಲಾ ವಾಹನಗಳಲ್ಲಿ ಬರೆದುಕೊಂಡು ತಮ್ಮ ಬಿತ್ತಿ ಪತ್ರದಲ್ಲಿ C B S E ಎಂದು ನಮೂದಿಸಿ ಕಳೆದ 2 ರಿಂದ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಂಚನೆ ಮಾಡುತ್ತಿದ್ದಾರೆ ಇವರಿಗೆ ಅನುಮತಿ ಇರುವುದು ಕೇವಲ ರಾಜ್ಯ ಸಿಲಬಸ್ ಇವರಿಗೆ ಈವರೆಗೂ ಯಾವುದೇ ರೀತಿಯಾದಂತಹ C B S E ಪರಮಾನಿಗೆ ಬಂದಿರುವುದಿಲ್ಲ. ಹಾಗೂ ಸರಕಾರದ ಯಾವುದೇ ನಿಯಮವನ್ನು ಪಾಲಿಸುತ್ತಿರುವುದಿಲ್ಲ ಅನಧಿಕೃತವಾಗಿ ಬೇಸಿಗೆ ರಜೆ ದಿನಗಳಲ್ಲಿ ಶಾಲಾ ಸಂಸ್ಥೆಯನ್ನು ನಡೆಸಿರುತ್ತಾರೆ ಇದರಿಂದ ಮಕ್ಕಳನ್ನು ಒತ್ತಾಯ ಪೂರಕವಾಗಿ ಶಾಲೆಗೆ ಕರೆಸಿಕೊಂಡು ಶಾಲೆಯನ್ನು ಪ್ರಾರಂಭಿಸಿದ್ದಾರೆ ಮಕ್ಕಳ ಮಾನಸಿಕ ಬೆಳವಣಿಗೆಗಾಗಿ ಸರ್ಕಾರವು ರಜೆಯನ್ನು ಘೋಷಿಸುತ್ತಾರೆ ಇಂಥ ಮಕ್ಕಳ ಶೋಷಣೆಗೆ ಒಂದು ಶಾಲಾ ಸಂಸ್ಥೆ ಅಪರಾಧಿಗಳು ಮತ್ತೊಂದು ಮಕ್ಕಳ ತಂದೆ ತಾಯಿಗಳು ಅಪರಾಧಿಗಳು ಇಂಥ ಶಾಲೆಗಳಿಗೆ ಸರ್ಕಾರದ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲವೇ? ಇಂಥ ಶಾಲಾ ಸಂಸ್ಥಾಪಕರು ಪ್ರಭಾವಿಗಳೇ? ಇಂಥ ಶಾಲೆಗಳನ್ನು ನೋಡಿ ನೋಡದಂತೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ? ಇಂಥ ಸಂಸ್ಥೆಯ ಕಾರ್ಯಕ್ರಮಗಳಿಗೆ ಶಿಕ್ಷಣ ಅಧಿಕಾರಿಗಳು ಭಾಗವಹಿಸಿದ್ದರು  ಇವರುಗಳ ಮೇಲೆ ಏಕೆ ಕ್ರಮವನ್ನು ಕೈಗೊಳ್ಳುತ್ತಿಲ್ಲ? ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನಾವು ಒದಗಿಸುತ್ತೇವೆ ಇಂಥ ಸಂಸ್ಥೆಗಳನ್ನು ಅತಿ ಶೀಘ್ರದಲ್ಲೇ ಪರವಾನಿಗೆ ರದ್ದು ಮಾಡಬೇಕು ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮವನ್ನು ತೆಗೆದುಕೊಂಡು ಇಂತಹ ಶಾಲೆಗಳು ಎಷ್ಟಿವೆ ಎಂಬ ಮಾಹಿತಿ ಕ್ಷೇತ್ರ ಶಿಕ್ಷಣಅಧಿಕಾರಿಗಳಿಗೆ ಗೊತ್ತಿರುತ್ತದೆ, ಹಾಗೂ ಇವರಿಗೆ ಕ್ರಮವನ್ನು ತೆಗೆದುಕೊಳ್ಳಲು ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಮಾಡಿ ಜಿಲ್ಲೆಯಲ್ಲಿ ನ್ಯಾಯವನ್ನು ಒದಗಿಸುವಲ್ಲಿ ಮುಂದಾಗಲಿ ಎಂಬುದೇ ನಮ್ಮ  ಪತ್ರಿಕಾ ಬಳಗದ ಆಶಯ…

 

ವರದಿ. ಗಣೇಶ್. ಬಿ. ಹೊಸಪೇಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend