ಪ್ರಭಾವಿ ಪಕ್ಷ ಬಿಜೆಪಿ ಸೋಲಿಗೆ ಇವೆಲ್ಲ ಕಾರಣಗಳಿರಬಹುದೇ…???

Listen to this article

ಪ್ರಭಾವಿ ಪಕ್ಷ ಬಿಜೆಪಿ ಸೋಲಿಗೆ ಇವೆಲ್ಲ ಕಾರಣಗಳಿರಬಹುದೇ…
1)ಯಡಿಯೂರಪ್ಪನವರನ್ನು ಹೊರಗಿಟ್ಟು ಚುನಾವಣೆ ಎದುರಿಸುವಲ್ಲಿ ಮುಂದಾಗಿದ್ದು..
ಹೇಳಿ ಕೇಳಿ ಯಡಿಯೂರಪ್ಪ ಅಂದರೆ ಕರ್ನಾಟಕದಲ್ಲಿ ಬಿಜೆಪಿ, ಬಿಜೆಪಿ ಅಂದರೆ ಯಡಿಯೂರಪ್ಪ ಇಷ್ಟು ಕೇಂದ್ರದಲ್ಲಿರುವ ನಾಯಕರಿಗೆ ಗೊತ್ತಿದ್ದರೂ ಇವರನ್ನು ಯಾಕೆ ಕಡೆಗಣಿಸಬೇಕಿತ್ತು??? ಬಿ. ಎಲ್. ಸಂತೋಷ ಎಂಬ ಬುರುಡೆ ನಾಯಕನ ಮಾತಿಗಿದ್ದ ಬೆಲೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಿಸಿದ ನಾಯಕನಿಗೆ ಏಕೆ ಕೊಡಲಿಲ್ಲ ಎಂಬ ಒಂದು ಪ್ರಶ್ನೆ ಕರ್ನಾಟಕದ ಮತದಾರರಲ್ಲಿ ಮೂಡಿ, ಬಿಜೆಪಿ ಪಕ್ಷವನ್ನು ಮೂಲೆಗುಂಪು ಮಾಡಿರ ಬಹುದೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ…
2)ಕರ್ನಾಟಕ ಕಷ್ಟದಲ್ಲಿದ್ದಾಗ ಬರದ ಮೋದಿಜಿಯವರು ಬರೀ ಚುನಾವಣೆಯ ಸಮಯದಲ್ಲಿ ಏಕೆ ಬರುತ್ತಿದ್ದಾರೆ????
ಇದಕ್ಕೆ ಇನ್ನು ಉತ್ತರ ಸಿಕ್ಕಿಲ್ಲ ಬಿಡಿ, ನಮ್ಮ ದೇಶದ” ಜಿಎಸ್ಟಿ “ಹಣದಲ್ಲಿ ಬೇಕಾಬಿಟ್ಟಿ ಖರ್ಚು ಮಾಡುವ ಪ್ರಧಾನಿ ಮೋದಿಜಿಯವರು ಕರ್ನಾಟಕ ಕಷ್ಟದಲ್ಲಿದ್ದಾಗ, ಅಂದರೆ ನೆರೆ ಬಂದ ಸಮಯದಲ್ಲಿ ಏಕೆ!!!ಬರಬಾರದು ಎನ್ನುವ ಯಕ್ಷ ಪ್ರಶ್ನೆ ಪ್ರತಿಯೊಬ್ಬ ಮತದಾರರಲ್ಲಿ ಕಾಡುತ್ತಿದೆ, ಬರೀ ಭಾಷಣಕ್ಕೆ ಸೀಮಿತವಸ್ಟೆ ಪ್ರಧಾನಿ ಮೋದಿಜಿ… ಎನ್ನುವ ಕೂಗು ಬಲು ಜೋರಾಗಿ ಕೇಳುತ್ತಿದೆ ಹಾಗೂ ವಿರೋಧ ಪಕ್ಷದವರು ಇವರ ವಿರುದ್ಧ ಧ್ವನಿ ಎತ್ತಿದರೆ” ಐಟಿ “ರೈಡ್ ಮಂತ್ರ ಹಾಕಿ ಬಾಯಿಮುಚ್ಚಿಸುವ ತಂತ್ರ, ಇವರದ್ದು ಎನ್ನುವ ಸತ್ಯವನ್ನು ಅರಿತು ಬಿಜೆಪಿ ಪಕ್ಷವನ್ನು ಸೋಲಿಸಿರಬಹುದೇ????

3)ಲೋಕಲ್ ಕಾರ್ಯಕರ್ತರ ಒಂದು ದಬ್ಬಾಳಿಕೆಗೆ ಪಕ್ಷ ಸೋತಿರಬಹುದೇ…???
ಡಬಲ್ ಇಂಜೆನ್ ಸರ್ಕಾರ ನಮ್ಮದು ನಾವು ಏನೇ ಮಾಡಿದರು ಜಯಿಸಿಕೊಳ್ಳಬಹುದು ಎನ್ನುವ ಒಂದು ದುರಂಕಾರ ಹಾಗೂ ಜನಸಾಮಾನ್ಯರ ಮೇಲೆ ಒತ್ತಡ ಏರಿ ಪಕ್ಷವನ್ನು ಮೂಲೆಗುಂಪು ಹಾಗೂ 40%ಕಮಿಷನ್ ಎನ್ನುವ ಹಣೆಪಟ್ಟಿಗೆ ಮತದಾರರು ಬೇಸತ್ತು, ಹಾಗೂ ಇಂದಿಗೂ ಸಹ ಗ್ರಾಮಪಂಚಾಯಿತಿ ಮಟ್ಟದಲ್ಲಿ,30ಸಾವಿರ ರೂಪಾಯಿಗಳನ್ನು ಕೊಟ್ಟರೆ ಮಾತ್ರ ಆಶ್ರಯ ಮನೆ ಯೋಜನೆ ಪಡೆದುಕೊಳ್ಳಲು ಸಾಧ್ಯ ಮತ್ತು ಲೋಕಲ್ ಲೀಡರ್ ಗಳ ಆವಳಿಗೆ ಬೇಸತ್ತು ಕೈ ಹಿಡಿದನ ಮತದಾರ ಪ್ರಭು…
ಜಾತಿ ರಾಜಕೀಯವನ್ನು ಮಾಡಿ ರಾಜ್ಯದ ಜನತೆಗೆ ದಿಕ್ಕು ತಪ್ಪಿಸುತ್ತಿದೆ ಬಿಜೆಪಿ ಸರ್ಕಾರ ಎನ್ನುವ ಕೂಗಿಗೆ ಬೇಸತ್ತು ಬದಲಾವಣೆ ಬಯಸಿರಬಹುದಾ ಮತದಾರರು…????ಕರ್ನಾಟಕ ಅಂದರೆ ಒಂದಾಣಿಕೆ, ಎನ್ನುವ ಒಂದು ಜ್ಞಾನ ಇಡಿ ನಮ್ಮ ಸಾರ್ವಜನಿಕರಿಗೆ ಗೊತ್ತಿದೆ ಹಾಗೂ ಈ ಇಂದೆ ಇದ್ದ ಸರ್ಕಾರದಲ್ಲಿ ಇಷ್ಟೊಂದು ಜಾತಿ ರಾಜಕೀಯ ಗೊತ್ತಿರಲಿಲ್ಲ ಮತದಾರರಿಗೆ ಹಾಗೂ ಬರೀ ಚುನಾವಣೆಯ ಸಮಯದಲ್ಲಿ ಮಾತ್ರ ಕರ್ನಾಟಕದ ಬಗ್ಗೆ

ಚಿಂತನೆಯನ್ನು ಮಾಡುವ ಪ್ರಧಾನಿ ಮೋದಿಜಿಯವರು ಗುಜರಾತು ರಾಜ್ಯದ ತರಹದ ರೀತಿಯಲ್ಲಿ ಯಾಕೆ ನಮ್ಮ ಒಂದು ಕರ್ನಾಟಕಕ್ಕೆ ಒತ್ತು ಕೊಡಲಿಲ್ಲ ಹಾಗೂ ಅಮಿತ್ ಶಾ, ಎನ್ನುವ ಆಡಳಿತ ಚಾಣುಕ್ಯ ಕರ್ನಾಟಕದ ಬಗ್ಗೆ ಸ್ವಲ್ಪನೂ ಚಿಂತನೆಯನ್ನು ಮಾಡದೇ ಬರೀ ಅವರ ಕುಟುಂಬದ ಆದಾಯವನ್ನು ಜಾಸ್ತಿ ಮಾಡಲು ರಾಜ್ಯದ ಜನತೆಯ ಬಡ ಮಕ್ಕಳಿಗೆ, ಆರ್, ಎಸ್,ಎಸ್,ಎನ್ನುವ ಬೀಜವನ್ನು ಬಿತ್ತುವುದನ್ನು ಅರಿತು ಬಿಜೆಪಿ ಪಕ್ಷವನ್ನು ದೊರಮಾಡಿದರ ಇಂದಿಗೂ ನಿಮಗೆಲ್ಲ ಗೊತ್ತಿರುವ ವಿಷಯ ದೇಶ ಅಂತ ಬಂದಾಗ ಹೋರಾಟ ಮಾಡುವುದು ಬಡ ಜನರ ಮಕ್ಕಳು ಇದನ್ನು ಆರೀತೀರಾ ರಾಜ್ಯದ ಮತದಾರ ಪ್ರಭುಗಳು, ಹಾಗೂ ಅತೀ ಶೀಘ್ರದಲ್ಲಿ ಕೇಂದ್ರ ಸರ್ಕಾರದ ಒಂದು ಆಡಳಿತ
ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಮೋದಿಜಿ ಬರೀ, ಅಮಿತ್ ಶಾ ಎನ್ನುವ ಚಾಣುಕ್ಯ ನ ರಿಮೋಟ್ ಕಂಟ್ರೋಲ್ ಎನ್ನುವ ಸತ್ಯ ಇಡಿ ಒಂದು ದೇಶದ ಪ್ರತಿಯೊಂದು ರಾಜ್ಯಕ್ಕೂ ಗೊತ್ತಾಗಿದೆ, ಇವತ್ತು ಏನೇ ಐಟಿ ರೈಡ್ ಆದರೂ ಬರೀ, ಬೇರೊಬ್ಬ ಪಕ್ಷದವರಿಗೆ ಬಿಸಿ ಮುಟ್ಟಿದೆ ವರಿತು, ಬಿಜೆಪಿ ಪಕ್ಷದ ಯಾವೊಬ್ಬ ರಾಜಕೀಯ ಮುಖಂಡನಿಗೂ ಬಿಸಿ ತಟ್ಟಿಲ್ಲ ಇದೆಲ್ಲಾ ಒಂದು ಬೆಳವಣಿಗೆಯನ್ನು ನೋಡಿ ಬುದ್ದಿ ಕಲಿತ ಮತದಾರ, ಇದ್ದರೆ, ಅಟಲ್ ಬಿಹಾರ್ ವಾಜಪೇಯಿ ತರಹದ ಪ್ರಧಾನಿ ಬೇಕು ದೇಶಕ್ಕೆ ಬರೀ, ಚುನಾವಣೆಯ ಸಮಯದಲ್ಲಿ ಬಂದು ಹೋಗುವ ಪ್ರಧಾನಿ ಬೇಕಿಲ್ಲ ನಮ್ಮ ದೇಶಕ್ಕೆ ಎನ್ನುವ ಒಂದು ಅರಿವನ್ನು ಹರಿತು ದೊರಮಾಡಿದರ ಮತದಾರರು…
ರಾಜ್ಯಕ್ಕೆ ಸರಿಯಾದ ರೀತಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಕಾಪಾಡುವ ಮುಖ್ಯಮಂತ್ರಿಯ ಕೊರತೆ ಉಂಟಾಗಿರಬಹುದಾ…????
ರಾಜ್ಯದಲ್ಲಿ ಇದ್ದರೆ ಟಗರು ತರ ಮುಖ್ಯಮಂತ್ರಿ ಬೇಕು ಯಾಕೆಂದರೆ!!ಯಾರೇ ಆಗಿರಬಹುದು ಏನೇ ಅನ್ನಬಹುದು ನಿಂತಲ್ಲೇ ಉತ್ತರವನ್ನು ಕೊಡುವ ತಾಕತ್ತಿರುವ ನಾಯಕ ಬೇಕು ದೇಶದ ಪ್ರತಿಯೊಂದು ರಾಜ್ಯಕ್ಕೆ… ಬಸವರಾಜ್ ಬೊಮ್ಮಾಯಿ ತರಹದ ರಬ್ಬರ್ ಸ್ಟ್ಯಾಂಪ್ ಹೊಂದಿರುವ ಮುಖ್ಯಮಂತ್ರಿಗಳು ನಮ್ಮ ದೇಶಕ್ಕೆ ಬೇಡ ಎನ್ನುವ ಒಂದು ಸತ್ಯವನ್ನು ಅರಿತ ಮತದಾರರು ಇಡಿ ಪಕ್ಷವನ್ನೇ ಕಿತ್ತು ಬಿಸಾಕಿದ್ದಾರೆ ಮತದಾರರು ಇದು ಇಡಿ ಕೇಂದ್ರದ ಒಂದು ಆಡಳಿತ ಮಂಡಳಕ್ಕೆ ನಾಚಿಕೆಗೇಡು ಅನ್ನುವುದರಲ್ಲಿ ಎರಡು ಮಾತಿಲ್ಲ, ಯಾಕೆಂದರೆ ಇಡಿ ಕರ್ನಾಟಕದಲ್ಲಿ ಬರೀ ನಿರುದ್ಯೋಗ ಸಮಸ್ಯೆ ಎದುರು ಸರ್ಕಾರ ಬಂದು ಸುಮಾರು ವರ್ಷಗಳಾದರು ಸಣ್ಣ ಸರ್ಕಾರಿ ಉದ್ದೆಗಳನ್ನು ತುಂಬಲು ಯೋಗ್ಯತೆ ಇಲ್ಲದ ಸರಕಾರ ನಮ್ಮ ಒಂದು ರಾಜ್ಯಕ್ಕೆ ಬೇಕೇ ಎನ್ನುವ ಒಂದು ಅರಿವನ್ನು ಅರಿತ ಬಡವರು,10ಕೆಜಿ ಅಕ್ಕಿಯನ್ನು ಬರೀ 3ಕೆಜಿ ಗೆ ಕಡಿಮೆ ಮಾಡಿದ ಬೊಮ್ಮಾಯಿಯ ಸರ್ಕಾರ ಇವರಪ್ಪನ ಆಸ್ತಿಯನ್ನು ಮಾರಿ ರಾಜ್ಯಕ್ಕೆ ಇವರೇನು ಅಕ್ಕಿಯನ್ನು ಸಂದಾಯ ಮಾಡುತ್ತಿರಲಿಲ್ಲ, ಅದನ್ನು ಮರೆತು ನಾವು ಕಟ್ಟುವ ತೆರಿಗೆಯ ಹಣವನ್ನು ಏನೂ ಮಾಡಿರಬಹುದು ಈ ಒಂದು ರಾಜಕೀಯ ಮಂತ್ರಿಗಳು
ಎನ್ನುವ ಪ್ರಶ್ನೆ ಎಲ್ಲರಲ್ಲಿ ಕಾಡಿ ಇಂತಹ ಒಂದು ಭ್ರಷ್ಟ ಸರ್ಕಾರ ನಮಗೆ ಬೇಕೇ ಎಂಬುದನ್ನು  ಅರಿತು ದೂರಾಮಾಡಿರಬಹುದೇ ರಾಜ್ಯದ ಜನತೆ ಇನ್ನಾದರೂ  ಕಲಿಯಬೇಕು ಎಲ್ಲಾ ರಾಜಕೀಯ ಪಕ್ಷಗಳು ಮತದಾರರು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡುತ್ತಾರೆ,50ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ತೆರೆಯನ್ನು ಎಳೆದು, ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಟ್ಟರು ಅದನ್ನು ಉಳಿಸಿಕೊಳ್ಳಲು ಯೋಗ್ಯತೆ ಇಲ್ಲದ ಮಂತ್ರಿಗಳನ್ನು ಇಟ್ಟುಕೊಂಡು ಅಧಿಕಾರವನ್ನು ಮಾಡಲು ಹೊರೆಟ ಸರ್ಕಾರಕ್ಕೆ ನಿಂತಲ್ಲೇ ಬ್ರೇಕ್ ಹಾಕಿ ಹಳೆಯ ಸರ್ಕಾರಕ್ಕೆ ಮಣೆ ಹಾಕಿದ ಮತದಾರ ಇನ್ನಾದರೂ ಎಚ್ಚತ್ತು ಕೊಳ್ಳಲಿ ಮೋದಿಜಿ ಆಡಳಿತದ ಕೇಂದ್ರ ಸರ್ಕಾರ ಕರ್ನಾಟಕದ ಫಲಿತಾಂಶ ನಿಮಗೆ ಎಚ್ಚರಿಕೆ ಸಂದೇಶ ಅನ್ನುತ್ತಾರೆ ದೇಶದ ಜನತೆ….. ಎಚ್ಚರಿಕೆ ಇದು ಮುಂದಿನ ಬದಲಾವಣೆಯ ಭವಿಷ್ಯದ ಮುನ್ಸೂಚನೆ…

ವರದಿ. ಮಂಜುನಾಥ್, ಎನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend