ಡಾ”ಎನ್.ಟಿ.ಶ್ರೀನಿವಾಸ ಗೆ ಆರೋಗ್ಯ ಖಾತೆ ಸಚಿವ ಸ್ಥಾನ ನೀಡುವಂತೆ ಮನವಿ…!!!

Listen to this article

ಕೂಡ್ಲಿಗಿ:ಆರೋಗ್ಯ ಕ್ಷೇತ್ರದ ಹಿತಕ್ಕಾಗಿ, ಪಕ್ಷದ ಸಂಘಟನೆಗಾಗಿ, ನಾಡಿನ ಕ್ಷೇಮಾಭಿವೃದ್ಧಿ ಗಾಗಿ- ಡಾ”ಎನ್.ಟಿ.ಶ್ರೀನಿವಾಸ ಗೆ ಆರೋಗ್ಯ ಖಾತೆ ಸಚಿವ ಸ್ಥಾನ ನೀಡುವಂತೆ ಮನವಿ

ವಿಜಯನಗರ ಜಿಲ್ಲೆ ಕೂಡ್ಲಿಗಿ: ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದ್ದ, ಕ್ಷೇತ್ರದಲ್ಲಿ ತನ್ನ ವರ್ಚಸ್ಸಿನಿಂದ ಕಾಂಗ್ರೇಸ್ ಅಲೆಯನ್ನೆಬ್ಬಿಸಿರುವ ಡಾ”ಎನ್.ಟಿ.ಶ್ರೀನಿವಾಸ ರು. ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಗಿಂತ 54ಸಾವಿರಕ್ಕೂ ಅಧಿಕ ಮತಗಳನ್ನು, ತಾವು ಪಡೆಯುವ ಮೂಲಕ ಕಾಂಗ್ರೇಸ್ ಪಕ್ಷದಿಂದ ಶಾಸಕರಾಗಿ ಹೊರ ಹೊಮ್ಮಿದ್ದಾರೆ.ಈ ಮೂಲಕ ಕ್ಷೇತ್ರದಲ್ಲಿ ಅವರು ಕಾಂಗ್ರೇಸ್ ಪಕ್ಷವನ್ನು ,ಮತ್ತೆ ಅಧಿಕಾರಕ್ಕೆ ತರುವುದರೊಂದಿಗೆ ಪುನಶ್ಚೇತನಗೊಳಿದ್ದಾರೆ. ಅವರು ಇಪ್ಪತ್ತೈದು ಸಾವಿರ ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ,ಇದು ಅವರ ಸಮಾಜ ಸೇವಾ ಮನೋಭಾವ ಹಾಗೂ ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಜನ ಪರ ಕಾಳಜಿಯ ಶಾಸಕರಿಗೆ ಪಕ್ಷ ನಿಷ್ಠೆಯುಳ್ಳ ಯುವ ಉತ್ಸಾಹಿಗಳಿಗೆ, ನೂತನ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯನವರು. ಕಾಂಗ್ರೇಸ್ ಪಕ್ಷ ನೇತೃತ್ವದಲ್ಲಿನ ನೂತನ ಕರ್ನಾಟಕ ರಾಜ್ಯ ಸರ್ಕಾರದಲ್ಲಿ,ಡಾ ಎನ್.ಟಿ.ಶ್ರೀನಿವಾಸರವರನ್ನು ರಾಜ್ಯದ ಆರೋಗ್ಯ ಖಾತೆಯ ಸಚಿವರನ್ನಾಗಿ ನೇಮಿಸಬೇಕಿದೆ. ಅಂದಾಗ ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಹೊಸ ಅಧ್ಯಾಯ ಸೃಷ್ಠಿಯಾಗಲಿದೆ, ಮತ್ತು ರಾಜ್ಯದ ಸಮಸ್ತ ಜನತೆಗೆ ವಿನೂತನವಾದ ಆರೋಗ್ಯ ಇಲಾಖಾ ಸೇವಾ ಭಾಗ್ಯಗಳು ದೊರಕಬಹುದಾಗಿದೆ. ಕಾರಣ ನೂತನ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯರು, ಕೂಡ್ಲಿಗಿ ಕ್ಷೇತ್ರದ ನೂನತ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು, ಮತ್ತಷ್ಟು ಸುಭದ್ರವಾಗಿ ಸಂಘಟಿಸಲು ಸಾಧ್ಯವಾಗಲಿದೆ.

ಪಕ್ಷದ ಶ್ರೇಯೋಭಿವೃದ್ಧಿಗಾಗಿ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಯವರು, ಡಾ” ಎನ್.ಟಿ.ಶ್ರೀನಿವಾಸ ರನ್ನು ವೈದ್ಯಕೀಯ ಸಚಿವರನ್ನಾಗಿ ಮಾಡಬೇಕೆಂದು. ಕ್ಷೇತ್ರದ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು,ಶಾಸಕ ಡಾ”ಎನ್.ಟಿ.ಶ್ರೀನಿವಾಸರ ಅಭಿಮಾನಿಗಳ ಬಳಗ, ಮತ್ತು ಸ್ನೇಹಿತರು, ಜನಪ್ರತಿನಿಧಿಗಳು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹೋರಾಟಗಾರರು, ಹಿರಿಯನಾಗರೀಕರು, ರೈತಸಂಘ, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು,ಕಾರ್ಮಿಕರ ಸಂಘಟನೆಗಳು, ಕ್ಷೇತ್ರದ ಪ್ರಭಾವಿ ಮುಖಂಡರು. ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು, ವಾಲ್ಮೀಕಿ ಸಮುಫಾಯ ಸೇರಿದಂತೆ ವಿವಿದ ಸಮುದಾಯಗಳ ಮುಖಂಡರು. ವಂದೇ ಮಾತರಂ ಜನ ಜಾಗೃತಿ ವೇದಿಕೆ ಸೇರಿದಂತೆ, ವಿವಿದ ಕನ್ನಡ ಪರ ಸಂಘಟನೆಗಳು. ವಿವಿದ ಪಕ್ಷಗಳ ಮುಖಂಡರು ಪಕ್ಷ ಭೇದ ಮರೆತು, ಹೇಳಿಕೆ ಮೂಲಕ ಕಾಂಗ್ರೇಸ್ ನೇತೃತ್ವದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕೂಡ್ಲಿಗಿ ಪಟ್ಟಣ ಸೇರಿದಂತೆ,ವಿಜಯನಗರ ಜಿಲ್ಲೆಯ ಕಾಂಗ್ರೇಸ್ ಕಾರ್ಯಕರು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಹಾಗೂ ಕಾಂಗ್ರೇಸ್ ಪಕ್ಷದ ವರಿಷ್ಠರಲ್ಲಿ ಈ ಮೂಲಕ ಕೋರಿದ್ದಾರೆ.

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend