ಬಾಹ್ಯಾಕಾಶದೆತ್ತರಕ್ಕೆಬಾವಿಹಳ್ಳಿ ವಿಜ್ಞಾನಿ…!!!

Listen to this article

ಭಾರತದ ಕೀರ್ತಿ ಪತಾಕೆಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಬಾವಿಹಳ್ಳಿ ವಿಜ್ಞಾನಿ ಬಿ.ಹೆಚ್.ಎಂ.ದಾರುಕೇಶರವರು.

ಬಾಹ್ಯಾಕಾಶದೆತ್ತರಕ್ಕೆಬಾವಿಹಳ್ಳಿ ವಿಜ್ಞಾನಿ:

ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕಿನ ಮೌಲ್ಯವನ್ನು ಎತ್ತಿ ಹಿಡಿದು ಸಾರ್ಥಕ ಬದುಕಿಗೆ ಮೌಲ್ಯ ಬರಬೇಕೆಂದರೆ ದೇಶಕ್ಕೆ ಕೊಡುಗೆ ಕೊಟ್ಟ ಬದುಕು ಸಾರ್ಥಕವಾಗುತ್ತದೆ.ಬದುಕಿನ ಮೌಲ್ಯವನ್ನು ಎತ್ತಿಹಿಡಿದು ಭೌತವಿಜ್ಞಾನದಲ್ಲಿ ಸಾಧನ ಶಿಖರವೇರಿ ಸಾಧಿಸಿದ ಸಾರ್ಥಕ ಜೀವವೊಂದನ್ನು ಪರಿಚಯಿಸುವುದು ನನಗೆ ಹೆಮ್ಮೆಯ ವಿಚಾರವಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಒಬ್ಬ ವ್ಯಕ್ತಿ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ ಸಾಧಕ ಭಾರತದ ಪಾಲಿನ ಆಶಾಕಿರಣವಾಗಿದ್ದಾರೆ. ದೇಶದ ಹೆಮ್ಮೆಯ ಚಂದ್ರಯಾನ 3 ನೌಕೆ ಉಡಾವಣೆಯಲ್ಲಿ ಪ್ರಮು ಖ ಪಾತ್ರ ವಹಿಸಿದ್ದಾರೆ.ಚಂದ್ರಯಾನ 3 ಉಡಾವಣೆಗೆ ಯಾವ ದೇಶವೂ ಕೊಡದ ಸಂದೇಶ ವಾಹಕ (ಅಂಪ್ಲಿಫೈಯರ್) ರಚಿಸಿದ ಇಸ್ರೋ ವಿಜ್ಞಾನಿ ಬಿ.ಹೆಚ್.ಎಂ ದಾರುಕೇಶರವರು ವಿಜಯನಗರ ಜಿಲ್ಲೆ ಹಡಗಲಿ ತಾಲ್ಲೂಕು ಹೊಳಗುಂದಿ ಬಾವಿಹಳ್ಳಿ ಅವಳಿ ಗ್ರಾಮದವರು ಎಂಬುದು ನಮ್ಮ ಹೆಮ್ಮೆಯಾಗಿದೆ.
*ಬರದೂರು ಹಿರೇಮಠದ ದಾರುಕೇಶಯ್ಯನವರು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಹೊಳಗುಂದಿ ಮಜಿರಾ ಬಾವಿಹಳ್ಳಿ ಗ್ರಾಮದಲ್ಲಿ ದಿನಾಂಕ 06.08.1974 ರಲ್ಲಿ ಜನಿಸಿದರು.*ಆದರೂ ಅವರು ಬೆಳೆದಿದ್ದು ಕೊಟ್ಟೂರು.ಬಾವಿಹಳ್ಳಿ ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ.ಕೊಟ್ಟೂರು ದಾರುಕೇಶಯ್ಯನವರ ತಾಯಿ ಸುವರ್ಣಮ್ಮನವರ ತವರು.ವೃತ್ತಿ ಬದುಕಿನಲ್ಲಿ ಅವರ ತಂದೆಯವರಾದ ಬಿ.ಹೆಚ್.ಎಂ.ಮಹದೇವಯ್ಯನವರು ಶಿಕ್ಷಕರಾಗಿದ್ದು ಕೂಡ್ಲಿಗಿ ತಾಲ್ಲೂಕಿನ ಗೊಲ್ಲರಹಟ್ಟಿಯಲ್ಲಿ ಸೇವೆಸಲ್ಲಿಸಿದ ಸಂದರ್ಭದಲ್ಲಿ ದಾರುಕೇಶರವರ ಪ್ರಾಥಮಿಕ ಶಿಕ್ಷಣ ಅಲ್ಲಿಯೇ ನೆರವೇರಿತು.ಕೊಟ್ಟೂರಿನ ಬಾಯ್ಸ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ,ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಬಿ.ಎಸ್ಸಿ ಪದವಿಯನ್ನು ಪಡೆದರು.ಬಿ.ಎಸ್ಸಿ ದ್ವಿತೀಯ ವರ್ಷ ಓದಿತ್ತಿರುವ ಸಂದರ್ಭದಲ್ಲಿ ಓದಿನಲ್ಲಿ ತುಂಬಾ ಚುರುಕಾಗಿದ್ದ ದಾರುಕೇಶಯ್ಯನವರು ಪ್ರಬಂಧ ಸ್ಪರ್ಧೆಯಲ್ಲಿ ಸದ್ಭಾವನ ಪ್ರಬಂಧ ದೇಶದಲ್ಲೆ ಮೊದಲ ಸ್ಥಾನ ಪಡೆದು ಅಂದಿನ ದೇಶದ ಪ್ರಧಾನ ಮಂತ್ರಿಗಳಾದ ಪಿ.ವಿ.ನರಸಿಂಹರಾವ್ ರವರಿಂದ ಬಂಗಾರದ ಪದಕವನ್ನು ಗಳಿಸಿದರು.ನಂತರದ ಎಂ
ಎಸ್ಸಿ ಪದವಿಯನ್ನು ಗುಲ್ಬರ್ಗಾ ವಿಶ್ವ ವಿದ್ಯಾಲಯದಲ್ಲಿ ಪಡೆದರು.

ಎಂ.ಎಸ್ಸಿ ಪದವಿ ಪಡೆದು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ 1998 ರಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಲು ತುಂಬಾ ಉತ್ಸುಕದಿಂದ ಹಾಜರಾದರು.*ಬಾವಿಹಳ್ಳಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿ ಕೊಟ್ಟೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಜೀವನ ನಿರ್ವಹಣೆಗೆ ಕೆಲಸ ಮಾಡಲು ಹೊರಡುತ್ತಾರೆ ಅಂದು ಕೊಂಡ ಕುಟುಂಬದವರಿಗೆ ದೇಶವೆ ಹೆಮ್ಮೆ ಪಡುವಂತ ವಿಜ್ಞಾನಿಯಾಗುತ್ತಾರೆ ಅಂತ ಯಾರು ಅಂದುಕೊಂಡಿರಲಿಲ್ಲ.

ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನ ಇವರ ಉಪನ್ಯಾಸಕಿಯರಾದ ಕುಸುಮ ಮೇಡಂರವರು ಮಾತ್ರ ಇವರ ಜಾಣ್ಮೆಯ ಕುರಿತು ನಮ್ಮ ನಾಡಿನ ಕೀರ್ತಿಯನ್ನು ಜಗತ್ತಿಗೆ ಪಸರಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.* ತಾವು ಓದಿದ ಕಾಲೇಜಿನ ವಿದ್ಯಾರ್ಥಿಯಾದ ದಾರುಕೇಶರನ್ನು ಅದೇ ಕಾಲೇಜಿನ ಸುವರ್ಣ ಸಂಭ್ರಮದ ಕಾರ್ಯಕ್ರಮಕ್ಕೆ ಇವರನ್ನೇ ಮುಖ್ಯ ಅತಿಥಿಯಾಗಿ ಬರಮಾಡಿಕೊಂಡ ಕಾಲೇಜು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿತ್ತು.

ಸುದೀರ್ಘ 25 ವರ್ಷ ಇಸ್ರೋ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.ಸದ್ಯ ಬೆಂಗಳೂರು ಕಚೇರಿಯ ಸಹ ನಿರ್ದೇಶಕರಾಗಿದ್ದಾರೆ.ಐಸಿ ಡಿಸೈನ್ ಮುಖ್ಯಸ್ಥರಾಗಿದ್ದ ಬಿ.ಹೆಚ್.ಎಂ.ದಾರುಕೇಶರವರಿಗೆ ಸ್ಥಳೀಯವಾಗಿ ಅಂಪ್ಲಿಫೈಯರ್ ಸಿದ್ಧಗೊಳಿಸುವ ಹೊಣೆ ನೀಡಿತ್ತು.ಇಸ್ರೋ ನಿರೀಕ್ಷೆಯಂತೆ ಅಚ್ಚುಕಟ್ಟಾಗಿ ಅಂಪ್ಲಿಫೈಯರ್ ರಚನೆ ಕಾರ್ಯ ನಿಭಾಯಿಸಿದ್ದರಿಂದ ಇಸ್ರೋ ನೀಡಿವ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ .

ಇಷ್ಟೆಲ್ಲಾ ಸಾಧನೆಗೈದ ದಾರುಕೇಶರವರಿಗೆ ಚಂದ್ರನ ಅಂಗಳದಲ್ಲಿ ಕೆಲಸ ಮಾಡುವ ಹಂಬಲವಿದೆ.ಚಂದ್ರಯಾನ 3 ರಲ್ಲಿ ಇಸ್ರೋ ಚೇರ್ಮನ್ ಗೆ ಪಿ ಆರ್ ಒ ಕೂಡಾ ಆಗಿದ್ದು ಅವರ ಕಾರ್ಯಕ್ಷಮತೆ ಇಡೀ ದೇಶಕ್ಕೆ ಖುಷಿ ತಂದಿದೆ.ಇಷ್ಟೆಲ್ಲಾ ಸಾಧಕನ ಸಾಧನೆಗೆ ಇನ್ನೂ ಸಾಧಿಸಬೇಕೆಂಬ ಹಂಬಲವಿದೆ.

ಇಂತಹ ಸಾಧನೆಗೈದ ಪ್ರತಿಯೊಬ್ಬ ವಿಜ್ಞಾನಿಗೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ,ಇಸ್ರೋ ಅಧ್ಯಕ್ಷ ವಿ.ಸೋಮನಾಥನ್ ರವರು ಸೇರಿದಂತೆ ಪ್ರತಿಯೊಬ್ಬ ಭಾರತೀಯರು ಉಪಗ್ರಹ ಲ್ಯಾಂಡಿಂಗ್ ಆಗಲೆಂದು ಶುಭ ಹಾರೈಸಿದ್ದಾರೆ. ಆಂದ್ರದ ಶ್ರೀ ಹರಿಕೋಟಾದ ಸತೀಶ್ ಧವನ್ ಉಡಾವಣೆ ಕೇಂದ್ರದಿಂದ ಉಡಾವಣೆಯಾದ ಚಂದ್ರಯಾನ ಮಿಷನ್ 3 ಲ್ಯಾಂಡಿಂಗ್ ಬಯಸಲಿ.ವಿಜ್ಞಾನಿಗಳ ಶ್ರಮ ಸಾಕಾರವಾಗಲಿ.

ಇಷ್ಟೆಲ್ಲಾ ಉನ್ನತ ಹುದ್ದೆಯಲ್ಲಿ ಇರುವ ದಾರುಕೇಶರವರಿಗೆ ಹುಟ್ಟೂರು ಮತ್ತು ಶಿಕ್ಷಣ ಕಲ್ಪಿಸಿದ ಕೊಟ್ಟೂರು ಅಂದರೆ ಎಲ್ಲಿಲ್ಲದ ಪ್ರೀತಿ.ತಮ್ಮನ್ನು ಯಾವುದೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಕರೆದರೆ ಅವರು ತಮ್ಮ ಹುಟ್ಟೂರು ಬಾವಿಹಳ್ಳಿಯನ್ನು ಜ್ಞಾಪಿಸದೇ ಇರುತ್ತಿರಲಿಲ್ಲ.ನನಗೆ ಸಂಪರ್ಕಕ್ಕೆ ಸಿಕ್ಕಾಗ ಬಾವಿಹಳ್ಳಿ ಹೊಳಗುಂದಿಯಲ್ಲಿ ಕಳೆದ ಬಾಲ್ಯದ ನೆನಪನ್ನು ಹೇಳಲು ಮರೆಯಲಿಲ್ಲ.ನಮ್ಮೂರ ಸಂತೆಯಲ್ಲಿನ ವ್ಯಾಪಾರ,ಬಾವಿಹಳ್ಳಿಯ ಬಾವಿಯಲ್ಲಿ ಈಜಾಡಿದ ಕ್ಷಣ,ಬಾವಿಹಳ್ಳಿ ಕರಿಬಸವೇಶ್ವರ ಸ್ವಾಮಿಯ ಪರುವು,ಕರಿಬಸವೇಶ್ವರ ಹಾಗೂ ಹೊಳಗುಂದಿ ಸಿದ್ಧೇಶ್ವರ ಸ್ವಾಮಿಯ ತೇರಿನಲ್ಲಿ ಭಾಗವಹಿಸಿ ತೇರು ಎಳೆದು ಸ್ವಾಮಿಯ ಕೃಪೆಗೆ ಪಾತ್ರರಾದ ಘಟನೆಯನ್ನು ಮರೆಯಲಿಲ್ಲ.

ಇಷ್ಟೆಲ್ಲಾ ಸಾಧನೆಯ ಶಿಖರವೇರಿ ಸಾಧಕರು ಮುಂದಿನ ಪೀಳಿಗೆಗೆ ಆದರ್ಶವಾಗಲಿ. ಇಸ್ರೋ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇರುವ ತಾವು ಇಸ್ರೋ ಅಧ್ಯಕ್ಷರಾಗಲಿ ಎಂದು ಹೇಳುತ್ತಾ ನನ್ನ ಲೇಖನ ಭಾರತಾಂಬೆಗೆ ಸಮರ್ಪಣೆ ಮಾಡುವೆ….

ವರದಿ. ಅಜಯ್, ಚ, ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend