ಮಕ್ಕಳು ದೇಶದ ಆಸ್ತಿ, ಕ್ರೀಡೆಯಿಂದ ದೇಹ ಸದೃಢ ಹಾಗೂ ಕ್ರೀಯಾಶೀಲತೆ ಹೊಂದುತ್ತದೆ ಪ್ರಯೊಬ್ಬ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿವಂತೆ ಶಾಸಕ ಟಿ.ರಘುಮೂರ್ತಿ…!!!

Listen to this article

ಮಕ್ಕಳು ದೇಶದ ಆಸ್ತಿ, ಕ್ರೀಡೆಯಿಂದ ದೇಹ ಸದೃಢ ಹಾಗೂ ಕ್ರೀಯಾಶೀಲತೆ ಹೊಂದುತ್ತದೆ ಪ್ರಯೊಬ್ಬ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿವಂತೆ ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು. ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಸಾರ್ವಜನಿಕ‌ಶಿಕ್ಷಣ ಇಲಾಖೆವತಿಯಿಂದ ಆಯೋಜಿಸಿದ್ದ ವಲಯ ಹೋಬಳಿ ಮಟ್ಟದ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಲೂಕಿನ ಕೀರ್ತಿ ಪತಾಕೆಯನ್ನು ಹಾರಿಸಬೇಕು.
ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾದುದು ಸ್ಪರ್ಧಾರ್ಥಿಗಳು ಭಾಗವಹಿಸುವುದು ಮುಖ್ಯವಾಗುತ್ತದೆ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ಯಶಸ್ಸು ಸಾಧಿಸುವತ್ತ ಗಮನ ಹರಿಸಬೇಕು ಎಂದು ಕ್ರೀಡಾಪಟು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ತಮ್ಮ ಶಾರೀರಿಕ ಹಾಗೂ ಮಾನಸಿಕ ಸದೃಢತೆಯನ್ನು ಸಾಧಿಸಬಹುದು ತರಗತಿಗಳಲ್ಲಿನ ಪಠ್ಯ ಚಟುವಟಿಕೆಗಳಿಗೆ ಒತ್ತನ್ನು ನೀಡಿದಂತೆ ಕ್ರೀಡೆಗಳಿಗೂವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯನ್ನು ಸಂಪಾದಿಸಿದ ನಿದರ್ಶನಗಳಿವೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಸ್ಪರ್ಧಾರ್ಥಿಗಳು ತಾಲೂಕು ಜಿಲ್ಲಾ ರಾಜ್ಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿ ತಾಲೂಕಿಗೆ ಕೀರ್ತಿ ತರುವಂತಾಗಬೇಕ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ .ಎಸ್ ಸುರೇಶ್ ಮಾತನಾಡಿ ಕ್ರೀಡಾಕೂಟದಲ್ಲಿ ಕ್ರೀಡೆಯ ಉನ್ನತಿಗೆ ಶ್ರಮಿಸುತ್ತೇವೆ ಎಂದು ಪ್ರತಿಜ್ಞಾವಿಧಿಯನ್ನು ಸ್ಪರ್ಧಾರ್ಥಿಗಳು ಪಡೆದಿದ್ದಾರೆ ಅದರಂತೆ ನಡೆದುಕೊಳ್ಳಬೇಕು ತೀರ್ಪುಗಾರರ ತೀರ್ಪನ್ನು ಎಲ್ಲರೂ ಗೌರವಿಸಬೇಕು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಲೆಗಳ ದೈಹಿಕ ಶಿಕ್ಷಕರು ನಿಗಾ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ ರಾಘವೇಂದ್ರ ,ನಗರಸಭೆ ಸದಸ್ಯರಾದ ಕವಿತ,ಅಕ್ಷರ ದಾಸೋಹ ತಿಪ್ಪೇಸ್ವಾಮಿ ಪ್ರಭಾರೆ ದೈಹಿಕ ಶಿಕ್ಷಕ ವೀರಣ್ಣ,ಕಾಂತರಾಜ್ ಶಿವಲಿಂಗಪ್ಪ, ಬಸವರಾಜ್ ಪ್ರಾಣೇಶ್ ಇತರರಿದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend