ಓನಕೆ ಓಬವ್ವನ ತವರು ಗುಡೇಕೋಟೆಯಲ್ಲಿ ರೈತರ ಕಾರಹುಣ್ಣಿಮೆ ಸಂಭ್ರಮ ಎತ್ತುಗಳ ಓಟ…!!!

Listen to this article

ಓನಕೆ ಓಬವ್ವನ ತವರು ಗುಡೇಕೋಟೆಯಲ್ಲಿ ರೈತರ ಕಾರಹುಣ್ಣಿಮೆ ಸಂಭ್ರಮ ಎತ್ತುಗಳ ಓಟ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆಯಲ್ಲಿ ಎತ್ತುಗಳ ಹಬ್ಬವೇ ಎಂದು ಕರೆಯಲ್ಪಡುವ ಈ ದಿನದ ಕಾರ ಹುಣ್ಣಿಮೆಯನ್ನು ಗುಡೇಕೋಟೆ ಗ್ರಾಮದ ಜನರು ಮಹಿಳೆಯರು ಸಡಗರ ಸಂಭ್ರಮದಲ್ಲಿ ಉಲ್ಲಾಸ ಭರಿತರಾಗಿ ಎತ್ತುಗಳನ್ನು ಅಲಂಕರಿಸಿ
(ಎತ್ತುಗಳು ಓಡಿಸುವ) ಸ್ಪರ್ಧೆ ನಡೆಸಿದ್ದು ಸ್ಪರ್ಧೆಯಲ್ಲಿ ಕಾಡಪ್ಪನವರ ತಿಪ್ಪೇಸ್ವಾಮಿ ಎತ್ತು ಪ್ರಥಮ ಸ್ಥಾನ. ಬಂದು ತಲುಪಿದ ಸಂಭ್ರಮ

ಗ್ರಾಮದ ಪ್ರಮುಖ ಬೀದಿಗಳಲ್ಲಿ ಆದ್ದೂರಿ ಮೆರವಣಿಗೆ.

ಗ್ರಾಮದಲ್ಲಿ ಕರೋನಾ ಬೀತಿಯ ನಡುವೆಯೇ ಕಾರ ಹುಣ್ಣಿಮೆಯ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.ಮುಂಗಾರಿನ ಹಂಗಾಮಿನಾ ಸಿದ್ದತೆ ನೆಡೆದಿರುವ ಮದ್ಯಯೇ ರೈತರು ತಮ್ಮ ಎತ್ತುಗಳಿಗೆ ಅಲಂಕಾರ ಮಾಡಿ “ಕರಿ ಹರಿಸಲಾಯಿತು”.(ಎತ್ತುಗಳನ್ನು ಪೂಜಿಸಿ ಓಡಲು ಬಿಡುವುದು). ರೈತರಿಗೆ ಕಾರಹುಣ್ಣಿಮೆ ವಿಶೇಷವಾಗಿದ್ದು ಅವುಗಳಿಗೆ ಅರಿಶಿನ ಕುಂಕುಮ ಹಚ್ಚಿ ಕುತ್ತಿಗೆಗೆ ಅಲಂಕಾರಿಕಾ ಗಂಟೆ ಬಣ್ಣ ಬಣ್ಣದ ಪೀಪಿಗಳು ಗುಂಪುಗಳು ಬಣ್ಣಬಣ್ಣದ ಹಗ್ಗಗಳನ್ನು ಕಟ್ಟಿ ಸಿಂಗರಿಸಿ ಬೀದಿಗಳಲ್ಲಿ ತೋರಣ ಕಟ್ಟಿ ಗ್ರಾಮೀಣಾ ಪ್ರದೇಶದ ಕಾರಹುಣ್ಣಿಮೆ ಅಂಗವಾಗಿ ಸಿಹಿ ಆಡುಗೆ ತಯಾರಿಸಿ ಸಿಹಿ ಊಟ ಮಾಡುತ್ತಾ ಈ ದಿನ ಎತ್ತುಗಳಿಗೆ ಕೃಷಿ ಚಟುವಟಿಕೆಯಿಂದ ಬಿಡುವು ನೀಡಿ. ಎತ್ತುಗಳನ್ನು ಅಲಂಕರಿಸಿ ಮದುವಣಗಿತ್ತಿಯಂತೆ ಬಸವ ಈದಿನ ನೀನ್ ಯಾರಿಗೆ ಸಾಟಿ ಕಾರಹುಣ್ಣಿಮೆಯ ಹಬ್ಬ ರೈತನ ಹೊಲದಲ್ಲಿ ದುಡಿಯುವ ಎತ್ತುಗಳ ಅಲಂಕಾರದ ರೈತನ ಸಂಭ್ರಮದ ಹಬ್ಬ ಈ ದಿನ ಗುಡೇಕೋಟೆಯ ಎತ್ತುಗಳ ಓಟ ಸಂಭ್ರಮ ಸಾಕ್ಷಿಯಾಗಿತ್ತು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend