ಖಾಸಗಿ ಕಾಲೇಜುಗಳ ಹಾಗೂ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿಗಳಿಗೆ ಮನವಿ.

Listen to this article

ಸಿಂಧನೂರು : ಖಾಸಗಿ ಕಾಲೇಜುಗಳ ಹಾಗೂ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿಗಳಿಗೆ ಮನವಿ. ಇಡೀ ಜಗತ್ತು ಇಂದು ಕೋವಿಡ್ ಎರಡನೆಯ ಅಲೆಯ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ ಇಂಥ ಕಠಿಣ ಪರಿಸ್ಥಿತಿಯಲ್ಲಿ ಅನೇಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅವರಲ್ಲಿ ಶಿಕ್ಷಕ ವರ್ಗವನ್ನು ಗುರುತಿಸಿ ಅವರ ಸಂಕಷ್ಟಕ್ಕೆ ನೆರವಾಗುವ ಹಿನ್ನೆಲೆಯಲ್ಲಿ ಸರ್ಕಾರವು 5000 ರೂಪಾಯಿಗಳ ಪರಿಹಾರ ಪ್ಯಾಕೇಜನ್ನು ಘೋಷಿಸಲಾಗಿದೆ ಅದೇ ರೀತಿ ಕರ್ತವ್ಯ ನಿರ್ವಹಿಸುತ್ತಿರುವ ಖಾಸಗಿ ಕಾಲೇಜುಗಳ ಉಪನ್ಯಾಸಕರು ಸಹ ಲಾಕ್ಡೌನ್ ಹಿನ್ನೆಲೆಯಲ್ಲಿ ಯಾವುದೇ ವೇತನವಿಲ್ಲದೆ ಕುಟುಂಬ ನಿರ್ವಹಣೆ ಮಾಡಲಾಗದಂತಹ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ದೈನಂದಿನ ಜೀವನದ ಖರ್ಚುಗಳನ್ನು ಬರಿಸಲಾಗದೆ ಮನನೊಂದು ಕೆಲ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಹಾಗಾಗಿ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುವ ಉಪನ್ಯಾಸಕರನ್ನು ಸಹ ಕೋವಿಡ್ ಸಂಕಷ್ಟದ ಪಟ್ಟಿಗೆ ಸೇರಿಸಿ ನಮಗೂ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದೆ.ಹಾಗೆಯೇ ಎರಡನೇ ಅಲೆಗೆ ತುತ್ತಾಗಿ ಮೃತಪಟ್ಟ ಸರ್ಕಾರಿ ನೌಕರರಿಗೆ ನೀಡಿದಂಥ ಪರಿಹಾರದ ಮೊತ್ತವನ್ನು ಖಾಸಗಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಉಪನ್ಯಾಸಕರಿಗೂ ಘೋಷಿಸಬೇಕೆಂದು ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿದರು . ಈ ಸಂದರ್ಭದಲ್ಲಿ ಡಾ// ಬಸವರಾಜ್ ನಾಯಕ್, ಡಾ// ಬಸವರಾಜ್ ಬಳಿಗೇರ , ರಾಮಣ್ಣ ಹಿರೇಬೇರಗಿ, ಮಂಜುನಾಥ್ ಸೋಮಲಾಪುರ, ಅರುಣ್ ಕುಮಾರ್ ಬೇರಗಿ, ತಿಮ್ಮಣ್ಣನಾಯಕ,ಪರಶುರಾಮ ಮಲ್ಲಾಪುರು, ನೂರ್ ಮಹಮ್ಮದ್,ರಮೇಶ್ ಮೂಡಬಾಳ,ಡಾ// ಶರೀಫ ಹಸಮಕಲ್, ನಾರಾಯಣ ಬೆಳಗುರ್ಕಿ, ವಿಶ್ವನಾಥ್ ಗೋನ್ವಾರ,ಮಲ್ಲಯ್ಯ ಹಿರೇಮಠ,ಆಂಜನೇಯ ತುರ್ವಿಹಾಳ, ಸುಪುತ್ರಪ್ಪ, ನಾಗರಾಜ್ ವಲ್ಕಂದಿನ್ನಿ ಇನ್ನೂ ಅನೇಕ ಖಾಸಗಿ ಕಾಲೇಜುಗಳ ಉಪನ್ಯಾಸಕರು,ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend