ಸಿದ್ದಾಪುರದಿಂದ ಜುಮ್ಮೋಬನಹಳ್ಳಿ ಗೆ ಹೋಗುವ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೀಡಲಾಯಿತು,,,,!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ,ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಎಂ ಜೀವ ಪ್ರಕಾಶ್ ಇವರಿಂದ ಹಾಗೂ ಕೂಡ್ಲಿಗಿ ಅರಣ್ಯ ಇಲಾಖೆ ಸಿಬ್ಬಂದಿ ಇವರಿಂದ ಸಿದ್ದಾಪುರದಿಂದ ಜುಮ್ಮೋಬನಹಳ್ಳಿ ಗೆ ಹೋಗುವ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೀಡಲಾಯಿತು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸುಮಾರು 30ರಿಂದ 40 ಜನ ಕೂಲಿ ಕಾರ್ಮಿಕರಿಂದ ರಸ್ತೆಯ ಅಕ್ಕಪಕ್ಕ ಗುಂಡಿಗಳನ್ನು ತೆಗೆದು ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಾಪುರ ಗ್ರಾಮದ ಡಿ .ಎಂ ಜೀವ ಪ್ರಕಾಶ ರವರು ಸಾಮ್ರಾಟ ಅಶೋಕ ಚಕ್ರ ವರ್ತಿ ದಾರಿಹೋಕರಿಗೆ ರಸ್ತೆಯ ಅಕ್ಕಪಕ್ಕದಲ್ಲಿ ಅನ್ನ ಚತ್ರಗಳನ್ನು ಹಾಗೂ ರಸ್ತೆ    ಬದಿಗಳಲ್ಲಿ   ಮರಗಳನ್ನು ಹಾಕಿಸಿದ್ದ ನೆನಪನ್ನ ಮಾಡಿ ಕೊಟ್ಟರು. ನಂತರ ಗುಂಡುಮುನುಗು ಗ್ರಾಮಪಂಚಾಯಿತಿ ಸಿದ್ದಾಪುರ ಗ್ರಾಮದ ನೀರಗಂಟಿ ನಬೀಸಾಬ್ ರವರು ಬರೀ ಸಸಿಗಳನ್ನು ನಾಟಿ ಮಾಡಿ ಹೋಗುವುದು ಅಲ್ಲ ಸಮಯಕ್ಕೆ ಸರಿಯಾಗಿ ನೀರನ್ನು ಗಿಡಗಳಿಗೆ ಹಾಕಿದರೆ ಗಿಡಗಳು ಬೆಳೆದು ಮರವಾಗಿ ಒಳ್ಳೆಯ ಗಾಳಿ ನೆರಳು ಕೊಡುತ್ತದೆ ಎಂದು ಹೇಳಿದರು ನಂತರ ಅರಣ್ಯ ಇಲಾಖೆಯ ಮಂಜುನಾಥ್ ಮಾತನಾಡಿ ಕೂಲಿ ಕಾರ್ಮಿಕರು ಗುಂಡಿಗಳನ್ನು ಮಾತ್ರ ಉದ್ಯೋಗಖಾತ್ರಿ ಯೋಜನೆಯಡಿ ತೆಗೆಯುತ್ತಿದ್ದಾರೆ ಸಸಿಗಳನ್ನು ನಮ್ಮ ಇಲಾಖೆಯಿಂದ ತಂದಿರುತ್ತೇವೆ ಗಿಡಗಳು ಬೆಳೆದು ಮರಗಳ ಆಗುವವರೆಗೂ ಅಕ್ಕ ಪಕ್ಕದ ಜಮೀನಿನವರು ಸ್ವಲ್ಪ ಕಾಳಜಿವಹಿಸಿ ದನ-ಕರ ಮೇಕೆ ಇವುಗಳಿಂದ ಕಾಪಾಡಿ ಎಂದು ಹೇಳಿದರು ಈ ಸಂದರ್ಭದಲ್ಲಿ ಓಬಳಶೆಟ್ಟಿಹಳ್ಳಿಯ ಕೂಲಿಕಾರ್ಮಿಕರು ನೀರಗಂಟಿ ನಬೀಸಾಬ್ ವರದಿಗಾರ ಈಶ್ವರಪ್ಪ ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend