ಕೂಡ್ಲಿಗಿ ಪ್ರಗತಿ ಪರಿಶೀಲನಾ ಸಭೆ ಲೋಕಸಭೆ ಸದಸ್ಯರು ಭಾಗಿ…!!!

Listen to this article

ಜನವರಿ 11 ಕೂಡ್ಲಿಗಿ

ಕೂಡ್ಲಿಗಿ ಪ್ರಗತಿ ಪರಿಶೀಲನಾ ಸಭೆ ಲೋಕಸಭೆ ಸದಸ್ಯರು ಭಾಗಿ

 

ವಿಜಯನಗರ ಜಿಲ್ಲೆ,ಕೂಡ್ಲಿಗಿ ತಾಲೂಕಿನ ಪ್ರವಾಸಿ ಮಂದಿರದ ಆವರಣದಲ್ಲಿ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಮತ್ತು ಕರೋನ ಹೆಚ್ಚುತ್ತಿರುವ ಮುಂಜಾಗ್ರತಾ ಕ್ರಮವಾಗಿ ಸಭೆ ಜರಗಿತು.
ಈ ಸಭೆಯ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ವಹಿಸಿ ಮಾತನಾಡಿ, ಮೊದಲನೆಯದಾಗಿ ಕೋವಿಡ್ ರೂಪಾಂತರಿ ವೈರಾಣು ವ್ಯಾಪಕವಾಗಿ ಹರಡುವದರ ಮೊದಲೇ ಮುಂಚೂಣಿಯಲ್ಲಿರುವ ಜನಪ್ರತಿನಿಧಿಗಳು, ನಾಗರಿಕರು, ಸರ್ಕಾರಿ ನೌಕರರು, ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಹೇಳಿದರು, ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಷಣ್ಮುಕ್ ನಾಯ್ಕ್ ಮಾತನಾಡಿ ನಮ್ಮಲ್ಲಿ ನಾಲ್ಕು ಕೋವಿಡ್ ಪ್ರಕಾರಗಳಿವೆ ಅವರನ್ನು ಹೋಮ್ ಐಸೋಲೇಶನ್ನಲ್ಲಿ ಇಟ್ಟಿದ್ದೇವೆ. ಕೂಡ್ಲಿಗಿ ಆಸ್ಪತ್ರೆಯಲ್ಲಿ 37 ಕೋವಿಡ್ ಬೆಡ್ಗಳಿವೆ, 30ರಿಂದ 40 ಬೆಡ್ಗಳ ಅವಕಾಶ ಕಲ್ಪಿಸಲಾಗುವುದು, ಇನ್ನು ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ 15 ಕೋವಿಡ್ ಬೆಡ್ಗಳು ಇವೆ ಎಂದು ಹೇಳಿದರು, ಕಾರ್ಯಕ್ರಮದಲ್ಲಿಬಿ. ಯುವರಾಜ್ ನಾಯ್ಕ್, ಶಿಕ್ಷಣಾಧಿಕಾರಿಗಳು ಮಾತನಾಡಿಶಿಕ್ಷಕರ ಕೊರತೆ ಬಹಳಷ್ಟಿದೆ, 50 ಜನ ಶಿಕ್ಷಕರನ್ನು ನೇಮಿಸುವಂತೆ ಶಾಸಕರಿಗೆ ತಿಳಿಸಿದರು, ಶಾಶಕರು ಮಾತನಾಡಿಮಹದೇವಪುರ ಶಾಲೆಯಲ್ಲಿ 250 ಮಕ್ಕಳಿದ್ದು ಒಬ್ಬ ಶಿಕ್ಷಕ ನಿದ್ದಾನೆ ಹಾಗಾದರೆ ಮಕ್ಕಳ ಗತಿ ಏನು ಎಂದು ಯುವರಾಜ್ ನಾಯ್ಕ್. ರವರಿಗೆ ಪ್ರಶ್ನಿಸಿದರು. ನಂತರ ಚೌಡಾಪುರ ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ವಿಚಾರಿಸಿದರು. ಹಾಗೂ
ಅತಿಮುಖ್ಯವಾದ ಈ ಸಭೆಗೆ ಗಂಗಾಕಲ್ಯಾಣ ಅಧಿಕಾರಿಗಳು ಹಾಜರಾಗದೆ ಇರುವುದರಿಂದ ಇವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟವರಿಗೆ ಪತ್ರ ಬರೆಯಲು ತಿಳಿಸಿದರು.
ಅಧಿಕಾರಿಗಳ ಎಡವಟ್ಟಿನಿಂದ ರೈತರ ಕುಟುಂಬಗಳಿಗೆ ಸರ್ಕಾರದಿಂದ ವಿತರಿಸುವ ಆಹಾರಧಾನ್ಯಗಳB. p. L.ಕಾರ್ಡ್ ಗಳಲ್ಲಿ ತಾರತಮ್ಯ ವಾಗಿ, ಸುಮಾರು ಕುಟುಂಬಗಳಿಗೆ ಬಹಳ ಅನ್ಯಾಯವಾಗಿದೆ ಎಂದು ಹೇಳಿ, ಅತಿ ಶೀಘ್ರದಲ್ಲಿ ಇದನ್ನು ಸರಿಪಡಿಸಿ ಬಡ ಕುಟುಂಬದವರಿಗೆ, ಪಡಿತರ ವ್ಯವಸ್ಥೆಯನ್ನು ಮಾಡಬೇಕೆಂದು ಮಾನ್ಯ ತಹಶೀಲ್ದಾರರಿಗೆ ಮತ್ತು ಸಂಬಂಧಪಟ್ಟ ಆಹಾರ ಇಲಾಖೆಯವರಿಗೆ ಮಾನ್ಯ ಶಾಸಕರು ತಿಳಿಸಿದರು. ತಾಲೂಕಿನಲ್ಲಿ ಮುಂಜುರಾದ ಅಂಗನವಾಡಿ ಕೇಂದ್ರ ಕಟ್ಟಗಳನ್ನು ಆದಷ್ಟು ಬೇಗನೆ ಪೂರ್ಣ ಗೊಳಿಸುವಂತೆ ಸಂಬಂಧಪಟ್ಟ ತಾಲೂಕು ಸಿಡಿಪಿಒರವ ರಿಗೆ ಹೇಳಿದರು.ತಾಲೂಕು ಹಾಲು ಒಕ್ಕೂಟದ ಶ್ರೀಮತಿ ಮಂಜುಳಾ ರವರು ಹಾಲು ಒಕ್ಕೂಟದ ಕಟ್ಟಗಳನ್ನು ಸ್ಥಾಪಿಸಲು ಸರ್ಕಾರದ ವತಿಯಿಂದ ಜಾಗ ಮಂಜೂರು ಮಾಡಿಕೊಡುವಂತೆ ಮಾನ್ಯ ಶಾಸಕರಿಗೆ ಕೇಳಿದರು. . ಈ ಸಭೆಗೆ ಮಾನ್ಯ ಸಂಸದರಾದ ದೇವೇಂದ್ರಪ್ಪನವರು ಭಾಗವಹಿಸಿ ಹಲವಾರು ವಿಷಯಗಳ ಬಗ್ಗೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು. ಈ ಸಭೆಯಲ್ಲಿ, ಸನ್ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರು. ಲೋಕಸಭಾ ಸದಸ್ಯರಾದಶ್ರೀ ವೈ ದೇವೇಂದ್ರಪ್ಪನವರು.ಮಾನ್ಯ ತಹಸೀಲ್ದಾರರಾದ ಜಗದೀಶರವರು., ತಾಲೂಕು ಪಂಚಾಯಿತಿ ಅಧಿಕಾರಿ ಜಿ ಬಸಣ್ಣನವರು.ಕೊಟ್ಟೂರು ತಾಲೂಕು ಪಂಚಾಯಿತಿ ಅಧಿಕಾರಿ ತಿಮ್ಮಣ್ಣ ಹುಲಿಮನಿ. ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರು ಉಪಸ್ಥಿತರಿದ್ದರು…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend