ಚಂಪಾ ಕಾವ್ಯ ನಮನ – ಚಂಪಾ ಕವಿತೆಗಳ ಓದು…!!!

Listen to this article

ಚಂಪಾ ಕಾವ್ಯ ನಮನ – ಚಂಪಾ ಕವಿತೆಗಳ ಓದು

ಹೂವಿನ ಹಡಗಲಿ: ಇಂಗ್ಲೀಷ್ ಪ್ರಾಧ್ಯಾಪಕರಾಗಿಯೂ ಕನ್ನಡಪರ ಹೋರಾಟ ನಡೆಸಿದ ಚಂದ್ರಶೇಖರ್ ಪಾಟೀಲ್ ರ ವಿಚಾರಗಳನ್ನು ಯುವಪೀಳಿಗೆ ತಲುಪಿಸುವ ಕೆಲಸ ಆಗಬೇಕಾಗಿದೆ ಎಂದು ಪ್ರೊ ಶಾಂತಮುರ್ತಿ ಕುಲಕರ್ಣಿ ಹೇಳಿದರು.

ಪಟ್ಟಣದ ಜಿ ಬಿ ಆರ್ ಕಾಲೇಜಿನ ಬಯಲು ರಂಗಮಂದಿರದಲ್ಲಿ ಪದ್ಯ ಬಳಗದ ವತಿಯಿಂದ ಆಯೋಜಿಸಿದ್ದ “ಚಂಪಾ ಕಾವ್ಯ ನಮನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು
ಜನಪರ ಅಲೋಚನಾ ಕ್ರಮಗಳಿಂದ ಕಟ್ಟಿದ ಪರಿ ಅನನ್ಯ. ಶಿವಮೊಗ್ಗ ಸಮ್ಮೇಳನಕ್ಕೆ ಎಷ್ಟೇ ಪ್ರತಿರೋಧ ಆದರೂ
ನಿತ್ಯೋತ್ಸವ ಕವಿ
ನಿಸಾರ್ ಅಹಮದ್ ಅವರನ್ನು ಅಧ್ಯಕ್ಷರನ್ನಾಗಿ
ಮಾಡಿದ್ದು ಇತಿಹಾಸವೇ ಸರಿ ಎಂದು ತಿಳಿಸಿದರು.
ಬಂಡಾಯ ಸಾಹಿತ್ಯ ಸಂಘಟನೆ, ಗೋಕಾಕ್ ಚಳುವಳಿ ಕನ್ನಡ ನೆಲ- ಜಲ ರಕ್ಷಣೆಗೆ ಜೀವಸೆಲೆಯಾಗಿ
ಬದುಕು ಸವೆಸಿದರು.
ಕಾವ್ಯ,ನಾಟಕ
ವ್ಯಂಗ್ಯ ವಿಡಂಬನೆ, ಹರಿತಾದ ವಾಸ್ತವ ವಿಚಾರಗಳನ್ನು ಮಂಡಿಸುತ್ತಿದ್ದ ಪ್ರಖರ ವೈಖರಿ ಅದು ಚಂಪಾ ರವರ
ವಿಶಿಷ್ಟ ವ್ಯಕ್ತಿತ್ವವಾಗಿತ್ತು ಎಂದರು.

ಪ್ರಾಚಾರ್ಯರಾದ ಪ್ರೊ. ಎಸ್. ಎಸ್ ಪಾಟೀಲ್
ಚಂಪಾ ಅವರೊಂದಿಗಿನ ಒಡನಾಟ ಸ್ಮರಿಸಿದರು.

ಶಂಕರ್ ಬೆಟಗೇರಿ,ಸುರೇಶ ಅಂಗಡಿ,
ಪರಶುರಾಮ ನಾಗೋಜಿ,ಕೆ ಎಂ. ಶಶಿಧರ .ಕೆ ಎಂ ಕೊಟ್ರಸ್ವಾಮಿ. ವಿಶ್ವಪಾಲ್ ಮಾಗಳ.ಪ್ರಭು ಸೊಪ್ಪಿನ
ಅಜಯ್ ಚಲವಾದಿ.ಜಾವೇದ್.
ಹಸನ್ ಅಲಿ. ಚಂಪಾ ಅವರ ಕವಿತೆಗಳನ್ನು ವಾಚಿಸಿದರು.

ವರದಿ:- ಅಜಯ.ಚ
ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend