ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ರೈತ ಸಂಘ ಹಾಗೂ ಹಸಿರು ಸೇನೆ ಪದಗ್ರಹಣ ಸಮಾರಂಭ…!!!

Listen to this article

ಹೊಳಲ್ಕೆರೆ : ಜಿಲ್ಲೆಯನ್ನು ನೀರಾವರಿಗೊಳಿಸಲು ಭದ್ರ ನೀರಿಗಾಗಿ ರೈತ ಸಂಘದ ನಿರಂತರ ಹೋರಾಟ ಕೈಗೊಳ್ಳಲಿದೆ ಎಂದು ರಾಜ್ಯ ರೈತ ಸಂಘದ ಕರ‍್ಯಧ್ಯಕ್ಷರಾದ ಈಚಘಟ್ಟದ ಸಿದ್ಧವೀರಪ್ಪ ತಿಳಿಸಿದರು.
ಅವರು ಪಟ್ಟಣದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸೋಮವಾರ ರೈತರ ಸಂಘದ ನಗರಘಟಕ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ನೇರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ರೈತರು ಭೀರಕ ಬರಗಾರ ಎದುರಿಸುತ್ತಿದ್ದಾರೆ. ಸರಕಾರ ರೈತರ ನೆರವಿಗೆ ಬಂದಿಲ್ಲ. ತೋಟಗಳು ನೀರಿಲ್ಲದೆ ಒಣಗುತ್ತಿವೆ. ಕುಡಿಯಲು ನೀರಿಲ್ಲದೆ ಹಳ್ಳಿಗಳಲ್ಲಿ ಜನ ಜಾನುವಾರು ತತ್ತರಿಸುತ್ತಿವೆ. ಇಂತAಹ ಪರಿಸ್ಥಿತಿ ನಿರ್ಮಾಣಕ್ಕೆ ನಮ್ಮನಾಳಿದ ಸರಕಾರಗಳ ಹೊಣಗೇಡಿತನ ಕಾರಣದ ಎಂದು ಆಕ್ರೊಶ ವ್ಯಕ್ತಪಡಿಸಿದರು.
ರೈತ ಸಂಘಟನೆ ನಿರಂತವಾಗಿ ಇರುತ್ತದೆ. ಅದು ಒಂದು ದಿನದ ಹೋರಾಟವಲ್ಲ. ರೈತ ಸಂಕುಲಕ್ಕಾಗಿ ನಿತ್ಯ ಹೋರಾಟ ನಡೆಸಬೇಕು. ಇಲ್ಲವಾದಲ್ಲಿ ನಮ್ಮನಾಳುವ ಸರಕಾರಗಳು ನಮ್ಮನ್ನು ಶೋಷಣೆ ಮಾಡುತ್ತವೆ. ಹೋರಾಟದ ಮೂಲಕ ನ್ಯಾಯ ಪಡೆದುಕೊಳ್ಳಲು ಸಂಘಟನೆ ಪ್ರಭಲವಾಗಬೇಕೆಂದರು.
ನಿಕಟಪೂರ್ವ ಅಧ್ಯಕ್ಷ ರಂಗಸ್ವಾಮಿ ಮಾತನಾಡಿದರು. ನಗರ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಆರ್.ಸಿದ್ದರಾಮಪ್ಪ ಆಯ್ಕೆಯಾಗಿದ್ದು, ರೈತರ ಸಂಘ ಹಾಗೂ ಹಸಿರು ಸೇನೆ ಬಾವುಟ ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಅಜ್ಜಯ್ ಕೆ.ಎನ್., ಕಾರ್ಯಧ್ಯಕ್ಷ ಅಣ್ಣಪ್ಪ ಜಿ.ಆರ್. ಖಜಾಂಚಿ ಶಿವಮೂರ್ತಿ ಸೇರಿದಂತೆ ವಿವಿಧ ಸಮಿತಿ ಅಧ್ಯಕ್ಷರು ಸದಸ್ಯರು ಆಧಿಕಾರ ಸ್ವೀಕರಿಸಿದರು….

ವರದಿ. ಸುರೇಶ್, ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend