ಕೂಡ್ಲಿಗಿ ವಸತಿ ಯೋಜನೆಯಲ್ಲಿ ಅನರ್ಹರಿಗೆ ಮಣೆ.!?, ಮಂಜೂರಾತಿ ಪ್ರಕ್ರಿಯೆಗೆ ತಡೆಯಾಜ್ಞೆ ಹೊರಡಿಸಿರುವ ಧಾರವಾಡ ಉಚ್ಛ ನ್ಯಾಯಾಲಯ…!!!

Listen to this article

ಕೂಡ್ಲಿಗಿ ಪಪಂ:2020-21ರ ವಸತಿ ಯೋಜನೆಯಲ್ಲಿ ಅನರ್ಹರಿಗೆ ಮಣೆ.!?, ಮಂಜೂರಾತಿ ಪ್ರಕ್ರಿಯೆಗೆ ತಡೆಯಾಜ್ಞೆ ಹೊರಡಿಸಿರುವ ಧಾರವಾಡ ಉಚ್ಛ ನ್ಯಾಯಾಲಯ- ವಿಜಯನಗರ ಜಿಲ್ಲೆ ಕೂಡ್ಲಿಗಿ; ಪಟ್ಟಣ ಪಂಚಾಯ್ತಿ ಯಿಂದ,2020-21ನೇ ಸಾಲಿನ ವಸತಿ ಯೋಜನೆಯಡಿ, ಆಯ್ಕೆಯಾದ ಫಲಾನು ಭವಿಗೀಗೆ ಮನೆ ಮಂಜೂರಾತಿ ಪ್ರಕ್ರಿಯೆಗೆ ಧಾರವಾಡ ಉಚ್ಛ ನ್ಯಾಯಾಲಯ, ಎ25ರಂದು ತಡೆಯಾಜ್ಞೆ ಹೊರಡಿಸಿ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗೆ ಆದೇಶಿಸಿದೆ. ಸಂಬಂಧಿಸಿದಂತೆ ಸಾರ್ವಜನಿಕ ಹಿತ ರಕ್ಷಣೆ ಮೇರೆಗೆ, ವಸತಿ ಹಂಚಿಕೆ ಪ್ರಕ್ರಿಯೆ ರದ್ದು ಕೋರಿ. ಕಾರ್ಮಿಕ ಮುಖಂಡ. ಗುನ್ನಳ್ಳಿ ರಾಘವೇಂದ್ರರವರು, ನ್ಯಾಯಾಂಗ ಇಲಾಖೆಯ ಮೊರೆ ಹೋಗಿದ್ದರು. ಸಂಬಂಧಿಸಿದಂತೆ ಅವರು ಮಾಹಿತಿ ನೀಡಿದ್ದು, ವಸತಿ ಹಂಚಿಕೆಯಲ್ಲಾಗಿರುವ ಭಾರೀ ಪ್ರಮಾಣದ ಲೋಪ ಸರುಪಡಿಸಲಾಗುವುದು. ಮುಂದಿನ ಹಂತವಾಗಿ ಮೇ 9ರಂದು ರಾಜ್ಯ ಕಮಿಟಿಯ ಕಾರ್ಮಿಕ ಮುಖಂಡರ ನೇತೃತ್ವದಲ್ಲಿ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗುವುದು, ಈ ಮೂಲಕ ವಸತಿ ಹಂಚಿಕೆಯಲ್ಲಾಗಿರುವ ಲೋಪಗಳನ್ನು ಸರಿಪಡಿಸಿ ಪರಿಷ್ಕರಿಸಹುದಾಗಿದೆ. ಅನರ್ಹರನ್ನು ಪಟ್ಟಿಯಿಂದ ಕಿತ್ತೊಗೆಯಲು ಕ್ರಮಕ್ಕೆ ಒತ್ತಾಯಿಸಲಾಗುವುದು,ಮತ್ತು ಅರ್ಹ ಫಲಾನುಭವಿಗಳನ್ನು ಗುರುತಿಸಿ. ಯೋಗ್ಯರಿಗೆ ವಸತಿ ಯೋಜನೆ ನಿಯಮಾನುಸಾರ ನೀಡಿ, ವಸತಿ ಸೌಕರ್ಯ ಕಲ್ಪಿಸಲು ಸೂಕ್ತ ಕ್ರಮಕ್ಕಾಗಿ. ಅಗತ್ಯ ಹೋರಾಟದ ಮೂಲಕ ಸರ್ಕಾರದ ಹಾಗೂ ಸಂಬಂಧಿಸಿದ ಇಲಾಖೆಗಳ, ಕಣ್ಣು ತೆರೆಸುವಲ್ಲಿ ಸಂಘಟನೆ ನಿರತವಾಗಲಿದೆ ಎಂದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend