ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಅದ್ದೂರಿಯ ಸ್ವಾಗತ…!!!

Listen to this article

ವರದಿ ಜೂನ್ 29 ಕೂಡ್ಲಿಗಿ

ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಅದ್ದೂರಿಯ ಸ್ವಾಗತ.

ವಿಜಯನಗರ ಜಿಲ್ಲೆ ಕೂಡ್ಲಿಗಿ÷ ಪಟ್ಟಣದಲ್ಲಿ ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಕಾರ್ಯಕರ್ತರು ರೈತರು ಅನೇಕರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ 670 ಕೋಟಿ ಹಣ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿರುವಕಾರಣ ಆದ್ದರಿಂದ ಇಂದು ಕೂಡ್ಲಿಗಿಯಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿದರು

ಕೂಡ್ಲಿಗಿ ಕೊತ್ತಲ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಲ್ಲಿಂದ ತೆರೆದ ವಾಹನದಲ್ಲಿ ಸಮಳ ಕಹಳೆ ಡ್ರಮ್ ಸೆಟ್ ಮುಂತಾದ ಕಲಾತಂಡಗಳಿಂದ ವಾದ್ಯಗೋಷ್ಠಿ ಮುಳುಗುತ್ತಾ ಹೂಮಳೆ ಬರೆಯುತ್ತಾ ನೂರಾರು ಕಾರ್ಯಕರ್ತರ ದೊಂಡು ಪ್ರಮುಖ ಬೀದಿಗಳಿಂದ ಮೆರವಣಿಗೆ ಮೂಲಕ ಪ್ರವಾಸ ಮಂದಿರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶಾಸಕರಿಗೆ ಪಕ್ಷದ ಕಾರ್ಯಕರ್ತರು ಜನಪ್ರತಿನಿಧಿಗಳು ಬೆಳ್ಳಿ ಕಿರೀಟ ಬೆಳ್ಳಿ ವಿಗ್ರಹ ನೀಡಿ ಹಾರ ಹಾಕಿ ಶಾಲು ವದಿಸುವುದರ ಮೂಲಕ ಪಕ್ಷದ ಕಾರ್ಯಕರ್ತರು ಜನಪ್ರತಿನಿಧಿಗಳು ಮುಖಂಡರು ರೈತ ಸಂಘಟನೆಗಳು ಹಾಗೂ ವರದಿಗಾರರು ಸ್ವಾಗತಿಸಿ ಸನ್ಮಾನಿಸಿದರು..

ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಮಾತನಾಡಿ ಸುಳ್ಳುಗಳನ್ನು ಹೇಳಿ ಸುಳ್ಳು ಭರವಸೆಗಳನ್ನು ನೀಡಿ ರಾಜಕೀಯ ಮಾಡುವುದು ನನ್ನ ಜಾಯಮಾನವಲ್ಲ ಕೈಗೆ ಸಿಗಲಾರದ ಆಕಾಶದಲ್ಲಿರುವ ನಕ್ಷತ್ರಗಳನ್ನ ತಂದುಕೊಡುವೆ ಎಂದು ಸುಳ್ಳು ಹೇಳಿ ಮತ ನೀಡಿದ ಮತದಾರರಿಗೆ ಮೋಸ ಮಾಡಿ ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ ಚುನಾವಣೆ ಸಂದರ್ಭದಲ್ಲಿ ಈ ಕ್ಷೇತ್ರದ ಜನರಿಗೆ ಕೊಟ್ಟಮಾತಿನಂತೆ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುವೆ ಎಂದು ನಾನು ಮಾತು ಕೊಟ್ಟಿದ್ದೆ ಅದರಂತೆ ಇಂದು ನಮ್ಮ ಸರ್ಕಾರದ ಮುಖ್ಯಮಂತ್ರಿಗಳಾದ ಯಡಿಯೂರಪ್ಪಜಿ ಹಾಗೂ ಅವರ ಸಚಿವ ಸಂಪುಟವನ್ನು ಮನವೊಲಿಸಿ ನನ್ನ ಕ್ಷೇತ್ರದ ರೈತರಿಗೆ ಜನರಿಗೆ ಜೀವನಾಡಿಯಾದ ಜೀವಜಲವನ್ನು ಕೆರೆಗಳಿಗೆ ತರುವಲ್ಲಿ ಜಯ ಗಳಿಸಿದ್ದೇನೆ ಇದು ನನ್ ಒಬ್ಬರ ಗೆಲುವಲ್ಲ ಈ ಕ್ಷೇತ್ರದ ಪ್ರತಿಯೊಬ್ಬರ ಗೆಲುವು ಆದ್ದರಿಂದ ನಮ್ಮ ಸರ್ಕಾರದ ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟಕ್ಕೆ ನಾನು ಆಭಾರಿಯಾಗಿದ್ದೇನೆ ಅವರೆಲ್ಲರ ಸಹಕಾರದಿಂದ ಈ ಕ್ಷೇತ್ರದ ಜನರಿಗೆ ನುಡಿದಂತೆ ನಡೆದುಕೊಳ್ಳಲು ಸಾಧ್ಯವಾಗಿದ್ದು ಕೆರೆಗಳ ಪುನಶ್ಚೇತನ ಗೊಳಿಸಲು ಹೆಚ್ಚುವರಿಯಾಗಿ 40 ಕೋಟಿ ಹಣ ನೀಡಲು ಪ್ರಸ್ತಾವನೆ ಮಾಡಿದ್ದೇನೆ ಆದ್ದರಿಂದ ನನ್ನ ಗುರಿ ಕ್ಷೇತ್ರದ ಅಭಿವೃದ್ಧಿ ಪಥದ ಕಡೆ ಶಿಕ್ಷಣ ಆರೋಗ್ಯ ಕುಡಿಯುವ ನೀರು ರಸ್ತೆಗಳ ಅಭಿವೃದ್ಧಿ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲೂ ಪ್ರತಿಯೊಬ್ಬರಿಗೂ ಮೂಲಸೌಕರ್ಯಗಳ ಕಲ್ಪಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಈ ತಾಲೂಕಿನ ಜನ ಕೂಲಿ ಆರಿಸಿ ಬೇರೆ ಕಡೆ ವಲಸೆ ಹೋಗಬಾರದು ಎಂದು ಯೋಜನೆಯನ್ನು ಜಾರಿಗೆ ತರಲು
ಶ್ರಮ ಪಟ್ಟಿರುವೆ ತಾಲೂಕಿನ ಅಭಿವೃದ್ಧಿಗಾಗಿ ನಿಮ್ಮೊಂದಿಗೆ ಸದಾ ನಾನಿರುವೆ ಎಂದರು ಇದೇ ಸಂದರ್ಭದಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಉಚಿತವಾಗಿ ವಿತರಿಸಿದರು ಇದೇ ಸಂದರ್ಭದಲ್ಲಿ ಚನ್ನಬಸವನಗೌಡ ಬಿಜೆಪಿ ಜಿಲ್ಲಾ ಅಧ್ಯಕ್ಷರು ವೀರನಗೌಡ ಬಿಜೆಪಿ ಮುಖಂಡರು ಚನ್ನಪ್ಪ ಬಿಜೆಪಿ ಕೂಡ್ಲಿಗಿ ಮಂಡಲ ಅಧ್ಯಕ್ಷರು ಬಂಗಾರಿ ಹನುಮಂತ ಬಿಜೆಪಿ ಜಿಲ್ಲಾ ಮುಖಂಡರು ಮಂಜುನಾಥ ಬಿಜೆಪಿ ಮುಖಂಡರು ಭೀಮೇಶ್ ಬಿಜೆಪಿ ಮುಖಂಡರು ರೇವಣ್ಣ ಜಿಲ್ಲಾ ಪಂಚಾಯತಿ ಸದಸ್ಯರು ಕಾನಮಡುಗು ತಿಪ್ಪೇಸ್ವಾಮಿ ಜಿಲ್ಲಾ ಮುಖಂಡರು ಮಲ್ಲಿಕಾರ್ಜುನ ರಾಮದುರ್ಗ ಪಾಪಣ್ಣ ಬಿಜೆಪಿ ಮುಖಂಡರು ಮಂಜುನಾಥ್ ಬಿಜೆಪಿ ಮಂಡಲ ಕಾರ್ಯದರ್ಶಿಗಳು ಹುಡೆಮ್ ಪಾಪನಾಯಕ ತಾಲೂಕು ಪಂಚಾಯತಿ ಸದಸ್ಯರು ಸುನಿಲ್ ಗೌಡ ಬಿಜೆಪಿ ಮುಖಂಡರು ಪಟ್ಟಣ ಪಂಚಾಯತಿ ಸದಸ್ಯರು ತಾಲೂಕು ಪಂಚಾಯತಿ ಸದಸ್ಯರು ಜಿಲ್ಲಾ ಪಂಚಾಯಿತಿ ಸದಸ್ಯರು ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend