ರಾಜ್ಯ ಸರ್ಕಾರ ನಿರ್ದೇಶಿಸುವ ಮೊದಲೇ ಪರೀಕ್ಷೆಗಳನ್ನು ನಡೆಸುವ ವಿವಿ ನಿರ್ಧಾರಕ್ಕೆ ಕೈಬಿಡಿ ಎಐಡಿಎಸ್ಒ…!!!

Listen to this article

ರಾಜ್ಯ ಸರ್ಕಾರ ನಿರ್ದೇಶಿಸುವ ಮೊದಲೇ ಪರೀಕ್ಷೆಗಳನ್ನು ನಡೆಸುವ ವಿವಿ ನಿರ್ಧಾರಕ್ಕೆ ಕೈಬಿಡಿ ಎಐಡಿಎಸ್ಒ.

ಜುಲೈ 19ರಿಂದ ಹಿಂದಿನ 1,3, ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುತ್ತೇವೆ ಎಂಬ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದ್ದು, ಹಿಂದಿನ ಸೆಮಿಸ್ಟರ ನ ಪರೀಕ್ಷೆಗಳನ್ನು ನಡೆಸುವ, ವಿ ವಿ ಯ ನಿರ್ಧಾರವನ್ನು ಕೈಬಿಡಲು ಆಗ್ರಹಿಸಿ ಎಐಡಿಎಸ್ ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಒ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ರವಿಕಿರಣ್ ಜೆಪಿ ಮಾತನಾಡುತ್ತಾ ರಾಜ್ಯದಲ್ಲಿ ಕರೋನ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿ, ಲಾಕ್ ಡೌನ್ ಆಗಿದ್ದ ಸಮಯದಲ್ಲಿ ಹಿಂದಿನ ಸೆಮಿಸ್ಟರ್ನ ಪರೀಕ್ಷೆಗಳನ್ನು ನಡೆಸಬಾರದು, ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ 2,4,ಮತ್ತು 6ನೇ ಸೆಮಿಸ್ಟರ್ ಗೆ ಕಳಿಸಲಾಯಿತು,ಮತ್ತು ಕಳೆದ ಎರಡು ತಿಂಗಳಿನಿಂದ ಪ್ರಸ್ತುತ ಸೆಮಿಸ್ಟರ್ ಗಳ ಆನ್ಲೈನ್ ತರಗತಿಗಳು ಸಹ ನಡೆಸುತ್ತಿವೆ. ಸೆಮಿಸ್ಟರ್ ಪರೀಕ್ಷೆ ಕುರಿತು ಸರ್ಕಾರ ಯಾವುದೇ ನಿರ್ದಿಷ್ಟ ನಿರ್ಧಾರ ತೆಗೆದುಕೊಂಡಿಲ್ಲ ವೆಂದು ಹಾಗೂ ಈಗ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದೇ ಮುಖ್ಯ ಆಧ್ಯ ತೆ ಎಂದು ಹೇಳಿದ್ದಾಗಲೂ, ವಿ ವಿ ಯು ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.ಈಗ ಹಠಾತ್ತನೆ ಹಿಂದಿನ ಸೆಮಿಸ್ಟರ್ನ ಪರೀಕ್ಷೆಯನ್ನು ಜುಲೈ ಕೊನೆಯ ವಾರದಿಂದ ಆಗಸ್ಟ್ ಮೊದಲನೇ ವಾರದಲ್ಲಿ ಮುಗಿಸಿ, ನಂತರ ಸೆಪ್ಟೆಂಬರ್ ಒಳಗೆ ಪ್ರಸ್ತುತ ಸೆಮಿಸ್ಟರ್ ಪರೀಕ್ಷೆಯನ್ನು ಮುಗಿಸುವುದು, ವಿದ್ಯಾರ್ಥಿಗಳ ಮೇಲೆ ಅತೀವ ಒತ್ತಡ ಹೇರಿದಂತಾಗುತ್ತದೆ. ಹಾಗಾಗಿ 1,3,ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಕೈಬಿಟ್ಟು 2,4 ಮತ್ತು 6 ನೇ ಸೆಮಿಸ್ಟರ್ ನ ಪರೀಕ್ಷೆಗಳನ್ನಾದರೂ ಅಚ್ಚುಕಟ್ಟಾಗಿ ಮಾಡಬೇಕು. ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಕುರಳ್ಳಿ ರಾಜ ಮಾತನಾಡುತ್ತಾ “ಒಂದು ತಿಂಗಳಲ್ಲಿ 2 ಸೆಮಿಸ್ಟರ್ ಪರೀಕ್ಷೆ ನಡೆಸುವುದರ ಬಗ್ಗೆ ರಾಜ್ಯ ಸಮಿತಿ ನಡೆಸಿದ ಬೃಹತ್ ಗೂಗಲ್ ಸಮೀಕ್ಷೆಯಲ್ಲಿ ರಾಜ್ಯದ 48 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶೇಕಡ 91.7ರಷ್ಟು ವಿದ್ಯಾರ್ಥಿಗಳು ಅಂದರೆ 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರ್ನ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಒಕ್ಕೊರಲಿನಿಂದ ತಿಳಿಸಿದ್ದಾರೆ. AIDSOಅನೇಕ ಜನ ಶಿಕ್ಷಣ ತಜ್ಞರು, ಪ್ರಶುಪಾಲರು ಹಾಗೂ ಉಪನ್ಯಾಸಕರೊಂದಿಗೂ ಸಹ ವ್ಯಾಪಕ ಚರ್ಚೆ ನಡೆಸಿ ದೆ.ಈ ಹಿನ್ನೆಲೆಯಲ್ಲಿ ವಿವಿಯು ಶಿಕ್ಷಣತಜ್ಞರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾತಾಂತ್ರಿಕ ಚರ್ಚೆಗಳನ್ನು ನಡೆಸಿ, ಶೈಕ್ಷಣಿ ಕ,ವೇಳಾಪಟ್ಟಿ, ಪರೀಕ್ಷೆ, ಮೌಲ್ಯಮಾಪನ ಇವುಗಳ ಬಗ್ಗೆ ಒಂದು ವೈಜ್ಞಾನಿಕ ಪ್ರಜಾತಾಂತ್ರಿಕ ನೀತಿಯನ್ನು ರೂಪಿಸಬೇಕು.ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ 2 ಡೋಸ್ ಕರೋನ ಲಸಿಕೆ ನೀಡುವವವರೆಗೂ, ಆಫ್ಲೈನ್ ತರಗತಿ / ಪರೀಕ್ಷೆಗಳನ್ನು ನಡೆಸಬಾರದು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಗುರಳ್ಳಿ ರಾಜ.
ಜಿಲ್ಲಾ
ಕಾರ್ಯದರ್ಶಿಗಳು ರವಿಕಿರಣ್. ಜೆ.ಪಿ.
ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಈರಣ್ಣ, ಶಾಂತಿ,ಕಂಬಳಿ ಮಂಜುನಾಥ್, ಹಾಗೂ ಮತ್ತಿತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿ ಇವರಿಂದ. ಕೆ ಈರಣ್ಣ ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರು ಎಐಡಿಎಸ್ಒ ಬಳ್ಳಾರಿ .

 


ವರದಿಗಾರರು ಎಂ.ಎಲ್.ವೆಂಕಟೇಶ್
ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend