ಕೃಷಿ ಇಲಾಖೆಗೆ ಸಂಸದರಾದ ವೈ ದೇವೇಂದ್ರಪ್ಪ ಭೇಟಿ…!!!

Listen to this article

ಕೃಷಿ ಇಲಾಖೆಗೆ ಸಂಸದರಾದ ವೈ ದೇವೇಂದ್ರಪ್ಪ ಭೇಟಿ

 

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಬಳ್ಳಾರಿ ಲೋಕಸಭಾ ಸದಸ್ಯರಾದ ವೈ. ದೇವೇಂದ್ರಪ್ಪ ಭೇಟಿ ನೀಡಿ ತೊಗರಿ ಬೀಜವನ್ನು ರೈತರ ಸಂಪರ್ಕ ಕೇಂದ್ರ ರೈತರಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರಗಳನ್ನು ಸಮರ್ಪಕವಾಗಿ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇವರಿಗೆ ರೈತಸಂಪರ್ಕ ಕೇಂದ್ರದಿಂದ ರೈತರಿಗೆ ವಿತರಣೆ ಆಗಿರುವ ಬಿತ್ತನೆ ಬೀಜಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೃಷಿ ಇಲಾಖೆ ಯ ಯೋಜನೆಗಳ ಬಗ್ಗೆ ಸಮರ್ಪಕವಾಗಿ ಬಳಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.
ರೈತ ಸಂಪರ್ಕ ಕೇಂದ್ರಕ್ಕೆ ಬರುವ ಎಲ್ಲಾ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಅತಿದೊಡ್ಡ ಹೋಬಳಿ ಹೊಸಹಳ್ಳಿ ಹೋಬಳಿ ಯಾಗಿದ್ದು ಹೊಸಹಳ್ಳಿ ಗ್ರಾಮದಲ್ಲಿ ರುದ್ರಭೂಮಿ ಇಲ್ಲ ಎಂದು ಗ್ರಾಮದ ರೈತ ಮುಖಂಡರು ತಿಳಿಸಿದರು ನಂತರ ಗ್ರಾಮದ ರುದ್ರಭೂಮಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಎಂ. ಹೊನ್ನೂರಪ್ಪ ಮಾತನಾಡಿ ರೈತರಿಗೆ ಸೂರ್ಯಕಾಂತಿ ಬಿತ್ತನೆ ಮಾಡಿರುವ ರೈತರಿಗೆ ಬೀಜ ಮೊಳಕೆ ಬರದ ಕಾರಣ ರೈತರಿಗೆ ನಷ್ಟ ಹೊಂದಿದ್ದು ರೈತರಿಗೆ ಬೀಜ ವಿತರಿಸಿದರೆ ಸಾಲದು ರೈತರಿಗೆ ಬಿತ್ತನೆ ಮಾಡಿದ ಬಾಡಿಗೆ ಪರಿಹಾರ ಕೊಡಿಸಬೇಕೆಂದು ಸಂಸದರಲ್ಲಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೀಲಮ್ಮ ಬೊಮ್ಮಣ್ಣ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬೋರಪ್ಪ. ನೇತೃತ್ವದಲ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ವಿಶೇಷ ಅನುದಾನ ನೀಡಬೇಕೆಂದು ಸಂಸದರಲ್ಲಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಾದ ಚೈತ್ರ. ಮಾನಸ. ರಾಕೇಶ್. ಮುಖಂಡರುಗಳಾದ ಬಿಜೆಪಿ ಮಂಡಲದ ಅಧ್ಯಕ್ಷರಾದ ಕೆ ಚನ್ನಪ್ಪ. ಸಕಲಾಪುರದಹಟಿ ಬಾಲಪ್ಪ. ಕೆ ಸುಭಾಷ್ ಚಂದ್ರ, ನಾಗೇಶ್ ಟಿಪಿ. ಜಯಣ್ಣ. ಗ್ರಾಮ ಪಂಚಾಯತಿ ಸದಸ್ಯರಾದ ಪೀತಾಂಬರ. ಜಯಣ್ಣ ಕಾನಾಮಡುಗು, ಕುಲುಮೆ ಹಟ್ಟಿ ವೆಂಕಟೇಶ್, ಸಣ್ಣ ರುದ್ರಪ್ಪ, ತೋಪಿನ ಬೊಮ್ಮಣ್ಣ, ಮಾರಪ್ಪ ಅಂಬಳೆ, ಸಣ್ಣ ನಾಗರಾಜ, ಅನೇಕ ರೈತರು ಸೇರಿ ಉಪಸ್ಥಿತರಿದ್ದರು.

ವರದಿ ಕೆ ಎಸ್ ವೀರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend