ಕುಲುಮೆ ಬೆಂಕಿ ನಂದಿಸಿದ ಕೊರೊನಾ…!!!

Listen to this article

ಎಚ್ಚರಿಕೆ ಪತ್ರಿಕೆಯ ವಿಶೇಷ ವರದಿ

ಕುಲುಮೆ ಬೆಂಕಿ ನಂದಿಸಿದ ಕೊರೊನಾ

ಪಾರಂಪರಿಕ ಕುಲಕಸುಬುಗಳನ್ನು ಮುಂದುವರಿಸುವರು ಸಂಖ್ಯೆ ಇಂದು ಬಹಳ ಕಡಿಮೆ. ಏಕೆಂದರೆ ಇದರಿಂದ ಜೀವನ ನಿರ್ವಹಣೆ ಕಷ್ಟವೆಂದು ಹರಿತ ಬಹುತೇಕ ಮಂದಿ ಅನ್ಯ ಕೆಲಸಗಳಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಶಿಕ್ಷಣ ಪಡೆದು ಉದ್ಯೋಗದ ನಿಮಿತ್ತ ನಗರಗಳಲ್ಲಿ ವಲಸೆ ಹೋಗಿದ್ದಾರೆ. ಇದರ ನಡುವೆಯೂ ಕೆಲವರು ಕುಲಕಸುಬನ್ನು ಮುಂದುವರಿಸುತ್ತಿದ್ದಾರೆ. ಈ ಪೈಕಿ ಕಮ್ಮಾರ ಸಮುದಾಯ ಕೂಡ ಒಂದು. ಆದರೆ ಇವರ ಬದುಕು ಕೊರೋನಾ ಅವಳಲ್ಲಿ ಕೊನೆಯೊಳಗಿನ ಕಾದ ಕಬ್ಬಿಣದ ಸಲಾಕೆಯಂಥ ಆಗಿದೆ

ಕಾಲ ಬಂದಂತ ವ್ಯವಸಾಯದ ಸಾಮಗ್ರಿಗಳು ಬದಲಾಗುತ್ತಾ ಸಾಗಿದ್ದರಿಂದ ಕಮ್ಮಾರ ಸಮುದಾಯದ ಒಂದಷ್ಟು ಜನ ಕುಲಕಸುಬಿಗೆ ವಿದಾಯ ಹೇಳಿ ಬದುಕಿನ ಮಾರ್ಗವನ್ನೇ ಬದಲಿಸಿಕೊಂಡಿದ್ದಾರೆ. ಆದರೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವ್ಯವಸಾಯಕ್ಕೆ ಅಗತ್ಯವಾದ ಕಬ್ಬಿಣದ ಸಾಮಗ್ರಿಗಳನ್ನು ತಯಾರಿಸಿ ಕೊಡುವ ಕಂಬಾರರು ತಮ್ಮ ಜೀವನಕ್ಕೆ ಆಧಾರವಾದ ಕುಲುಮೆ ಗಳನ್ನು ಉಳಿಸಿಕೊಂಡಿದ್ದಾರೆ. ಆದರೆ ಈಗ ಬರೋಣ ಆತಂಕ ಕುಲುಮೆಯ ಬೆಂಕಿಗೆ ತಣ್ಣೀರು ಸುರಿದಿದೆ.

ಪ್ರತಿವರ್ಷ ಮೇ ತಿಂಗಳ ಅಂತ್ಯದಲ್ಲಿ ಮೋಡ ಕವಿದ ವಾತಾವರಣ ದೊಂದಿಗೆ ಭಾರಿ ಗಾಳಿ-ಮಳೆ ಆರಂಭವಾಗಿ ಮುಂಗಾರಿನ ಮುನ್ಸೂಚನೆ ನೀಡುತ್ತದೆ. ರೈತರು ಭೂಮಿಯನ್ನು ಹಸನು ಮಾಡಿಕೊಳ್ಳಲು ಮುಂದಾಗುತ್ತಾರೆ. ಕಮ್ಮಾರರು ಕುಲುಮೆ ಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ ಕಳೆದ ಬಾರಿಗಿಂತ ಈ ವರ್ಷ ತಾಲೂಕಿನಲ್ಲಿ ಭರಣಿ ಮಳೆ ಭರವಸೆ ಮೂಡಿಸಿ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಕಮ್ಮಾರರು ನೇಗಿಲು, ಎಡೆಕುಂಟೆ, ಕೂಡ, ಕೊಳ ಬಿತ್ತನೆಯ ಅಗತ್ಯವಾದ ಕಬ್ಬಿಣದ ಎಲ್ಲಾ ಪರಿಕರಗಳನ್ನು ತಯಾರಿಸಿ ಕೊಡುವಲ್ಲಿ ನಿರತರಾಗಿರುವ ಬೇಕಾಗಿತ್ತು. ಆದರೆ ಈ ಬಾರಿ ಕೊರೋನಾ ಅವರನ್ನು ಕಟ್ಟಿಹಾಕಿದೆ.
ಗ್ರಾಮೀಣ ಭಾಗದಲ್ಲಿ ಅತಿ ಬೇಡಿಕೆಯ ವರ್ಗ ಅವರಿಗೆ ಹಿಂದಿನ ಕಾಲದಲ್ಲಿ ಗ್ರಾಮದ ಪ್ರತಿಯೊಬ್ಬ ರೈತರು ದವಸ-ಧಾನ್ಯಗಳನ್ನು ದಾನವಾಗಿ ನೀಡಿದ್ದರು. ಅಗತ್ಯ ಪರಿಕರಗಳನ್ನು ಮಾಡಿಕೊಡುತ್ತಿದ್ದ ರಿಂದ ರೈತರು ಕೊಟ್ಟಷ್ಟು ದಾನ ಪಡೆದು ಜೀವನ ಸಾಗಿಸುತ್ತಿದ್ದರು ಈಗ ಈ ಪರಿಸ್ಥಿತಿಯಲ್ಲಿ ಇಲ್ಲ. ಮಾರುಕಟ್ಟೆಯಲ್ಲಿ ಆಧುನಿಕ ಪರಿಕರಗಳು ಸಿಗುವುದರಿಂದ ಪಾರಂಪರಿಕ ಕಸುಬಿಗೆ ಹೊಡೆತ ಬಿದ್ದಿದೆ,

ಕುಲಕಸುಬಿಗೆ ಹೊಡೆತ
ಇತ್ತೀಚಿಗೆ ಬಿತ್ತನೆಗಾಗಿ ಆಧುನಿಕ ಯಂತ್ರಗಳನ್ನು ಮಾರುಕಟ್ಟೆಗಳಲ್ಲಿ ಲಗ್ಗೆಯಿಟ್ಟಿವೆ.
ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಬೇಸಾಯದ ಪದ್ಧತಿಯೂ ಬದಲಾಗುತ್ತದೆ ಹಾಗಾಗಿ ಗ್ರಾಮೀಣ ಭಾಗದ ಕಮ್ಮಾರರಿಗೆ ಅಷ್ಟೇನೂ ಕೆಲಸ ಇಲ್ಲದಂತಾಗಿದೆ. ಸರ್ಕಾರವೇ ಕೃಷಿ ಇಲಾಖೆಯಲ್ಲಿ ಬೇಸಾಯಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ನೀಡುತ್ತಿದೆ. ಅಲ್ಲದೆ ಪಟ್ಟಣದ ಅಂಗಡಿಗಳಲ್ಲಿ ಸಿಗುತ್ತವೆ ಹಾಗಾಗಿ ಕಮ್ಮಾರರ ಕುಲಕಸುಬಿಗೆ ದೊಡ್ಡದಿದೆ.

ವರದಿ. ವಿರೇಶ್, ಕೆ, ಎಸ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend