3.5ಪ್ಯಾಟ್ ಬರಲಿಲ್ಲ ಎಂದು ವಾಪಸು ಕಳುಹಿಸಿದ ಲಕ್ಕವನಹಳ್ಳಿ ಬಿ ಎಂ ಸಿ ಹಾಲು ಸಂಗ್ರಹಣಾ ಕೇಂದ್ರದವರು. ಹಾಲನ್ನು ರಸ್ತೆಗೆ ಚೆಲ್ಲಿದ ರೈತ…!!!

Listen to this article

3.5ಪ್ಯಾಟ್ ಬರಲಿಲ್ಲ ಎಂದು ವಾಪಸು ಕಳುಹಿಸಿದ ಲಕ್ಕವನಹಳ್ಳಿ ಬಿ ಎಂ ಸಿ ಹಾಲು ಸಂಗ್ರಹಣಾ ಕೇಂದ್ರದವರು. ಹಾಲನ್ನು ರಸ್ತೆಗೆ ಚೆಲ್ಲಿದ ರೈತ

ಹಿರಿಯೂರು ತಾಲೂಕು ಲಕ್ಕವ್ವನಹಳ್ಳಿಯ ಬಿಎಂಸಿ ಹಾಲು ಸಂಗ್ರಹಣ ಕೇಂದ್ರದಲ್ಲಿ ಸುಮಾರು 250 ಲೀಟರ್ ನಷ್ಟು ಹಾಲನ್ನು 3.5 ಡಿಗ್ರಿ ಪ್ಯಾಟ್ ಬರಲಿಲ್ಲ ಎಂದು ವಾಪಸ್ಸು ಕಳಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಏನು ಮಾಡುವುದು ಎಂದು ತಿಳಿಯದೆ ರೈತರು ಆಕ್ರೋಶ ಭರಿತರಾಗಿ ಚರಂಡಿಗೆ ಚೆಲ್ಲಿರುವ ಘಟನೆ ನಡೆದಿದೆ.
ಲಾಕ್ ಡೌನ್ ಪ್ರಯುಕ್ತ ಹಾಲು ಮಾರಾಟವಾಗದೆ ಉಳಿದಿರುವುದರಿಂದ ಕೆಎಂಎಫ್ ನವರು ರೈತರಿಂದ ಖರೀದಿಸುವ ಹಾಲಿನ ಡಿಗ್ರಿ ಅನ್ನು 3.5 ಗಿಂತ ಕಡಿಮೆ ಇರುವುದು ಎಂದು ವಾಪಸ್ ಕಳಿಸುತ್ತಿದ್ದಾರೆ. ಬೇಸಿಗೆಕಾಲವಾಗಿರುವುದರಿಂದ ಅತಿಯಾದ ಬಿಸಿಲಿನಿಂದ ಹಸುಗಳ ದೇಹದಲ್ಲಿ ಪ್ಯಾಟ್ ಅಂಶ ಕಡಿಮೆಯಾಗುತ್ತದೆ. ಇದೇ ಒಂದು ಕಾರಣವನ್ನು ಮುಂದಿಟ್ಟುಕೊಂಡು ಕೆಎಂಎಫ್ ನವರು ಈಗಾಗಲೇ ಬೆಂದು ಬಳಲಿ ಬೆಂಡಾಗಿರುವ ರೈತ ಸಮೂಹದ ಮೇಲೆ ಗದಾಪ್ರಹಾರ ಮಾಡುವುದು ಖಂಡನೀಯ. ವರ್ಷಪೂರ್ತಿ ಉತ್ತಮವಾದ 4.1 ಕ್ಕಿಂತ ಹೆಚ್ಚಿರುವ ಹಾಲನ್ನು ಸರಬರಾಜು ಮಾಡುತ್ತಾರೆ ಬೇಸಿಗೆಯಲ್ಲಿ ಒಂದು ಒಂದುವರೆ ತಿಂಗಳು ಈ ರೀತಿಯಾಗುತ್ತದೆ, ಇದನ್ನು ಸರಿದೂಗಿಸಿಕೊಳ್ಳಬೇಕಾದ ಜವಾಬ್ದಾರಿ ಕೆಎಂಎಫ್ ಸಂಸ್ಥೆಗೆ ಸೇರಿದೆ. ವರ್ಷಪೂರ್ತಿ ಲಾಭಗಳಿಸಿ ಒಂದೂವರೆ ತಿಂಗಳಲ್ಲಿ ಆಗುವ ವಾತಾವರಣದ ತೊಂದರೆಗೆ ರೈತರನ್ನು ಬಲಿಪಶು ಮಾಡುವುದು ಎಷ್ಟು ಸರಿ ಎಂಬುದು ರೈತರ ವಾದವಾಗಿದೆ.
ಈ ಘಟನೆಯಿಂದ ನೊಂದ ರೈತ ಲಕ್ಕವಳ್ಳಿ ಸುಂದರ ಹಾಲು ಚೆಲ್ಲಿ ಪ್ರತಿಭಟಿಸಿದ್ದಾರೆ.

ವರದಿ.ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend