ಹರಪನಹಳ್ಳಿ; ಗೌಳೇರಹಟ್ಟಿ ಗ್ರಾಮದಲ್ಲಿ ಭೂಕುಸಿತ, ಆತಂಕ…!!!

Listen to this article

ಹರಪನಹಳ್ಳಿ; ಗೌಳೇರಹಟ್ಟಿ ಗ್ರಾಮದಲ್ಲಿ ಭೂಕುಸಿತ, ಆತಂಕ

ಹರಪನಹಳ್ಳಿ: ತಾಲ್ಲೂಕಿನ ಗೌಳೇರಹಟ್ಟಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಉಮಾ ಅವರ ಮನೆಯ ಮುಂದೆ ಶನಿವಾರ ಭೂಕುಸಿತ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ.

ಮನೆಯ ಮುಂದಿನ ಅಂಗಳದಲ್ಲಿ ಇದ್ದಕ್ಕಿದ್ದಂತಿಯೇ ಭೂಕುಸಿತವಾಗಿದೆ. ಭೂಕುಸಿತ ಸಂಭವಿಸಿದ ಸಂದರ್ಭದಲ್ಲಿ ಆ ಸ್ಥಳದಲ್ಲಿ ಯಾರು ಇಲ್ಲದಿದ್ದ ಪರಿಣಾಮ ಯಾವ ಅಪಾಯವೂ ಸಂಭವಿಸಿಲ್ಲ. ಈ ಹಿಂದೆ ಹೈಬ್ರೀಡ್ ಜೋಳಕ್ಕೆ ಹುಳು ಬಾಧೆ ತಗಲಿದಿರಲಿ ಎಂಬ ಹಿನ್ನೆಲೆಯಲ್ಲಿ ಭೂಮಿಯಲ್ಲಿ ಹಗೆ ತೆಗೆದು ಅದಕ್ಕೆ ತುಂಬಿ ಬೇಕಾದಾಗ ಹೊರತೆಗೆಯುತ್ತಿದ್ದರು. ಈಗ ಅವು ಕಣ್ಮರೆಯಾಗಿದ್ದು, ಹಳೆಯ ಪಾಳು ಹಗೆ ಆ ಜಾಗದಲ್ಲಿ ಇರಬಹುದೇ? ಇಲ್ಲವೇ; ಕಳೆದ ವಾರದಿಂದಲೂ ಸುರಿಯುತ್ತಿರುವ ಮಳೆ ಹಾಗೂ ಈಚೆಗೆ ಸುರಿದ ಕುಂಭದ್ರೋಣ ಮಳೆಯ ಪರಿಣಾಮ ಭೂಮಿ ಕುಸಿದಿರಬಹುದೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಭೂಕುಸಿತ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತಿಯೇ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಫಣಿಯಾಪುರ ಲಿಂಗರಾಜ ಅವರು, ತಕ್ಷಣ ಚಟ್ನಿಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಪ್ಪ ಅವರನ್ನು ಸಂಪರ್ಕಿಸಿದ್ದಾರೆ. ಜತೆಗೆ, ಜೆಸಿಬಿ ಯಂತ್ರದ ಮೂಲಕ ಕುಸಿತವಾದ ನೆಲವನ್ನು ಅಗೆಯುತ್ತಿದ್ದಂತಿಯೇ ಒಳಭಾಗದಲ್ಲಿ ನೀರು ರಭಸವಾಗಿ ಹರಿಯಲು ಆರಂಭಿಸಿದೆ. ಕೊನೆಯ ಕಲ್ಲು ಹಾಗೂ ಮಣ್ಣುಹಾಕಿ ಕುಸಿತವಾದ ನೆಲವನ್ನು ಸಮತಟ್ಟು ಮಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮನೆಯ ಮಾಲೀಕರಾದ ಕಾರ್ಯಕರ್ತೆ ಉಮಾ ಅವರ ಕುಟುಂಬವನ್ನು ತಾತ್ಕಾಲಿಕವಾಗಿ ಸ್ಥಳಾಂತರವಾಗಲು ಸೂಚಿಸಲಾಗಿದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend